WhatsApp Group
Join Now
ಶಿವಮೊಗ್ಗ : ಹೊಸನಗರದ ಶ್ರೀ ರಾಮಚಂದ್ರಾಪುರ ಮಠದಲ್ಲಿ ಸೋಮವಾರ 28/02/2022 ರಂದು ನಡೆದ “ಸೋಮ-ಸಪರ್ಯಾ” ಕಾರ್ಯಕ್ರಮಕ್ಕೆ ಗೃಹಮಂತ್ರಿ ಶ್ರೀ ಅರಗ ಜ್ಞಾನೇಂದ್ರ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಶ್ರೀ ಸಿ ಟಿ ರವಿ, ಆರ್ ಎಸ್ ಎಸ್ {RSS} ಪ್ರಮುಖರಾದ ಶ್ರೀ ಕಲ್ಲಡ್ಕ ಪ್ರಭಾಕರ ಭಟ್, ಹೊರನಾಡು ದೇವಾಲಯದ ಧರ್ಮದರ್ಶಿಗಳಾದ ಶ್ರೀ ಭೀಮೆಶ್ವರ ಜೋಯ್ಸರು, ಸ್ಥಳೀಯ ಶಾಸಕರಾದ ಶ್ರೀ ಹರತಾಳು ಹಾಲಪ್ಪ, ಕುಂದಾಪುರದ ಶಾಸಕರಾದ ಶ್ರೀ ಸುಕುಮಾರ ಶೆಟ್ಟಿ ಹಾಗೇ ಇನ್ನೂ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹೊಸನಗರದ ಮಹಾನಂದಿ ಗೋಲೋಕದಲ್ಲಿ ಇರುವ ಗೋವರ್ಧನ ಗಿರಿಧಾರಿಯ ಅದ್ಭುತ ಶಕ್ತಿ ಏನು ಗೊತ್ತಾ?
ಸೋಮವಾರದ ಪ್ರದೋಷ ಕಾಲದಲ್ಲಿ ಶ್ರೀರಾಮಚಂದ್ರಾಪುರಮಠದ ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರಿಂದ ಪರಮೇಶ್ವರನ ಆರಾಧನೆ, “ಸೋಮ – ಸಪರ್ಯಾ”. ಲೋಕ ಕಲ್ಯಾಣದ ಮಹಾಸಂಕಲ್ಪದೊಂದಿಗೆ ರುದ್ರದೇವನ ಪ್ರೀತ್ಯರ್ಥ ಸಹಸ್ರಾಧಿಕ ರುದ್ರ ಪಾಠಕರಿಂದ ಶ್ರೀರುದ್ರಪಠಣ ನೆರವೇರಿತು.
ಶಿವಗುರುಪರಿಚರ್ಯೆಯ ಪಾವನ ಅವಸರವಿದು, ಪ್ರದೋಷಕಾಲದಲ್ಲಿ ಪರಮೇಶ್ವರನ ಆರಾಧನಾ ಪ್ರಕಲ್ಪ; ಲೋಕಕಲ್ಯಾಣದ ಸಂಕಲ್ಪದಲ್ಲಿ.