ಏಕರೂಪ ನಾಗರಿಕ ಸಂಹಿತೆ ಜಾರಿಗೆ ತನ್ನಿ. ಕೇಂದ್ರಕ್ಕೆ ದಿಲ್ಲಿ ಹೈಕೋರ್ಟ್ ಸೂಚನೆ
ಬದಲಾಗುತ್ತಿರುವ ಸನ್ನಿವೇಶಕ್ಕೆ ತಕ್ಕಂತೆ ಕಾನೂನು ಬೇಕಿದೆ ಆದಕಾರಣ ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಅಗತ್ಯ ಇದೆ ಅಂತ ದಿಲ್ಲಿ ಹೈಕೋರ್ಟ್ ಸರ್ಕಾರಕ್ಕೆ ಸೂಚನೆಯನ್ನು ನೀಡಿದೆ.
ಕೋರ್ಟ್ ಹೇಳಿದ್ದೇನು?
* ಆಧುನಿಕ ಭಾರತದ ಸಮಾಜ ಹಂತಹಂತವಾಗಿ ಏಕರೂಪ ವಾಗುತ್ತಿದೆ * ಧಾರ್ಮಿಕ, ಸಾಮುದಾಯಿಕ, ಜಾತಿ, ಸಾಂಪ್ರದಾಯಿಕ ತಡೆ ನಶಿಸುತ್ತಿದೆ * ಬದಲಾದ ಸನ್ನಿವೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಅಗತ್ಯವಾಗಿದೆ * ನಾನಾ ರೀತಿಯ ವೈಯಕ್ತಿಕ ಕಾನೂನುಗಳಿಂದ ಸಮಸ್ಯೆ ಉಂಟಾಗುತ್ತಿದೆ * ಏಕರೂಪ ಸಂಹಿತೆ ಜಾರಿಗೆ ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕಾಗಿದೆ
ಹಿಂದೂ, ಕ್ರೈಸ್ತ, ಮುಸ್ಲಿಂ, ಪಾರ್ಸಿ ಎಲ್ಲ ಧರ್ಮಗಳ ಜನರ ವಿವಾಹ, ವಿಚ್ಛೇದನ, ದತ್ತು, ವಂಶಪಾರಂಪರ್ಯ, ಉತ್ತರಾಧಿಕಾರ ಮೊದಲಾದ ವಿಷ್ಯದಲ್ಲಿ ಇದೀಗ ನಾನಾ ರೀತಿಯ ಕಾನೂನು ಜಾರಿಯಲ್ಲಿದೆ ಅದನ್ನು ಕೈಬಿಟ್ಟು, ಎಲ್ಲ ಜಾತಿ ಧರ್ಮಗಳಿಗೆ ಒಂದೇ ಕಾನೂನು ಅನ್ವಯ ಆಗುವಂತೆ ಮಾಡೋದೇ ಏಕರೂಪ ನಾಗರಿಕ ಸಂಹಿತೆ.