ಇಂಟರ್ನೆಟ್ ಇಲ್ಲದೆ UPI ಪೇಮೆಂಟ್ ಮಾಡಬಹುದು | UPI 123 Pay
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ [RBI] ಗವರ್ನರ್ ಆಗಿರುವ ಶಕ್ತಿಕಾಂತ ದಾಸ್ ಅವರು ಮಾರ್ಚ್ 8 ನೇ ತಾರೀಖಿನಂದು ಹೊಸ ಸೇವೆಯನ್ನ ಪ್ರಾರಂಭಿಸಿದ್ದಾರೆ. ಇದು ಸಾಮಾನ್ಯ ಮೊಬೈಲ್ ಫೋನ್ ಬಳಕೆದಾರರಿಗೆ ಸುರಕ್ಷಿತವಾಗಿ ಡಿಜಿಟಲ್ ಮುಖಾಂತರ ಹಣವನ್ನು ವರ್ಗಾವಣೆ ಮಾಡಲು ಅನುವು ಮಾಡಿಕೊಡಲಿದೆ. UPI 123 PAY ಎಂಬ ಈ ಸೇವೆಯ ಮೂಲಕ ಇಂಟರ್ನೆಟ್ ಸಂಪರ್ಕವನ್ನು ಹೊಂದಿರುವ ಜನರು ಪೇಮೆಂಟ್ ಅನಾ ಮಾಡಬಹುದಾಗಿದೆ. ಹಾಗೆಯೇ ಈ ಸೇವೆಯು ಸಾಮಾನ್ಯ ಫೋನ್ ಗಳಲ್ಲಿ ಕೂಡ ಲಭ್ಯವಿದೆ.
ಈಗಿನವರೆಗೂ ಕೂಡ ಯುಪಿಐ ಸೇವೆಗಳು ಕೇವಲ ಸ್ಮಾರ್ಟ್ ಫೋನ್ ಗಳಲ್ಲಿ ಲಭ್ಯವಿದೆ. ಆದಕಾರಣ ಸಮಾಜದ ಎಲ್ಲ ಜನರಿಗೂ ಈ ಸೇವೆಯನ್ನು ಬಳಸಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಗ್ರಾಮೀಣ ಪ್ರದೇಶದ ಜನರಿಗೆ ಬಳಸಲು ಸಾಧ್ಯವಾಗ್ತಾ ಇಲ್ಲ ಅಂತ ಹೇಳಿ ತಿಳಿಸಿದ್ದಾರೆ. 2021 ಹಾಗೂ 22ರ ಆರ್ಥಿಕ ವರ್ಷದಲ್ಲಿ ಇದುವರೆಗೆ UPI ವಹಿವಾಟು 76 ಲಕ್ಷ ಕೋಟಿ ರೂಪಾಯಿನ ತಲುಪಿದ್ದು ಹಿಂದಿನ ವರ್ಷ ಇದು ಕೇವಲ 41 ಲಕ್ಷ ಕೋಟಿ ರೂಪಾಯಿ ಆಗಿತ್ತು. ಹಾಗೆ ಮುಂದಿನ ದಿನಗಳಲ್ಲಿ ಇದು ನೂರು ಲಕ್ಷ ಕೋಟಿ ತಲುಪುವುದರಲ್ಲಿ ಅನುಮಾನವೇ ಇಲ್ಲ ಅಂತ ಹೇಳಿ ಶಕ್ತಿಕಾಂತ ದಾಸ್ ಅವರು ತಿಳಿಸಿದ್ದಾರೆ.
ಒಂದು ಅಂದಾಜು ಮಾಹಿತಿಯ ಪ್ರಕಾರ ದೇಶದಲ್ಲಿ ಸುಮಾರು 400 ಮಿಲಿಯನ್ ಗೂ ಅಧಿಕ ಫೋನ್ ಬಳಕೆದಾರರು ಮೊಬೈಲ್ನಲ್ಲಿ ಸಾಮಾನ್ಯವಾದ ಫೀಚರ್ಸ್ ಗಳನ್ನು ಹೊಂದಿದ್ದಾರೆ. ಪ್ರಸ್ತುತ USSD ಆಧಾರಿತ ಸೇವೆಗಳ ಮೂಲಕ ಯುಪಿಐ ಸೇವೆಗಳು ಬಳಕೆದಾರರಿಗೆ ಸಿಗುತ್ತದೆ. ಆದರೆ ಇದು ತುಂಬಾ ತೊಡಕಾದ ವ್ಯವಸ್ಥೆಯಾಗಿತ್ತು ಹಾಗೆಯೇ ಎಲ್ಲ ಮೊಬೈಲ್ ಆಪರೇಟರ್ಗಳು ಇಂತಹ ಸೇವೆಗಳನ್ನು ಅನುಮತಿಸಿದ ಇರಲಿಲ್ಲ ಅಂತ ಹೇಳಿದ್ರು.
RBI ಹೇಳಿದ ಪ್ರಕಾರ ಈ ನಾಲ್ಕು ತಾಂತ್ರಿಕ ಆಯ್ಕೆಗಳ ಆಧಾರದ ಮೇಲೆ ಅಶ್ವಿನಿಯ ವಹಿವಾಟುಗಳನ್ನು ನಡೆಸಬಹುದು.
1. ಕರೆಮಾಡುವ ಸಂಖ್ಯೆಗಳು [ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್] IVR
2. ಹೊಸ ಫೀಚರ್ಸ್ ಫೋನ್ ಗಳಲ್ಲಿ ಅಪ್ಲಿಕೇಶನ್ ಕಾರ್ಯನಿರ್ವಹಣೆಯ ವಿಧಾನ
3. ಮೀಸಲು ಕಾಲ್ ಆಧಾರಿತ ವಿಧಾನ
4. ಸಾಮಿಪ್ಯ ಧ್ವನಿ ಆಧಾರಿತ ಪಾವತಿ ವಿಧಾನಗಳು ಶಾಮೀಲಾಗಿದೆ.
ಈ ಸೇವೆಯನ್ನು ಬಳಸಿಕೊಂಡು ಜನರು ಯಾರಿಗೆ ಬೇಕಾದರೂ ಹಣವನ್ನು ವರ್ಗಾವಣೆ ಮಾಡಬಹುದು. ಕರೆಂಟ್ ಬಿಲ್, ವಾಹನಗಳ ಪಾಸ್ಟ್ಯಾಗ್, ಮೊಬೈಲ್ ರೀಚಾರ್ಜ್ ಹಾಗೆ ಬೇರೆ ಬೇರೆ ಸೇವೆಗಳನ್ನು ಗ್ರಾಹಕರು ಪಡೆಯಲಿದ್ದಾರೆ ಅಂತ ಆರ್ಬಿಐ ಮಾಹಿತಿನ ತಿಳಿಸಿದೆ.