
ಸರಿಗಮಪ ಖ್ಯಾತಿಯ ಗಾಯಕಿ ಪೃಥ್ವಿ ಭಟ್ (Prithwi Bhat) ಅವರು ಪ್ರೀತಿಯ ವಿವಾಹವಾಗಿ ಮನೆಯಿಂದ ಓಡಿಹೋಗಿದ್ದಾರೆ ಎಂದು ತಿಳಿದುಬಂದಿದೆ. ಜೀ ಕನ್ನಡ (Zee kannada) ವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಭಿಷೇಕ್ ಎಂಬುವವರೊಂದಿಗೆ ದೇವಾಲಯದಲ್ಲಿ ವಿವಾಹವಾದ ನಂತರ ಅವರು ಮನೆಯವರಿಗೆ ತಿಳಿಸದೆ ತೆರಳಿದ್ದಾರೆ ಎಂದು ಪೃಥ್ವಿ ಭಟ್ ಅವರ ತಂದೆ ಶಿವಪ್ರಸಾದ್ ಬೇಸರ ವ್ಯಕ್ತಪಡಿಸಿದ್ದಾರೆ.
“ನನ್ನ ಮಗಳು ಆತನನ್ನು ಮದುವೆಯಾಗುವುದಿಲ್ಲ ಎಂದು ದೇವರ ಮುಂದೆ ಪ್ರಮಾಣ ಮಾಡಿದ್ದಳು. ಆದರೆ, ಯಾರೋ ಆಕೆಗೆ ವಶೀಕರಣ ಮಾಡಿದ್ದಾರೆ. ಅದಕ್ಕಾಗಿಯೇ ಅವಳು ಆತನೊಂದಿಗೆ ಓಡಿಹೋಗಿದ್ದಾಳೆ” ಎಂದು ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ತಮ್ಮ ನೋವನ್ನು ಹಂಚಿಕೊಳ್ಳುತ್ತಾ ಆಡಿಯೋ ಬಿಡುಗಡೆ ಮಾಡಿರುವ ಪೃಥ್ವಿ ಭಟ್ ಅವರ ತಂದೆ ಶಿವಪ್ರಸಾದ್, “ನನ್ನ ಮಗಳ ಮನಸ್ಸನ್ನು ಕೆಡಿಸಲಾಗಿದೆ. ಅವಳನ್ನು ನಾವು ಹೇಗೆ ಬೆಳೆಸಿದ್ದೇವೆಂದು ಎಲ್ಲರಿಗೂ ತಿಳಿದಿದೆ. ಆಕೆಯ ವಿವಾಹಕ್ಕಾಗಿ ನಾವು ಹುಡುಗನನ್ನು ಹುಡುಕುತ್ತಿದ್ದೆವು. ಆದರೆ, ಈಗ ಹೀಗಾಗಿದೆ. ಇದಕ್ಕೆಲ್ಲಾ ಕಾರಣ ಜೀ ಕನ್ನಡ ವಾಹಿನಿಯ ತೀರ್ಪುಗಾರರಾದ ನರಹರಿ ದೀಕ್ಷಿತ್. ನಾನು ಅವರಿಗೆ ಮಗಳ ಮದುವೆಯ ವಿಷಯವನ್ನು ಹೇಳಿದ್ದೆ. ನಿಮಗೆ ಯಾರಾದರೂ ಕಲಾವಿದರು ಗೊತ್ತಿದ್ದರೆ ನನ್ನ ಮಗಳಿಗೆ ಮದುವೆಗೆ ಹುಡುಕಿಕೊಡಿ ಎಂದು ಕೇಳಿಕೊಂಡಿದ್ದೆ” ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಕಣ್ಣಿಗೆ ಖಾರದಪುಡಿ, ಬಿಸಿ ಎಣ್ಣೆ, ಮಧ್ಯಾಹ್ನ 2:30ಕ್ಕೆ ಫಿಶ್ ಕರಿ ಆರ್ಡರ್, ಸಂಜೆ 5ಕ್ಕೆ ಪತ್ನಿಯಿಂದ ಫಿನಿಶ್!
ಆದರೆ, ಜೀ ಕನ್ನಡದಲ್ಲಿ ಕೆಲಸ ಮಾಡುತ್ತಿರುವ ಅಭಿಷೇಕ್ ಎಂಬುವವರೊಂದಿಗೆ ನನ್ನ ಮಗಳು ಪೃಥ್ವಿ ಭಟ್ ಪ್ರೀತಿಯಲ್ಲಿ ಬಿದ್ದಿದ್ದಾಳೆ ಮತ್ತು ಅದು ಮದುವೆಯ ಹಂತಕ್ಕೆ ತಲುಪಿದೆ ಎಂಬ ವಿಷಯ ತಿಳಿದಿದ್ದರೂ ನರಹರಿ ದೀಕ್ಷಿತ್ ನಮಗೆ ಈ ಬಗ್ಗೆ ಏನನ್ನೂ ತಿಳಿಸಲಿಲ್ಲ. ಇದರಿಂದ ನಮಗೆ ಈ ವಿಷಯವೇ ತಿಳಿಯಲಿಲ್ಲ. ಈಗ ನನ್ನ ಮಗಳು ಜಾತಿ ಬಿಟ್ಟು ಓಡಿಹೋಗಿದ್ದಾಳೆ. ಈಗ ಏನು ಹೇಳಿದರೂ ಪ್ರಯೋಜನವಿಲ್ಲ. ಅವಳು ಮನೆಯಿಂದ ಹೋಗಿ 20 ದಿನಗಳಿಗಿಂತಲೂ ಹೆಚ್ಚಾಗಿದೆ. ಈಗ ಅವಳು ನಮ್ಮ ಸಂಪರ್ಕದಲ್ಲಿ ಇಲ್ಲ” ಎಂದು ಶಿವಪ್ರಸಾದ್ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಶಿವಪ್ರಸಾದ್ ಅವರು ಹೇಳುವ ಪ್ರಕಾರ, “ನನ್ನ ಮಗಳು ಅಭಿಷೇಕ್ ಜೊತೆ ಮದುವೆ ಆಗುವುದಿಲ್ಲ ಎಂದು ದೇವರ ಮುಂದೆ ಪ್ರಮಾಣ ಮಾಡಿದ್ದಳು. ಆತನೊಂದಿಗೆ ಪ್ರೀತಿಯಲ್ಲಿರುವ ವಿಷಯ ನಮಗೂ ತಿಳಿದಿತ್ತು. ಆದರೆ, ಮದುವೆ ಆಗುವುದಿಲ್ಲ ಎಂದು ಆಕೆಯೇ ದೇವರ ಸನ್ನಿಧಿಯಲ್ಲಿ ಪ್ರಮಾಣ ಮಾಡಿದ್ದರಿಂದ, ನಾವು ಆಕೆಯ ವಿವಾಹವನ್ನು ಬೇರೆಯವರೊಂದಿಗೆ ಮಾಡಲು ಪ್ರಯತ್ನಿಸುತ್ತಿದ್ದೆವು.”
ಇದನ್ನೂ ಓದಿ: ಪೃಥ್ವಿ ಭಟ್ ಮದುವೆ ವಿವಾದ: ತಂದೆಯ ಆರೋಪಕ್ಕೆ ಮಗಳ ಸ್ಪಷ್ಟನೆ!
ಆದರೆ ಈಗ ಆತನಿೊಂದಿಗೆ ಓಡಿಹೋಗಿ ಮದುವೆಯಾಗಿದ್ದಾಳೆ” ಎಂದು ಪೃಥ್ವಿ ಭಟ್ ಅವರ ತಂದೆ ತೀವ್ರ ದುಃಖದಿಂದ ಹೇಳಿರುವ ಆಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸರಿಗಮಪ ಖ್ಯಾತಿಯ ಪೃಥ್ವಿ ಭಟ್ ಅವರು ಅಭಿಷೇಕ್ ಎಂಬುವವರೊಂದಿಗೆ ‘ಲವ್ ಮ್ಯಾರೇಜ್’ ಮಾಡಿಕೊಂಡು ಮನೆಯಿಂದ ಹೊರಹೋಗಿರುವ ಸುದ್ದಿ ಇದೀಗ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.