ಭಾರತದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ನರೇಂದ್ರ ಮೋದಿಯವರ ಸರ್ಕಾರವು ವಿವಿಧ ಯೋಜನೆಗಳನ್ನು ನಡೆಸುತ್ತಿದೆ. ಈ ಸಲದ ಬಜೆಟ್ ನಲ್ಲಿ ಕೂಡ ಸರ್ಕಾರ ಮಹಿಳೆಯರಿಗೆ ವಿಶೇಷ ಕೊಡುಗೆಗಳನ್ನು ನೀಡಿದೆ. ಮೋದಿ ಸರ್ಕಾರವು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಎಂಬ ಹೊಸ ಯೋಜನೆಯನ್ನು ತಂದಿದೆ. ಇದರಿಂದ ಮಹಿಳೆಯರಿಗೆ 2 ಲಕ್ಷ ರೂಪಾಯಿಗಳ ಲಾಭ ಸಿಗುತ್ತೆ ಎಂದು ಹೇಳಿದ್ದಾರೆ. ಹಾಗಾದರೆ ಈ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.
ಕೇಂದ್ರ ಸರ್ಕಾರವು ಈಗಾಗಲೇ ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ತಂದಿದೆ. ಆದರೆ ಈ ಯೋಜನೆಯು ಎಲ್ಲದಕ್ಕಿಂತ ವಿಭಿನ್ನವಾಗಿದೆ. ಈ ಯೋಜನೆಯ ಅಡಿಯಲ್ಲಿ ಮಹಿಳೆಯರು ಅಥವಾ ಹುಡುಗಿಯರು 2025ರ ವರೆಗೆ 2 ಲಕ್ಷ ರೂಪಾಯಿಯರಿಗೆ ಠೇವಣಿ ಮಾಡುತ್ತಿದ್ದರೆ ನಂತರ ಅವರಿಗೆ ಶೇಕಡಾ 7.5 ರಷ್ಟು ದರದಲ್ಲಿ ಬಡ್ಡಿಯ ಲಾಭ ಸಿಗುತ್ತೆ.
ಈ ಯೋಜನೆಯ ವಿಶೇಷವೆಂದರೆ ಇದರಲ್ಲಿ ಯಾವುದೇ ತೆರಿಗೆಯನ್ನು ಪಾವತಿ ಮಾಡಬೇಕಾಗಿಲ್ಲ. ಈ ಯೋಜನೆಯಲ್ಲಿ 2 ಲಕ್ಷ ರೂಪಾಯಿವರೆಗೂ ಹೂಡಿಕೆ ಮಾಡಬಹುದು.
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರಕ್ಕೆ ಬೇಕಾಗುವ ದಾಖಲೆಗಳು
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರದ ಪ್ರಯೋಜನವನ್ನು ಕೇವಲ ಮಹಿಳೆಯರು ಮಾತ್ರ ಪಡೆಯಬಹುದಾಗಿದೆ. ಈ ಯೋಜನೆಗಾಗಿ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಗೆ ಭೇಟಿ ನೀಡಿ ಅಲ್ಲಿ ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸಿ.
ಇದಕ್ಕಾಗಿ ಮಹಿಳೆಯರು ಆನ್ಲೈನ್ ನಲ್ಲಿ ಕೂಡ ಅರ್ಜಿ ಸಲ್ಲಿಸಬಹುದು. ಈ ಯೋಜನೆಯ ಪತ್ರವನ್ನು ಪಡೆಯಲು ಮಹಿಳೆಯರ ಹೆಸರಿನಲ್ಲಿ ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಹೊಂದಿರಬೇಕು. ಪಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡಬೇಕು. ಹಾಗೆಯೇ ಫಾರಂ ಭರ್ತಿ ಮಾಡುವಾಗ OTP ನೀಡಲು ಮಹಿಳೆಯರ ಫೋನ್ ನಂಬರ್ ಹಾಗೂ ಈ ಮೇಲ್ ಐ ಡಿ ಬೇಕಾಗುತ್ತೆ.
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರದ ಪ್ರಯೋಜನಗಳು
ಈ ಯೋಜನೆಯಲ್ಲಿ ನೀವು ಕೇವಲ 2025ರ ವರೆಗೆ ಮಾತ್ರ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಬಡ್ಡಿ ಹೆಚ್ಚು ಸಿಗುತ್ತೆ. ಮಹಿಳೆಯರು ಇದರಲ್ಲಿ ಹೆಚ್ಚು ಹಣವನ್ನು ಹೂಡಿಕೆ ಮಾಡಲು ಸಾಧ್ಯವಿಲ್ಲ. ಇದು ಕೇವಲ ಎರಡು ವರ್ಷಗಳ ಉಳಿತಾಯ ಯೋಜನೆಯಾಗಿದೆ.
ಇದನ್ನೂ ಓದಿ:
ವಿದ್ಯಾರ್ಥಿಗಳಿಗೆ ಸಿಗಲಿದೆ ಉಚಿತ ಲ್ಯಾಪ್ ಟಾಪ್
ಆಧಾರ್ ಕಾರ್ಡ್ ಹೊಂದಿದ್ದರೆ 2 ಲಕ್ಷ ರೂಪಾಯಿ ಕೇಂದ್ರ ಸರ್ಕಾರದಿಂದ ಸಿಗುತ್ತೆ
ಗೂಗಲ್ ಡೂಡಲ್ ನಲ್ಲಿ ಕಾಣಿಸಿಕೊಂಡ ಈ ನಟಿ ಯಾರು ಗೊತ್ತಾ?
Karnataka Bank Recruitment 2023: ಕರ್ನಾಟಕ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.