
ನೆಲದ ಮೇಲೆ ಕುಳಿತು ಆಹಾರ ಸೇವನೆ ಮಾಡುವುದರಿಂದ ಹಲವು ಲಾಭಗಳಿವೆ. ನೆಲದ ಮೇಲೆ ಕುಳಿತು ನಿಯಮಿತವಾಗಿ ಆಹಾರ ಸೇವಿಸಿದರೆ ದೇಹದ ಭಂಗಿ ಸರಿಯಾಗಿರುತ್ತೆ. ಆಯುರ್ವೇದದಲ್ಲಿ ಹೇಳಿದ ಪ್ರಕಾರ ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ನಮ್ಮ ಜೀರ್ಣಕ್ರಿಯೆಗೆ ಸಹಾಯ ಆಗುತ್ತೆ.
- ನೆಲದ ಮೇಲೆ ಕುಳಿತು ಊಟ ಮಾಡಿದರೆ ಆರೋಗ್ಯಕ್ಕೆ ಲಾಭ
- ನೆಲದ ಮೇಲೆ ಕುಳಿತು ಆಹಾರ ಸೇವನೆ ಮಾಡಿದರೆ ನಮ್ಮ ಭಂಗಿ ಸರಿಯಾಗಿರುತ್ತೆ
- ಮೊಣಕಾಲುಗಳಿಗೆ ಉತ್ತಮ ವ್ಯಾಯಾಮ ಆಗುತ್ತೆ
ಕೆಳಗೆ ಕುಳಿತು ಉಟ್ಟ ಮಾಡುವಾಗ ನಾವು ಮುಂದಕೆ ಭಾಗಿ ಆಹಾರವನ್ನು ಸೇವಿಸುತ್ತೇವೆ ಇದರಿಂದ ನಾವು ಸೇವಿಸುವ ಆಹಾರ ಸರಿಯಾದ ಸ್ಥಳಕ್ಕೆ ತಲುಪಿ ಕರುಳು ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತೆ. ನೆಲದ ಮೇಲೆ ಕುಳಿತು ಆಹಾರ ಸೇವನೆ ಮಾಡುವುದರಿಂದ ರಕ್ತ ಪರಿಚಲನೆ ಸರಿಯಾಗಿ ಆಗುತ್ತೆ. ಇದರಿಂದ ರಕ್ತವನ್ನು ಪಂಪ್ ಮಾಡಲು ಹೃದಯ ಕಡಿಮೆ ಶ್ರಮವನ್ನು ವಹಿಸುತ್ತೆ.
ನೆಲದ ಮೇಲೆ ಕುಳಿತುಕೊಂಡು ಊಟ ಮಾಡುವುದರಿಂದ ಬೆನ್ನು ಮೂಳೆಯ ಕೆಳಗಿನ ಭಾಗದ ಮೇಲೆ ಒತ್ತಡ ಬೀಳುತ್ತೆ. ಇದರಿಂದ ಸ್ನಾಯುಗಳು ಬಲಗೊಳ್ಳುತ್ತೆ. ಕೆಳಗೆ ಕೂತು ಊಟ ಮಾಡುವುದರಿಂದ ಮೊಣಕಾಲುಗಳಿಗೆ ಉತ್ತಮ ವ್ಯಾಯಾಮ ಆಗುತ್ತೆ. ಹೀಗೆ ಮಾಡುವುದರಿಂದ ಕೀಳು ನೋವು ಕೂಡ ಕಡಿಮೆ ಆಗುತ್ತೆ.
ನಾವು ಕುರ್ಚಿಯ ಮೇಲೆ ಕುಳಿತು ತಿನ್ನುವಾಗ, ಸೊಂಟವು ಬಿಗಿಯಾಗಿ ಮತ್ತು ಬಲವಾಗಿರುತ್ತದೆ, ನೆಲದ ಮೇಲೆ ಕುಳಿತು ತಿನ್ನುವುದರಿಂದ ಸೊಂಟದ ಬಾಗುವಿಕೆಯನ್ನು ಸುಲಭವಾಗಿ ಹಿಗ್ಗಿಸಬಹುದು.
ಇವುಗಳನ್ನೂ ಓದಿ:
ನೀವು ಸಂಜೆಯ ಸಮಯದಲ್ಲಿ ಚಹಾ ಕುಡಿಯುತ್ತೀರಾ? ಇದು ಎಷ್ಟು ಹಾನಿಕರ ಗೊತ್ತಾ?
ನೀವು ಆರೋಗ್ಯವಾಗಿರಲು ಈ ಯೋಗಾಸನಗಳನ್ನು ಮಾಡಿ । Yogasana 2023
ಚಳಿಗಾಲದಲ್ಲಿ ತಪ್ಪದೆ ಕುಡಿಯಿರಿ ಬೆಲ್ಲದ ಹಾಲು
ಕೊರೊನ ತೀವ್ರತೆ ಹಾಗೂ ಲಕ್ಷಣಗಳು ಬದಲಾಗಿದೆ
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.