
Dr. Bro (ಡಾ ಬ್ರೋ) ಎಂದೆ ಫೇಮಸ್ ಆದ ಇವರ ಹೆಸರು ಗಗನ್ ಶ್ರೀನಿವಾಸ್. ಇವರು ಮೂಲತಃ ಬೆಂಗಳೂರಿನವರು. ಎಲ್ಲಾ ಕಡೆಗೂ ಏಕಾಂಗಿ ಆಗಿಯೇ ಸಂಚಾರವನ್ನು ಇವರು ಮಾಡುತ್ತಿರುತ್ತಾರೆ. ಮೊದಲು ಇವರು ಭಾರತದ ಅನೇಕ ರಾಜ್ಯಗಳಲ್ಲಿ ಸುತ್ತಾಡಿ ಆ ರಾಜ್ಯದ ಹಾಗೂ ಅಲ್ಲಿರುವ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿಯನ್ನು ತಮ್ಮ ವ್ಲೋಗ್ ನ ಮೂಲಕ ವೀಕ್ಷಕರಿಗೆ ತಿಳಿಸಿ ಕೊಡುತ್ತಿದ್ದರು. ಆದರೆ ಇವರು ಈಗ ಸದ್ಯದಲ್ಲಿ ಅಪ್ಲೋಡ್ ಮಾಡಿದ ವಿಡಿಯೋದಲ್ಲಿ ಅವರು ಲಕ್ಷದ್ವೀಪ ಪ್ರವಾಸವನ್ನು ಮಾಡಿದ್ದರು.
ತಾಲಿಬಾನ್ ನಾಡಿನಲ್ಲಿ ಹೇಗಿತ್ತು ಕನ್ನಡಿಗರ ಅನುಭವ
About Dr Bro In English: Who is Dr Bro?
ಕೇವಲ ಭಾರತ ಮಾತ್ರ ಅಲ್ಲ ದುಬೈ ಪ್ರವಾಸವನ್ನು ಇವರು ಮಾಡಿದ್ದರು. ಹಾಗೆಯೇ ಇವರಂತೂ ತುಂಬಾನೇ ಫೇಮಸ್ ಆಗಿದ್ದಾರೆ. ಇವರ ವಿಡಿಯೋಗಳಿಗೆ ಕನ್ನಡಿಗರು ಉತ್ತಮ ಬೆಂಬಲವನ್ನು ನೀಡುತ್ತಿದ್ದಾರೆ. ಇವರ ಪಾಕಿಸ್ತಾನದ ವಿಡಿಯೋ ತುಂಬಾನೆ ವೈರಲ್ ಆಗಿತ್ತು. ಹಾಗೆಯೇ ಇವರ ವಿಡಿಯೋ ಬಗ್ಗೆ ನ್ಯೂಸ್ ಚಾನೆಲ್ ನಲ್ಲಿ ಮಾತನಾಡಿದ್ದು ಹೆಮ್ಮೆಯ ವಿಷಯ.
ಇವರು ಈಗ ರಷ್ಯಾದ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಇದಕ್ಕೂ ಅಧ್ಬುತ ಬೆಂಬಲ ಸಿಗುತ್ತಿದೆ. ಇವರಿಗೆ ಈಗ 22 ವರ್ಷ ಅಂತ ಅವರು ತಮ್ಮ ಒಂದು ವ್ಲೋಗ್ ನಲ್ಲಿ ಹೇಳಿದ್ದರು.