
Dr Bro Kannada vlogger
ಗಗನ್ ಶ್ರೀನಿವಾಸ್ ಬೆಂಗಳೂರಿನ ಗ್ರಾಮಾಂತರ ಹಳ್ಳಿಯಲ್ಲಿ ಹುಟ್ಟಿಬೆಳೆದವರು. ಈತನ ಬಾಲ್ಯವನ್ನು ಕಳೆದಿದ್ದು ಬೆಂಗಳೂರಿನ ಸುತ್ತಮುತ್ತ. ಗಗನ್ ಅವರ ತಂದೆ ಹೆಸರು ಶ್ರೀನಿವಾಸ್ ಹಾಗೂ ತಾಯಿ ಹೆಸರು ಪದ್ಮಾವತಿ. ಇವರಿಗೆ ಜನಿಸಿದ ಇಬ್ಬರು ಮಕ್ಕಳಲ್ಲಿ ಗಗನ್ ಮೊದಲನೆಯವರು.
Who is dr Bro? In English click here
ಗಗನ್ ಅವ್ರು ಹುಟ್ಟುತ್ತಾನೆ ಶ್ರೀಮಂತ ವ್ಯಕ್ತಿಯನ್ನು ಆಗಿರಲಿಲ್ಲ ಅವ್ರು ಕೂಡ ಮಿಡಲ್ ಕ್ಲಾಸ್ ಫ್ಯಾಮಿಲಿಯಿಂದ ಬಂದವರು. ಇವರ ತಂದೆ ದೇವಸ್ಥಾನದಲ್ಲಿ ಪುರೋಹಿತರು. ತಂದೆ ಕೂಡ ಪುರೋಹಿತರು ಆಗಿರುವ ಕಾರಣದಿಂದಾಗಿ ಗಗನ್ ಅವ್ರು ತಮ್ಮ ಚಿಕ್ಕ ವಯಸ್ಸಿನಿಂದಲೇ ಧಾರ್ಮಿಕ ಕೆಲಸಗಳಲ್ಲಿ ಕೂಡ ಭಾಗಿಯಾಗುತ್ತಿದ್ದರು. ಹಾಗೆ ಇವರು ದೇವಾಲಯದಲ್ಲಿ ತಂದೆ ಇಲ್ಲದ ಸಮಯದಲ್ಲಿ ಭಕ್ತಾದಿಗಳಿಗೆ ಅರ್ಚನೆಯನ್ನು ಹಾಗೂ ಪೂಜೆಯನ್ನು ಮಾಡಿಕೊಡುತ್ತಿದ್ದರು. ಇನ್ನು ಓದಿನ ವಿಷಯಕ್ಕೆ ಬರೋದಾದ್ರೆ ಗಗನ್ ಅವ್ರು ಅಷ್ಟೊಂದು ಪ್ರತಿಭಾವಂತರು ಆಗಿರಲಿಲ್ಲ. ಓದಿನಲ್ಲಿ ಇವರಿಗೆ ಅಷ್ಟೊಂದು ಆಸಕ್ತಿ ಇರಲಿಲ್ಲ ಆದರೆ ಓದಿನ ಬದಲು ಬೇರೆ ಎಲ್ಲ ಚಟುವಟಿಕೆಯಲ್ಲಿ ನಂಬರ್ ಒನ್ ಆಗಿದ್ರು.
ಹಾಡು, ಭಾಷಣ, ನಾಟಕ ಹಾಗೆ ಮುಂತಾದ ಚಟುವಟಿಕೆಗಳಲ್ಲಿ ಇವ್ರು ಭಾಗಿಯಾಗುತ್ತಿದ್ದರು. ಇಂತಹ ವಿಷಯಗಳಿಗೆ ಇವರು ತುಂಬಾನೇ ಆಸಕ್ತಿಯನ್ನು ತೋರಿಸಿದರು. ಗಗನ್ ಅವ್ರು 10ನೇ ತರಗತಿಯಲ್ಲಿ ಉತ್ತಮ ಅಂಕವನ್ನು ಗಳಿಸಿದರು ಪ್ರಕರಣದಿಂದಾಗಿ ಅವರಿಗೆ ಶಿಕ್ಷಕರು ಪಿಯುಸಿಯಲ್ಲಿ ಸೈನ್ಸ್ ವಿಷಯವನ್ನು ತೆಗೆದುಕೊಳ್ಳಲು ಹೇಳಿದರು. ಹಾಗೆ ಇವರು ಬೇರೆಯವ್ರು ಹೇಳಿದ ಕಾರಣದಿಂದಾಗಿ ಸೈನ್ಸ್ ವಿಷಯವನ್ನು ತೆಗೆದುಕೊಂಡರು. ಆದರೆ ಇವರು ಪಿಯುಸಿಯಲ್ಲಿ ಫೇಲಾದರೂ.
ನಂತರ ಇವರು ತಮ್ಮ 16ನೇ 17ನೇ ವಯಸ್ಸಿನಲ್ಲೇ ಕೆಲಸವನ್ನು ಮಾಡಲು ಪ್ರಾರಂಭ ಮಾಡಿದರು. ಇವರಿಗೆ ಅಷ್ಟಾಗಿ ಇಂಗ್ಲಿಷ್ ಭಾಷೆ ಕೂಡ ಬರುತ್ತಿರಲಿಲ್ಲ. ತಮ್ಮ 16ನೇ ವಯಸ್ಸಿನಲ್ಲಿ ಇವರು ಡ್ರೈವಿಂಗ್ ಕೆಲಸವನ್ನು ಕೂಡ ಮಾಡ್ತಿದ್ರು. ಡ್ರೈವಿಂಗ್ ಲೈಸೆನ್ಸ್ ಇಲ್ಲದಿದ್ದರೂ ಗಾಡಿಯನ್ನು ಓಡಿಸುತ್ತಿದ್ದರು. ನಂತರ ಇವರು ಡ್ರೈವಿಂಗ್ ಕೆಲಸವನ್ನು ಬಿಟ್ಟು ಸ್ವಂತವಾಗಿ ಬೇರೆ ಕೆಲಸವನ್ನ ಮಾಡಬೇಕು ಅಂತ ಅಂದುಕೊಂಡರು. ಇವರು ಬ್ರಾಹ್ಮಣ ಸ್ಟೋರ್ಸ್ ಅನ್ನೋ ತಮ್ಮ ಹೋಮ್ ಮೇಡ್ ಪ್ರೊಡಕ್ಟ್ ಗಳನ್ನು ಸೆಲ್ ಮಾಡಲು ಕೂಡ ಶುರುಮಾಡಿದರು. ನಂತ್ರ ಒಂದು ಯುಟ್ಯೂಬ್ ಚಾನೆಲ್ನ ಕೂಡ ಪ್ರಾರಂಭ ಮಾಡಿದರು.
ಗಗನ 2016ರಲ್ಲಿ ಮೊದಲ ಬಾರಿಗೆ ತಮ್ಮ ಯೂಟ್ಯೂಬ್ ಚಾನೆಲ್ ಪ್ರಾರಂಭ ಮಾಡಿದರು. ಆ ಚಾನಲ್ನಲ್ಲಿ ಕಾಮಿಡಿ ವಿಡಿಯೋಸ್ ಗಳನ್ನು ಅಪ್ಲೋಡ್ ಮಾಡುತ್ತಿದ್ದರು. ಅಂದ್ರೆ 2018ರಲ್ಲಿ ಡಾಕ್ಟರ್ ಬ್ರೋ Dr Bro ಚಾನೆಲ್ ಆರಂಭ ಮಾಡಿದರು. ಮೊದಲು ಇವರು ಸಿನಿಮಾದಲ್ಲಿ ಇರುವವರ ಇಂಟರ್ವ್ಯೂ ಗಳನ್ನು ನಮ್ಮ ಚಾನೆಲ್ ನಲ್ಲಿ ಅಪ್ಲೋಡ್ ಮಾಡುತ್ತಿದ್ದರು. ಪ್ರಾರಂಭದಲ್ಲಿ ಇವರು ಬೇರೆ ರಾಜ್ಯಗಳಿಗೆ ಭೇಟಿ ನೀಡಿದ ಹಾಗೂ ಅಲ್ಲಿನ ಸ್ಥಳಗಳ ಬಗ್ಗೆ Vlog ಮಾಡಿ ತಮ್ಮ ಚಾನಲ್ ನಲ್ಲಿ ಹಾಕ್ತಾ ಇದ್ದರು. ನಂತರ ಇವರ ವಿಡಿಯೋಸ್ಗಳು ಕರ್ನಾಟಕದಲ್ಲಿ ತುಂಬಾನೇ ಫೇಮಸ್ ಅವರು ಶುರುವಾದವು. ಹಾಗೆ ಜಗತ್ತಿನ ಬೇರೆ ಬೇರೆ ಜಾಗಗಳಲ್ಲಿ ಕನ್ನಡಿಗರಿಗೆ ಪರಿಚಯ ಮಾಡಬೇಕೆನ್ನುವುದು ಅವರ ಉದ್ದೇಶ. ಆಂಧ್ರ ಪ್ರದೇಶ್, ಕೇರಳ, ರಾಜಸ್ಥಾನ, ಜಮ್ಮು ಕಾಶ್ಮೀರ, ಗುಜರಾತ್ ಸೇರಿದಂತೆ ಇನ್ನೂ ಅನೇಕ ರಾಜ್ಯಗಳಿಗೆ ಭೇಟಿ ನೀಡಿದ್ದಾರೆ. ನಂತರ ಈಗ ಬೇರೆ ದೇಶಗಳಿಗೆ ಕೂಡಾ ಇವರು ಹೋಗಿ Vlog ನ ಮೂಲಕ ಆದೇಶಗಳ ವಿಶಿಷ್ಟತೆಯನ್ನು ಕನ್ನಡಿಗರಿಗೆ ಹೇಳುತ್ತಿದ್ದಾರೆ. ಥೈಲ್ಯಾಂಡ್, ರಷ್ಯಾ, ಪಾಕಿಸ್ತಾನ, ಮಲೇಶಿಯಾ ದೇಶಗಳಿಗೆ ಈಗಾಗಲೇ ಇವರು ಹೋಗಿದ್ದಾರೆ.
DR BRO ವಯಸ್ಸು ಕೇವಲ ಇಪ್ಪತ್ತೆರಡು. ಈ ಎಲ್ಲ ಸುತ್ತಾಟಕ್ಕೆ ತಮ್ಮ ಸ್ವಂತ ಖರ್ಚಿನಲ್ಲಿ ಹೋಗುತ್ತಿದ್ದಾರೆ. ಯೂಟ್ಯೂಬ್ ಹಾಗೂ ಫೇಸ್ಬುಕ್ನಲ್ಲಿ ಬರುವಂತ ಹಣದಿಂದ ಇವರು ಟ್ರಾವೆಲ್ ಮಾಡ್ತಿದ್ದಾರೆ ಅಂತ ಹೇಳಿ ತಿಳಿಸಿದರು.