
What's App
What’s App ಅಪ್ಲಿಕೇಶನ್ ಅನ್ನು ಮೆಸೇಜ್ ಮಾಡಲು ಹೆಚ್ಚಿನ ಜನರು ಬಳಸುತ್ತಾರೆ. ಹಾಗೆಯೆ ಈಗ ವಾಟ್ಸ್ ಆಪ್ ಮೆಸೆಂಜರ್ ನಲ್ಲಿ ಕೂಡ ವಂಚಕರು ಹೊಸದೊಂದು ಸ್ಕ್ಯಾಮ್ ಶುರು ಮಾಡಿದ್ದಾರೆ. ನಿಮ್ಮ ವಾಟ್ಸ್ ಆಪ್ ಬಳಸಿ ಜನರ ಹಣವನ್ನು ಲೂಟಿ ಮಾಡಲು ಶುರು ಮಾಡಿದ್ದಾರೆ. ಹೆಚ್ಚಿನ ಜನರು ಈ ಮೋಸದಿಂದಾಗಿ ಅವರ ಹಣವನ್ನು ಸಹ ಕಳೆದುಕೊಂಡಿದ್ದಾರೆ. ಹಾಗಾದರೆ ನೀವು ಏನು ಮಾಡಬೇಕು? ಅವರು ನಿಮ್ಮನ್ನು ಯಾವ ರೀತಿ ಸ್ಕ್ಯಾಮ್ ಮಾಡುತ್ತಾರೆ ಎಂದು ಈ ಲೇಖನದಲ್ಲಿ ಓದಿ.
- ವಾಟ್ಸ್ ಆಪ್ ನಲ್ಲಿ ಶುರುವಾಗಿದೆ ಹೊಸ ಸ್ಕ್ಯಾಮ್
- ಅಂತರಾಷ್ಟ್ರೀಯ ಕರೆಗಳು ನಿಮಗೂ ಬರಬಹುದು
- ಎಲ್ಲಾ ಬಳಕೆದಾದರೂ ಎಚ್ಚರದಿಂದ ಇರಬೇಕು
ಹೆಚ್ಚಿನ ಜನರು ವಾಟ್ಸ್ ಆಪ್ ಮೆಸೆಂಜರ್[What’s App[ ಬಳಸುವುದರಿಂದ ಜನರಿಗೆ ಮೋಸ ಮಾಡಲು ಇದು ಸುಲಭ ಮಾರ್ಗವಾಗಿದೆ ಎಂದು ಈಗ ವಾಟ್ಸ್ ಆಪ್ ಮೆಸೆಂಜರ್ ಸ್ಕ್ಯಾಮ್ ಅನ್ನು ವಂಚಕರು ಶುರು ಮಾಡಿದ್ದಾರೆ. ಹೆಚ್ಚಾಗಿ +84, +62, +60 ಈ ತರಹದ ಅಂತರಾಷ್ಟ್ರೀಯ ನಂಬರ್ ಗಳಿಂದ ವಾಟ್ಸ್ ಆಪ್ ಕರೆಗಳು ಬರುತ್ತಿವೆ. ಹಲವರಿಗೆ ಈ ರೀತಿಯಾಗಿ ಕರೆಗಳು ಬಂದ ಕಾರಣ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಅವರು ಪೋಸ್ಟ್ ಗಳನ್ನೂ ಹಂಚಿಕೊಂಡಿದ್ದಾರೆ.
What’s App ಬಳಕೆದಾರರಿಗೆ ಹೆಚ್ಚಾಗಿ ವಿಯೆಟ್ನಾಂ, ಕೀನ್ಯಾ, ಮಲೇಷ್ಯಾ, ಇತಿಯೋಪಿಯಾ ದೇಶಗಳಿಂದ ಕರೆಗಳು ಬರುತ್ತಿವೆ. ಕೆಲವು ಜನರಿಗೆ ಒಂದೇ ದಿನಕ್ಕೆ ಎರಡರಿಂದ ಮೂರು ಬಾರಿ ಕೂಡ ಈ ರೀತಿಯಾದಂತ ಕರೆಗಳು ಬಂದಿದೆ. ಈ ರೀತಿಯಾಗಿ ಕರೆಗಳನ್ನು ಮಾಡಿ ಬ್ಯಾಂಕ್ ನಲ್ಲಿರುವ ಹಣವನ್ನು ಲೂಟಿ ಮಾಡಲು ಯತ್ನಿಸುತ್ತಾರೆ ಎಂದು ಹೇಳಿದ್ದಾರೆ. ಆದ್ದರಿಂದ ವಾಟ್ಸ್ ಆಪ್ ಬಳಕೆದಾದರೂ ಈ ವಿಷಯದ ಬಗ್ಗೆ ಸ್ವಲ್ಪ ಜಾಗ್ರತೆಯನ್ನು ವಹಿಸಬೇಕಾಗುತ್ತದೆ.
ಹಾಗೆಯೆ ಇದೆ ನಂಬರ್ ಗಳಿಂದ ನಿಮ್ಮ ನಂಬರ್ ಗೆ ಮೆಸೇಜ್ ಸಹ ಬರುತ್ತೆ. ಅದರಲ್ಲಿ ಕೆಲವು ಲಿಂಕ್ ಗಳನ್ನೂ ನೀಡಿರುತ್ತಾರೆ. ನೀವು ಹಣವನ್ನು ಗೆದ್ದಿದ್ದಿರಾ ಹಾಗಾಗಿ ಈ ಲಿಂಕ್ ಕ್ಲಿಕ್ ಮಾಡಿ ಎಂದೆಲ್ಲ ಸ್ಕ್ಯಾಮ್ ಗಳು ನಡೆಯುತ್ತೆ. ಒಂದು ವೇಳೆ ನೀವು ಅವರು ಕಳುಹಿಸಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಡಾಟಾವನ್ನು ಅವರು ಕದಿಯುತ್ತಾರೆ. ಹಾಗೆಯೆ ಕೆಲವೊಂದು ಮಾಲ್ವೇರ್ ಗಳು ನಿಮ್ಮ ಮೊಬೈಲ್ ಗೆ ಸಹ ಬರುವ ಸಾಧ್ಯತೆ ಹೆಚ್ಚಿರುತ್ತೆ. ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಹೇಗಾದರೂ ಮಾಡಿ ಪಡೆದುಕೊಳ್ಳಲು ಅವರು ಕಾಯುತ್ತಿರುತ್ತಾರೆ.
ಇದರಿಂದ ತಪ್ಪಿಸಿಕೊಳ್ಳಲು ನೀವು ಏನು ಮಾಡಬೇಕು?
ಈ ರೀತಿಯಾಗಿ ನಿಮಗೂ ಕೂಡ ಅಂತಾರಾಷ್ಟ್ರೀಯ ಕರೆಗಳು ಬಂದರೆ ಅದನ್ನು ಯಾವುದೇ ಕಾರಣಕ್ಕೂ ರಿಸೀವ್ ಮಾಡಬೇಡಿ. ಅಂತಹ ನಂಬರ್ ಗಳನ್ನೂ ಬ್ಲಾಕ್ ಮಾಡಿ. ಹಾಗೆಯೆ ಲಿಂಕ್ ಕಳುಹಿಸಿರುವ ಅಪರಿಚಿತ ಅಂತರಾಷ್ಟ್ರೀಯ ನಂಬರ್ ಗಳನ್ನೂ ಸಹ ನೀವು ಬ್ಲಾಕ್ ಮಾಡಬಹುದು.
ಹಾಗಾಗಿ ಈ ರೀತಿಯ ಕರೆಗಳನ್ನು ಸ್ವೀಕರಿಸುವಾಗ ಹಾಗೂ ಮೆಸೇಜ್ ಓದುವಾಗ ಸ್ವಲ್ಪ ಎಚ್ಚರದಿಂದ ಇರಿ. ಈ ವಿಷಯವನ್ನು ಆದಷ್ಟು ಹೆಚ್ಚಿನ ಜನರಿಗೆ ಶೇರ್ ಮಾಡಿ.