ಕನ್ನಡತಿ ಧಾರವಾಹಿ ಕನ್ನಡದ ಅತ್ಯಂತ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು. ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ ಧಾರವಾಹಿ ಕನ್ನಡತಿ. ಧಾರಾವಾಹಿಯ ವಿಶೇಷ ಕಥೆಗಳು ಜನರನ್ನು ತನ್ನತ್ತ ಸೆಳೆಯುತ್ತೆ. ಹೆಚ್ಚು ಟಿ ಆರ್ ಪಿ ಕೂಡ ಧಾರವಾಹಿ ಪಡೆದುಕೊಂಡಿದೆ.
ಈಗ ಇನ್ನೊಂದು ಸುದ್ದಿ ಏನೆಂದರೆ ಕನ್ನಡತಿ ಧಾರವಾಹಿ ಮುಕ್ತಾಯಗೊಳ್ಳಲಿದೆ. ಹೌದು ಕನ್ನಡತಿ ಧಾರವಾಹಿ ಶುರುವಾಗಿ ಸುಮಾರು ಎರಡು ವರ್ಷದ ಹತ್ತಿರ ಬಂದಿದೆ. ಈಗ ಧಾರವಾಹಿ ಮುಗಿಯುತ್ತೆ ಎಂದು ಅಭಿಮಾನಿಗಳಿಗೆ ಬೇಸರವಾಗಿದೆ. ರಂಜನಿ ರಾಘವನ್ ಅವರ ಕನ್ನಡ ಪದಗಳು ಧಾರಾವಾಹಿಯಲ್ಲಿ ಜಾಸ್ತಿ ಕಾಣಸಿಗುತ್ತೆ.
ಈಗ ಕಥೆ ಬಾರಿ ತಿರುವುಗಳನ್ನು ಪಡೆದುಕೊಂಡಿದೆ. ಅಭಿಮಾನಿಗಳಿಗೆ ಕಥೆಯಲ್ಲಿ ರೋಚಕತೆ ಕೂಡ ಕಾಣಿಸುತ್ತಿದೆ. ಈಗ ಹಲವರಿಗೆ ಧಾರವಾಹಿ ಮುಗಿದ ನಂತರ ಕನ್ನಡತಿ ಧಾರಾವಾಹಿಯ ಹೀರೋ ಕಿರಣ್ ರಾಜ್ ಏನ್ ಮಾಡ್ತಾರೆ ಅಂತ. ಈ ವಿಷಯದ ಬಗ್ಗೆ ಕಿರಣ್ ರಾಜ್ ಅವರು ಕೂಡ ಅಭಿಮಾನಿಗಳ ಹತ್ತಿರ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಕಿರಣ್ ರಾಜ್ ಸದ್ಯ ಕಿರುತೆರೆಯಲ್ಲಿ ಬ್ಯುಸಿ ಆಗಿದ್ದಾರೆ. ಕನ್ನಡತಿ ಧಾರವಾಹಿ ಮುಗಿದ ನಂತರ ಸಿನೆಮಾಗಳಲ್ಲಿ ಕೂಡ ಇವರು ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಕೆಲವೊಂದು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ ಕಿರಣ್ ರಾಜ್. ಮುಂದಿನ ದಿನಗಳಲ್ಲಿ ಶೂಟಿಂಗ್ ನಲ್ಲಿ ಬ್ಯುಸಿ ಆಗಲಿದ್ದಾರೆ ನಟ ಕಿರಣ್ ರಾಜ್. ಈ ಮಾಹಿತಿಯನ್ನು ಕೇಳಿ ಅಭಿಮಾನಿಗಳು ಕೂಡ ಖುಷಿಪಟ್ಟಿದ್ದಾರೆ.
Also Read: ತಾಲಿಬಾನ್ ನಾಡಿನಲ್ಲಿ ಹೇಗಿತ್ತು ಕನ್ನಡಿಗರ ಅನುಭವ
ಸಾನಿಯಾ ಸಿಕ್ಕಿಬಿದ್ದಳು ನೋಡಿ… ಕನ್ನಡತಿಯಲ್ಲಿ ಮಹಾ ತಿರುವು
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
