ತಾಲಿಬಾನ್ ನಾಡಿನಲ್ಲಿ ಹೇಗಿತ್ತು ಕನ್ನಡಿಗರ ಅನುಭವ | Dr Bro kannada vlogger

ತಾಲಿಬಾನ್ ಹೆಸರು ಕೇಳಿದ್ರೆ ತುಂಬಾ ಜನ ಭಯ ಪಡ್ತಾರೆ. ಏಕೆಂದರೆ ಕಳೆದ ವರ್ಷ ಅಫ್ಘಾನಿಸ್ತಾನ್ ನಲ್ಲಿ ಏನಾಯ್ತು ಅಂತ ಎಲ್ಲರಿಗು ತಿಳಿದಿದೆ. ಈಗ ಸಂಪೂರ್ಣ ದೇಶ ತಾಲಿಬಾನ್ ಆಡಳಿತದಲ್ಲಿದೆ. ತಾಲಿಬಾನ್ ಬಂದ ಮೇಲೆ ಅಲ್ಲಿಗೆ ಹೋಗಲು ಜನರು ಭಯ ಪಡ್ತಾರೆ. ಆದರೆ ಈಗ ತುಂಬಾ ಯುಟ್ಯೂಬರ್​ಗಳು ತಾಲಿಬಾನ್ ನಾಡಿಗೆ ಹೋಗಿ ಬಂದಿದ್ದಾರೆ.

ಹಿಂದಿ ಯುಟ್ಯೂಬರ್ ಅಫ್ಘಾನಿಸ್ತಾನ್ ಗೆ ಹೋಗಿ ಬಂದಿರುವ ವಿಲೋಗ್ ಗಳನ್ನೂ ನೀವು ಯುಟ್ಯೂಬ್ ನಲ್ಲಿ ನೋಡಿರಬಹುದು. ಆದರೆ ನಮ್ಮ ಕನ್ನಡದ ಯುಟ್ಯೂಬರ್ಸ್ ಕೂಡ ಅಫ್ಘಾನಿಸ್ತಾನ್ ಗೆ ಹೋಗಿ ಬಂದಿದ್ದಾರೆ. ಡಾ ಬ್ರೋ ಎಂದೇ ಪ್ರಸಿದ್ಧರಾಗಿರುವ ಗಗನ್ ಶ್ರೀನಿವಾಸ್ ಅವರು ಮೊದಲು ಅಫ್ಘಾನಿಸ್ತಾನ್ ಪ್ರವಾಸಕ್ಕೆ ಹೋಗಿದ್ದರು. ನಂತರ ಲೋಹಿತ್ ಕನ್ನಡ ಟ್ರಾವೆಲ್ಲರ್ ಕೂಡ ಅಲ್ಲಿಗೆ ಹೋಗಿ ಬಂದಿದ್ದಾರೆ.

ಅಫ್ಘಾನಿಸ್ತಾನಕ್ಕೆ ನೇರವಾಗಿ ಭಾರತದಿಂದ ಹೋಗಲು ಸಾಧ್ಯವಿಲ್ಲ. ದುಬೈ ನಿಂದ ಅಫ್ಘಾನಿಸ್ತಾನಕ್ಕೆ 2 ವಿಮಾನಗಳು ಇದೆ ಅಷ್ಟೇ. ಗಗನ್ ಶ್ರೀನಿವಾಸ್ ಅವರು ತಾಲಿಬಾನ್ ನಾಡಿನಲ್ಲಿ ಏನೆಲ್ಲಾ ಇದೆ ಹಾಗೆ ಅಲ್ಲಿ ಜನರು ಹೇಗೆ ಜೀವಿಸುತ್ತಿದ್ದಾರೆ ಎನ್ನುವುದನ್ನು ತಮ್ಮ ವೀಡಿಯೋಸ್ ಮೂಲಕ ಕರ್ನಾಟಕದ ಜನರಿಗೆ ತೋರಿಸಿದ್ದಾರೆ. ಫೇಸ್ಬುಕ್ ಹಾಗೂ ಯುಟ್ಯೂಬ್ ನಲ್ಲಿ ಇವರು ವೀಡಿಯೋಸ್ ಅಪ್ಲೋಡ್ ಮಾಡಿದ್ದಾರೆ. ಹಾಗೆಯೆ ಲೋಹಿತ್ ಅವರು ಕೂಡ ವೀಡಿಯೋಸ್ ತಮ್ಮ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

Who is Dr bro Kannada

ನಂತರ ದುಬೈ ನಲ್ಲಿ ಗಗನ್ ಅವರು ಹಾಗೂ ಲೋಹಿತ್ ಇಬ್ಬರು ಕೂಡ ಭೇಟಿಯಾಗಿರುವ ವೀಡಿಯೋ ಅಪ್ಲೋಡ್ ಮಾಡಿದ್ದಾರೆ. ಹಾಗೆಯೆ ಇವರು ಈ ವಿಡಿಯೋದಲ್ಲಿ ತಾಲಿಬಾನ್ ದೇಶದಲ್ಲಿ ಆಗಿರುವ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ಹೇಳಿದ ಪ್ರಕಾರ ಗಗನ್ ಅವರು ಅಫ್ಘಾನ್ ನಿಂದ ಬರುವಾಗ ಲೋಹಿತ್ ಅವರು ಅಫ್ಘಾನ್ ದೇಶಕ್ಕೆ ಬಂದಿದ್ದಾರೆ ಎಂದು ಹೇಳಿದ್ದಾರೆ. ತಾಲಿಬಾನ್ ಗಳು ಗಗನ್ ಅವರ ಕ್ಯಾಮೆರಾ ಕೂಡ ಕಿತ್ತುಕೊಂಡಿರುವುದನ್ನ ನೀವು ಅವರ ವಿಡಿಯೋದಲ್ಲಿ ನೋಡಿರಬಹುದು. ಭಾರತೀಯರು ಅಂದರೆ ಅಫ್ಘಾನ್ ಜನರೆಲ್ಲಾ ಗೌರವ ಕೊಡುವುದು ವಿಡಿಯೋದಲ್ಲಿ ನೀವು ನೋಡಬಹುದು.

ತಾಲಿಬಾನ್ ನಾಡಿನಲ್ಲಿ ಹೇಗಿತ್ತು ಕನ್ನಡಿಗರ ಅನುಭವ ವಿಡಿಯೋ ನೋಡಿ

Afghanistan vlogs Kannada Dr Bro

Share