
ತುಂಬಾ ಜನರಿಗೆ ತಲೆಯಲ್ಲಿ ಎರಡು ಸುಳಿ ಇರುತ್ತೆ. ಹಾಗೆ ಈ ರೀತಿಯಾಗಿ ಎರಡು ಸುಳಿ ಇರೋದಕ್ಕೆ ಕಾರಣ ಏನು ಗೊತ್ತಾ? ನಿಜವಾಗಿಯೂ ತಲೆಯಲ್ಲಿ ಎರಡು ಸುಳಿ ಇದ್ದರೆ ಎರಡು ಮದುವೆ ಆಗುತ್ತಾ? ಎಂದು ಹಲವು ಜನರಿಗೆ ಪ್ರಶ್ನೆಗಳು ಕಾಡುತ್ತವೆ. ಈ ಎಲ್ಲ ನಿಮ್ಮ ಪ್ರಶ್ನೆಗಳಿಗೂ ಇಲ್ಲಿದೆ ಉತ್ತರ ಹಾಗೆ ಈ ವಿಷಯ ತುಂಬಾ ಇಂಟೆರೆಸ್ಟಿಂಗ್ ಆಗಿದೆ.
ಹಲವು ಮಂದಿಗೆ ತಲೆಯಲ್ಲಿ ಎರಡು ಸುಳಿ ಇದ್ದರೆ ಕಾಣಿಸುತ್ತೆ ಆದರೆ ಇನ್ನು ಹಲವರಿಗೆ ಸುಳಿ ಇರುವುದು ಕಾಣುವುದಿಲ್ಲ. ಹೆಚ್ಚಾಗಿ ಹಳ್ಳಿ ಭಾಗದ ಜನರು ಈ ರೀತಿಯಾಗಿ ಎರಡು ಸುಳಿ ಇದ್ದರೆ ಏನಾದರು ಅಪಾಯ ಇದೆಯೇ ಎಂದು ಯೋಚಿಸುತ್ತಾರೆ. ಹಾಗೆ ಇನ್ನು ಹೆಚ್ಚಿನ ಜನರು ಈ ರೀತಿಯಾಗಿ ತಲೆಯಲ್ಲಿ ಎರಡು ಸುಳಿ ಇದ್ದರೆ ಎರಡು ಮದುವೆ ಆಗುತ್ತೆ ಎಂದು ನಂಬುತ್ತಾರೆ.
ಒಂದು ವರದಿಯ ಪ್ರಕಾರ ಜಗತ್ತಿನಲ್ಲಿ ಇರುವ ಜನರಲ್ಲಿ ಶೇಕಡ 5 ರಷ್ಟು ಜನರು ತಲೆಯಲ್ಲಿ ಎರಡು ಸುಳಿಯನ್ನು ಹೊಂದಿರುತ್ತಾರೆ. ವೈಜ್ಞಾನಿಕವಾಗಿ ನೋಡುವುದಾದರೆ ಈ ರೀತಿಯಾಗಿ ಎರಡು ಸುಳಿ ಬರಲು ಜೀನ್ಸ್ ಕರಣ ಎಂದು ಹೇಳುತ್ತಾರೆ. ಇದು ಪುರುಷ ಅಥವಾ ಮಹಿಳೆಯರ ಅನುವಂಶಿಕವಾಗಿ ಬರುತ್ತೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ನೀವು ಹೊಟ್ಟೆಯ ಮೇಲೆ ಮಲಗುತ್ತೀರಾ? ಇದು ನಿಮ್ಮ ಆರೋಗ್ಯಕ್ಕೆ ಹಾನಿಕಾರವೇ?
ಹಲವು ಜನರು ಎರಡು ಸುಳಿ ಇದ್ದರೆ ಎರಡು ಮದುವೆ ಆಗುತ್ತೆ ಎಂದು ಹೇಳುತ್ತಾರೆ. ಆದರೆ ಈ ವಿಷಯದ ಬಗ್ಗೆ ಯಾವುದೇ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ ತಲೆಯಲ್ಲಿ ಎರಡು ಸುಳಿಯನ್ನು ಹೊಂದಿರುವ ಜನರು ಉತ್ತಮರಾಗಿರುತ್ತಾರೆ. ಹಾಗೆಯೆ ಅವರು ನೇರ ನುಡಿ, ತಾಳ್ಮೆಯನ್ನು ಹೊಂದಿರುತ್ತಾರೆ.