500 Notes Missing
500 ರೂಪಾಯಿಯ ನೋಟುಗಳು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್ ಒಫ್ ಇಂಡಿಯಾ {RBI} ಸ್ಪಷ್ಟನೆಯನ್ನು ಕೊಟ್ಟಿದೆ. ಭಾರತದಲ್ಲಿ ಈಗ ಗರಿಷ್ಟ ಮೌಲ್ಯವಿರುವ ಮುಖಬೆಲೆಯ ನೋಟು ಎಂದರೆ ಅದು 500 ರೂಪಾಯಿಯ ನೋಟು. ಆದರೆ 500 ಮುಖಬೆಲೆಯ 88,032 ಮಿಲಿಯನ್ ನೋಟುಗಳು ನಾಪತ್ತೆಯಾಗಿವೆ ಎಂದು ಹೇಳಲಾಗಿತ್ತು.
ಈ ವಿಷಯದ ಬಗ್ಗೆ ರಿಸರ್ವೆ ಬ್ಯಾಂಕ್ ಒಫ್ ಇಂಡಿಯಾ {RBI} ಕಾರ್ಯಕರ್ತರೊಬ್ಬರು ಟ್ವಿಟ್ಟರ್ ನಲ್ಲಿ ಈ ವಿಷಯದ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ದೇಶದ ಮೂರು ವಿವಿಧ ಮುದ್ರಣಾಲಯದಲ್ಲಿ ಮುದ್ರಿಸಲಾದ 500 ರೂಪಾಯಿಯ ನೋಟುಗಳ ಸಂಖ್ಯೆ ಹಾಗೂ ರಿಸರ್ವ್ ಬ್ಯಾಂಕ್ ಒಫ್ ಇಂಡಿಯಾ ಸ್ವೀಕರಿಸಿದ ನೋಟುಗಳ ಸಂಖ್ಯೆಯಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದೆ ಎಂದು ಹೇಳಲಾಗಿತ್ತು.
ಇದನ್ನೂ ಓದಿ: 30 ಸಾವಿರ ರೂಪಾಯಿಗಿಂತ ಹೆಚ್ಚು ಹಣ ಇದ್ದವರ ಬ್ಯಾಂಕ್ ಖಾತೆ ಕ್ಲೋಸ್…! RBI
ಈ ವಿಷಯ ಮಾದ್ಯಮದಲ್ಲಿ ವೈರಲ್ ಆಗುತ್ತಿದಂತೆ ಈ ವಿಷಯದ ಬಗ್ಗೆ ಆರ್ ಬಿ ಐ [RBI] ಸ್ಪಷ್ಟನೆಯನ್ನು ನೀಡಿದೆ. ಮಾದ್ಯಮದಲ್ಲಿ ಪ್ರಕಟವಾಗಿರುವ ಮಾಹಿತಿ ಸರಿಯಿಲ್ಲ. ಮುದ್ರಣಾಲಯಗಳಿಂದ ಮಾಹಿತಿ ಹಕ್ಕು ಕಾಯ್ದೆಯಡಿ ಸಂಗ್ರಹಿಸಿದ ಮಾಹಿತಿಯ ತಪ್ಪಾದ ಸುದ್ದಿಯನ್ನು ಆದರಿಸಿ ವರದಿಗಳು ಬಂದಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಶಕ್ತಿ ಸ್ಮಾರ್ಟ್ ಕಾರ್ಡ್ ಆನ್ಲೈನ್ ನಲ್ಲಿ ಪಡೆಯುವುದು ಹೇಗೆ?
ಹಾಗೆಯೆ ಪ್ರಿಂಟಿಂಗ್ ಪ್ರೆಸ್ ಗಳಿಂದ ಸರಬರಾಜದ ನೋಟುಗಳನ್ನು ಸರಿಯಾಗಿ ಲೆಕ್ಕ ಹಾಕಲಾಗಿದೆ ಎಂದು ಆರ್ ಬಿ ಐ ಸ್ಪಷ್ಟನೆಯನ್ನು ನೀಡಿದೆ. ನಮ್ಮ ಇತರೆ ಲೇಖನಗಳನ್ನು ಸಹ ಓದಿ.
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
