
ಪೇರಲೆ ಹಣ್ಣುಗಳು ಎಲ್ಲರಿಗೂ ಇಷ್ಟವಾದ ಹಣ್ಣಾಗಿದೆ . ಹಾಗಿದ್ದರೆ ಪೆರಲೆ ಹಣ್ಣಿನ ಎಲೆಗಳಿಂದ ತೂಕ ಕಡಿಮೆ ಮಾಡಿಕೊಳ್ಳಬಹುದೇ ? ಹಾಗಿದ್ದರೆ ಪೇರಲೆ ಹಣ್ಣಿನ ಎಲೆಗಳಿಂದ ತೂಕ ಕಡಿಮೆ ಮಾಡಿಕೊಳ್ಳುವುದು ಹೇಗೆ ? ಇಲ್ಲಿದೆ ನೋಡಿ ಮಾಹಿತಿ .
ಪೇರಲೆ ಎಲೆಗಳು ಪೋಷಕಾಂಶಗಳು ಮತ್ತು ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತದೆ. ಇದನ್ನು ಔಷಧಗಳಲ್ಲಿ ಬಳಸಲಾಗುತ್ತದೆ.ಹಾಗಿದ್ದರೆ ಈ ಪೇರಲೆ ಎಲೆಗಳಿಂದ ತೂಕ ಇಳಿಸುವುದು ಹೇಗೆ ? ಪೇರಲೆ ಎಲೆಗಳ ಚಹಾದಿಂದ ನಾವು ತೂಕವನ್ನು ಇಳಿಸಿಕೊಳ್ಳಬಹುದಾಗಿದೆ. ಈ ಎಲೆಗಳು ರಕ್ತದಲ್ಲಿನ ಸಕ್ಕರೆ ಅಂಶ ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಕ್ಯಾಟೆಚಿನ್, ಕ್ವೆರ್ಸೆಟಿನ್ ಮತ್ತು ಗ್ಯಾಲಿಕ್ ಆಸಿಡ್ ಸೇರಿದಂತೆ ಪೇರಲೆ ಎಲೆಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ಒತ್ತಡದ ವಿರುದ್ಧ ಹೋರಾಡುವ ಮೂಲಕ ದೇಹದ ತೂಕವನ್ನು ಕಡಿಮೆ ಮಾಡುತ್ತದೆ.
ಇದಕ್ಕೆ ಹರ್ಬಲ್ ಚಹಾವು ಬಹು ಪ್ರಯೋಜನಕಾರಿಯಾಗಿದೆ. ನಾವು ತಂಪು ಪಾನೀಯ ಇಂತದ್ದನ್ನು ಕುಡಿಯುವುದಕ್ಕಿಂತ ಎಳೆಗಳ ಚಹಾವನ್ನು ಕುಡಿಯುವುದರಿಂದ ನಮ್ಮ ದೇಹದ ತೂಕ ಕಡಿಮೆಯಾಗುತ್ತದೆ. ಆದ್ದರಿಂದ ಪೇರಳೆ ಎಲೆಗಳ ಚಹಾ ತುಂಬಾ ಪ್ರಯೋಜನಕಾರಿಯಾಗಿದೆ .
ಪೇರಲೆ ಎಲೆಗಳ ಚಹಾವನ್ನು ಮಾಡುವ ವಿಧಾನ:- ಎರಡರಿಂದ ಮೂರು ಪೇರಲೆ ಎಲೆಗಳನ್ನು ತೆಗೆದುಕೊಂಡು ಎರಡು ಲೋಟ ನೀರಿನಲ್ಲಿ ಚೆನ್ನಾಗಿ ಕುದಿಸಿ. ನೀರಿನ ಬಣ್ಣ ಕಂಡು ಬಣ್ಣಕ್ಕೆ ತಿರುಗಿದಾಗ ಮತ್ತು ನೀರು ಎರಡು ಲೋಟದಿಂದ ಕಡಿಮೆ ಆಗುತ್ತಿದಂತೆ ಅದಕ್ಕೆ ಸಕ್ಕರೆ ಸೇರಿಸಬಹುದು. ಆದರೇ ಸಕ್ಕರೆಯನ್ನು ಸೇರಿಸದ್ದಿದ್ದರೆ ಒಳ್ಳೆಯದು. ಇದರ ಚಹಾ ಸ್ವಲ್ಪ ಚೊಗರು ಮತ್ತು ಕಹಿ ಇರುವುದರಿಂದ ಕುಡಿಯಲು ಕಷ್ಟವಾಗಬಹುದು. ನಾವು ಇದನ್ನು ಪ್ರತಿನಿತ್ಯ ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಇದನ್ನು ದಿನಕ್ಕೆ ಒಂದು ಬಾರಿ ಕುಡಿದರೆ ನಮ್ಮ ದೇಹದ ತೂಕವನ್ನು ಕಡಿಮೆ ಮಾಡಬಹುದು.