ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ರಾಶಿಗೆ ತಮ್ಮದೇ ಆದ ರಕ್ಷಕ ದೇವರು ಇದ್ದಾರೆ. ಆ ದೇವರನ್ನು ಭಕ್ತಿಯಿಂದ ಆರಾಧಿಸಿದರೆ ಅವರು ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಂರಕ್ಷಣೆಯನ್ನು ನೀಡುತ್ತಾರೆ
Author: Aaradhya Astrology
Image Credits: Google
ಮೇಷ ರಾಶಿ – ಕಾರ್ತಿಕೇಯ ಸ್ವಾಮಿ ಈ ರಾಶಿಯ ರಕ್ಷಕ ದೇವರು. ಭಕ್ತಿಯಿಂದ ಅವರ ಪೂಜೆ ಮಾಡಿದರೆ ಶಕ್ತಿಯು ಮತ್ತು ಧೈರ್ಯವು ಹೆಚ್ಚುತ್ತದೆ
Image Credits: Google
ವೃಷಭ ರಾಶಿ – ಲಕ್ಷ್ಮಿ ದೇವಿ ಈ ರಾಶಿಯವರನ್ನು ಧನ ಮತ್ತು ಸಮೃದ್ಧಿಯಿಂದ ರಕ್ಷಿಸುತ್ತಾಳೆ. ಪ್ರತಿದಿನವೂ ಆಕೆಯನ್ನು ಪೂಜಿಸುವುದು ಒಳಿತು
Image Credits: Google
ಮಿಥುನ ರಾಶಿ – ಬುದ್ಧ ದೇವನು ಜ್ಞಾನ ಮತ್ತು ಬುದ್ಧಿಮತ್ತೆಯ ಮೂಲಕ ಮಿಥುನ ರಾಶಿಯವರನ್ನು ರಕ್ಷಿಸುತ್ತಾನೆ. ಧ್ಯಾನದಲ್ಲಿ ತೊಡಗುವುದು ಉತ್ತಮ.
Image Credits: Google
ಕಟಕ ರಾಶಿ – ಶಿವನು ಮತ್ತು ಚಂದ್ರ ದೇವನು ಈ ರಾಶಿಯ ರಕ್ಷಕರು. ವಾರಕ್ಕೊಮ್ಮೆ ಜಲಾಭಿಷೇಕ ಮಾಡುವ ಮೂಲಕ ಅವರ ಕೃಪೆ ಪಡೆಯಬಹುದು.
Image Credits: Google
ಸಿಂಹ ರಾಶಿ – ಸೂರ್ಯ ದೇವನು ಈ ರಾಶಿಯವರನ್ನು ರಕ್ಷಿಸುತ್ತಾನೆ. ಪ್ರತಿದಿನ ಸ್ನಾನ ಮಾಡಿದ ಬಳಿಕ ಸೂರ್ಯನಿಗೆ ಅರ್ಘ್ಯ ನೀಡುವುದು ಉತ್ತಮ.
Image Credits: Google
ಕನ್ಯಾ ರಾಶಿ – ಲಕ್ಷ್ಮಿ ದೇವಿ ಈ ರಾಶಿಯವರ ರಕ್ಷಕ ದೇವತೆ. ಆಕೆಯ ಮಂತ್ರಗಳನ್ನು ಪಠಿಸುವ ಮೂಲಕ ಆಕೆಯ ಅನುಗ್ರಹ ದೊರಕುತ್ತದೆ.
Image Credits: Google
ತುಲಾ ರಾಶಿ – ಶ್ರೀಕೃಷ್ಣ ಪರಮಾತ್ಮನು ತುಲಾ ರಾಶಿಯ ರಕ್ಷಕ. ಅವನನ್ನು ಭಜನೆ, ಮಂತ್ರ ಪಠಣ ಮತ್ತು ಪೂಜೆಯ ಮೂಲಕ ಆರಾಧಿಸಬೇಕು.
Image Credits: Google
ವೃಶ್ಚಿಕ ರಾಶಿ – ಆಂಜನೇಯ ಸ್ವಾಮಿ ಈ ರಾಶಿಯವರ ರಕ್ಷಕ. ಆಂಜನೇಯನ ಮಂತ್ರಗಳು ಹಾಗೂ ಸ್ತೋತ್ರಗಳನ್ನು ಪಠಿಸುವ ಮೂಲಕ ಆತ್ಮಬಲ ಹೆಚ್ಚುತ್ತದೆ.
Image Credits: Google
ಧನು ರಾಶಿ – ಶ್ರೀಮಹಾವಿಷ್ಣು ಈ ರಾಶಿಯವರನ್ನು ರಕ್ಷಿಸುತ್ತಾನೆ. ಗುರುವಾರದಂದು ತುಪ್ಪದ ದೀಪ ಹಚ್ಚಿ ಪೂಜೆ ಮಾಡುವುದು ವಿಶೇಷ ಫಲ ನೀಡುತ್ತದೆ
Image Credits: Google
ಮಕರ ರಾಶಿ – ಆಂಜನೇಯ ಸ್ವಾಮಿ ಈ ರಾಶಿಯವರ ರಕ್ಷಕನಾಗಿದ್ದು, ಶನಿವಾರ ಆತನ ದರ್ಶನ ಮತ್ತು ಪೂಜೆ ಮಾಡುವುದು ಉತ್ತಮ
Image Credits: Google
ಕುಂಭ ರಾಶಿ – ಕಾಳಿ ಮತ್ತು ಶನಿ ದೇವರುಗಳು ಈ ರಾಶಿಯವರ ರಕ್ಷಕರು. ಅವರ ಪೂಜೆಯ ಮೂಲಕ ದುಷ್ಟ ಶಕ್ತಿಗಳಿಂದ ರಕ್ಷಣೆಯನ್ನು ಪಡೆಯಬಹುದು
Image Credits: Google
ಮೀನ ರಾಶಿ – ಶ್ರೀಹರಿ ಈ ರಾಶಿಯ ರಕ್ಷಕ ದೇವರು. ಬಾಳೆ ಮರದ ಪೂಜೆಯ ಮೂಲಕ ಅವರ ಅನುಗ್ರಹವನ್ನು ಪಡೆಯಬಹುದು
Image Credits: Google