ನಿವೃತ್ತಿಯ ನಂತರ ಅಥವಾ ಅದಕ್ಕೂ ಮೊದಲೇ ನೀವು ಮಾಸಿಕ ಆದಾಯವನ್ನು ಪಡೆಯಲು ಬಯಸಿದರೆ Post Office ಯೋಜನೆಯಲ್ಲಿ ರಾಷ್ಟೀಯ ಉಳಿತಾಯ ಮಾಸಿಕ ಖಾತೆಯನ್ನು ತೆರೆಯಿರಿ
ಪೋಸ್ಟ್ ಆಫೀಸ್ ರಾಷ್ಟೀಯ ಉಳಿತಾಯ ಮಾಸಿಕ ಆದಾಯ ಖಾತೆ ಯೋಜನೆಯಲ್ಲಿ ವಾರ್ಷಿಕವಾಗಿ 7.4% ಬಡ್ಡಿ ಲಭ್ಯವಿದೆ . ಇದರಿಂದ ಪ್ರತಿ ತಿಂಗಳು 9250 ರೂಪಾಯಿಯನ್ನು ಗಳಿಸಬಹುದು
POMIS ಖಾತೆಯನ್ನು ಅಪ್ರಾಪ್ತರ ಹೆಸರಿನಲ್ಲಿ ಹಾಗೂ 3 ವಯಸ್ಕರ ಹೆಸರಿನಲ್ಲಿ ಜಂಟಿಯಾಗಿ ತೆರೆಯಬಹುದಾಗಿದೆ. 10 ವರ್ಷಕ್ಕಿಂತ ಮೇಲ್ಪಟ್ಟ ಅಪ್ರಾಪ್ತರ ಹೆಸರಲ್ಲೂ ತೆಗೆಯಬಹುದು ಆದರೆ ಅದನ್ನ ಪೋಷಕರು ನೋಡಿಕೊಳ್ಳಬೇಕು
ಈ ಯೋಜನೆಯಡಿಯಲ್ಲಿ ಕನಿಷ್ಠ 1 ಸಾವಿರ ರೂಪಾಯಿಗಳಿಂದ ಖಾತೆ ಓಪನ್ ಮಾಡಬಹುದು. ಸಿಂಗಲ್ ಅಕೌಂಟ್ ನಲ್ಲಿ ಗರಿಷ್ಠ 9 ಲಕ್ಶದವರೆಗೆ ಠೇವಣಿ ಇಡಬಹುದು. ಜಂಟಿ ಅಕೌಂಟ್ನಲ್ಲಿ ಗರಿಷ್ಟ 15 ಲಕ್ಶದವರೆಗೆ ಠೇವಣಿ ಇಡಬಹುದು
ಪೋಸ್ಟ್ ಆಫೀಸ್ ನ ಈ ಯೋಜನೆಯಡಿ ಪ್ರತಿ ತಿಂಗಳು ಹಣವನ್ನು ತೆಗೆಯದಿದ್ದರೆ ಅದು ಪೋಸ್ಟ್ ಆಫೀಸ್ ನ ಉಳಿತಾಯ ಖಾತೆಯಲ್ಲಿರುತ್ತೆ. ಮತ್ತು ಮೂಲ ಮೊತ್ತದೊಂದಿಗೆ ಈ ಹಣವು ಸೇರಿ ಬಡ್ಡಿ ಸಿಗುತ್ತೆ
ಪೋಸ್ಟ್ ಆಫೀಸ್ ನ ಈ ಯೋಜನೆಯ ಅವಧಿ 5 ವರ್ಷಗಳು. ಈ ಯೋಜನೆ ಪೂರ್ತಿಯಾದ ಮೇಲೆ ನಿಮಗೆ ಹಣ ಸಿಗುತ್ತೆ,
ಠೇವಣಿ ಇಟ್ಟು, 1 ವರ್ಷದಲ್ಲಿ ಅಥವಾ 3 ವರ್ಷದ ಒಳಗೆ ಅಕೌಂಟ್ ಮುಚ್ಚಿದರೆ, ಠೇವಣಿಯ ಮೊತ್ತದ ಶೇ. 2ರಷ್ಟು ಹಣವನ್ನು ಕಡಿತ ಮಾಡಲಾಗುತ್ತದೆ ಮತ್ತು ಉಳಿದ ಮೊತ್ತವನ್ನು ನೀಡಲಾಗುತ್ತದೆ
3 ವರ್ಷದ ನಂತರ ಅಕೌಂಟ್ ಕ್ಲೋಸ್ ಮಾಡಿದರೆ, ಶೇ. 1ರಷ್ಟು ಹಣವನ್ನು ಕಡಿತ ಮಾಡಲಾಗುತ್ತದೆ.
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ ಠೇವಣಿ ಹಾಕಿದ ನಂತರ, ಮೊದಲ ವರ್ಷದವರೆಗೆ ನಿಮ್ಮ ಠೇವಣಿ ಮೊತ್ತವನ್ನು ಹಿಂಪಡೆಯಲು ಸಾಧ್ಯವಿಲ್ಲ. ಈ ಅವಧಿಯಲ್ಲಿ ಬಡ್ಡಿ ಮಾತ್ರ ನೀಡಲಾಗುತ್ತದೆ. 1 ವರ್ಷದ ಬಳಿಕ, ನೀವು ನಿಮ್ಮ ಅಕೌಂಟ್ ಮುಚ್ಚಬಹುದು.
ಕೇವಲ 20 ನಿಮಿಷ ಚಾರ್ಜ್
ಮಾಡಿದ್ರೆ 200 ಕಿ.ಮೀ ಮೈಲೇಜ್
ಕೊಡುತ್ತೆ