ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಎಬಿಡಿ, ಆರ್‌ಸಿಬಿ ತಂಡಕ್ಕೆ ಕಮ್‌ಬ್ಯಾಕ್‌ ಮಾಡುವ ಸುಳಿವು ನೀಡಿದ್ದರು

ಆದರೀಗ ಕಣ್ಣಿನ ಸಮಸ್ಯೆ ಎಬಿಡಿ ಕಮ್‌ಬ್ಯಾಕ್‌ ಕನಸಿಗೆ ಮುಳುವಾಗಿದೆ. ಕಣ್ಣಿನ ಗುಡ್ಡೆಯಲ್ಲಿ ಕಾಣಿಸಿಕೊಂಡ ಸಮಸ್ಯೆ ನಿರ್ವಹಣೆ ಸಲುವಾಗಿ  ಆಪರೇಷನ್ ಮಾಡಿಸಿಕೊಂಡಿದ್ದಾರೆ

ಈ ಕಾರಣದಿಂದಾಗಿ ಕ್ರಿಕೆಟ್ಗೆ ಮತ್ತೆ ಬರಲು ಸಾಧ್ಯವಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ 

ಅಭಿಮಾನಿಗಳು ಹಲವು ಬಾರಿ ಸ್ಟಾರ್‌ ಆಟಗಾರನ ಕಮ್‌ಬ್ಯಾಕ್‌ ಸಲುವಾಗಿ ಮನವಿ ಮಾಡಿದ್ದರು. ಆದರೆ, ಕಮ್‌ಬ್ಯಾಕ್‌ ಸಾಧ್ಯವಿಲ್ಲ ಎಂದು ಎಬಿಡಿ ಸ್ಪಷ್ಟ ಪಡಿಸಿದ್ದಾರೆ.

ಮುಂದಿನ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತೆರಳಲಿದ್ದೇನೆ. ಆದರೆ, ಅಲ್ಲಿ ಕ್ರಿಕೆಟ್‌ ಆಡುವುದಿಲ್ಲ  ಎಂದು ಹೇಳಿದ್ದಾರೆ 

ಐಪಿಎಲ್‌ ಟ್ರೋಫಿ ಗೆದ್ದು ಕೊಡದೇ ಇರುವುದಕ್ಕೆ ಆರ್‌ಸಿಬಿ ಅಭಿಮಾನಿಗಳನ್ನು ಮತ್ತು ಫ್ರಾಂಚೈಸಿಯನ್ನು ಕ್ಷಮೆ ಕೇಳಬೇಕಿದೆ 

ಇಷ್ಟು ವರ್ಷ ಬೆಂಬಲ ನೀಡಿದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ