
ತೃತೀಯ ವಿಶ್ವ ಹವ್ಯಕ ಸಮ್ಮೇಳನ 2024
ತೃತೀಯ ವಿಶ್ವ ಹವ್ಯಕ ಸಮ್ಮೇಳನ ಡಿಸೆಂಬರ್ 27 ರಿಂದ ಪ್ರಾರಂಭವಾಗಿದೆ. ತೃತೀಯ ವಿಶ್ವ ಹವ್ಯಕ ಸಮ್ಮೇಳನವನ್ನು ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಅಹಿಚ್ಛತ್ರದಿಂದ ತಂದ ಜ್ಯೋತಿಯ ಮೂಲಕ ದೀಪವನ್ನು ಬೆಳಗಿಸಿ ಶ್ರೀ ರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಉದ್ಘಾಟಿಸಿದರು.
ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಅಹಿಚ್ಛತ್ರದಿಂದ ತಂದ ಜ್ಯೋತಿಯ ಮೂಲಕ ದೀಪವನ್ನು ಬೆಳಗಿಸಲಾಯಿತು. ಅಹಿಚ್ಛತ್ರದ ರಾಮದೇವಾಲಯದಿಂದ ಈ ಜ್ಯೋತಿಯನ್ನು ತರಲಾಗಿದೆ. ಈ ದೇವಾಲಯದಲ್ಲಿ ಕಳೆದ 50 ವರ್ಷದಿಂದ ಅಖಂಡ ಜ್ಯೋತಿ ಬೆಳಗುತ್ತಿದೆ.
ವಿಶ್ವ ಹವ್ಯಕ ಸಮ್ಮೇಳನದ ಉದ್ಘಾಟನೆಯ ಸಮಯದಲ್ಲಿ {Vishwa Havyaka Sammelana 2024} ಡಾ ಗಿರಿಧರ್ ಕಜೆ, ವಿಶ್ವೇಶ್ವರ್ ಹೆಗಡೆ ಕಾಗೇರಿ, ವಿಜಯೇಂದ್ರ ಹಾಗೂ ಇನ್ನು ಹಲವು ಗಣ್ಯರು ಇದ್ದರು.
ಮಂತ್ರಾಲಯದ ಶ್ರೀರಾಘವೇಂದ್ರ ಮಠದ ಪರಮಪೂಜ್ಯ ಸುಬುಧೇಂದ್ರ ತೀರ್ಥ ಮಹಾಸ್ವಾಮಿಗಳು ಹಾಗೂ ಆದಿಚುಂಚನಗಿರಿ ಮಠದ ಸೌಮ್ಯನಾಥ ಮಹಾಸ್ವಾಮಿಗಳು ವಿಶ್ವ ಹವ್ಯಕ ಸಮ್ಮೇಳನದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದರು.


Haigunda Island: ಹವ್ಯಕ ಬ್ರಾಹ್ಮಣರ ಮೂಲ ಹೈಗುಂದ

