
ವಜ್ರಾಸನ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಯೋಗಾಸನದಲ್ಲಿ ಅತ್ಯಂತ ಜನಪ್ರಿಯವಾದಂತಹ ಆಸನ ವಜ್ರಾಸನ. ವಜ್ರಾಸನದಿಂದ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತೆ ಹಾಗೆಯೆ ಇದು ನಮ್ಮ ದೇಹವನ್ನು ಬಲಪಡಿಸುವಲ್ಲಿ ಕೂಡ ಸಹಾಯ ಮಾಡುತ್ತೆ. ಹಾಗಾದ್ರೆ ವಜ್ರಾಸನ ಮಾಡುವುದರಿಂದ ಯಾವೆಲ್ಲ ಲಾಭಗಳಿವೆ ಅಂತ ತಿಳಿಯಿರಿ.
- ಮನಸ್ಸನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತೆ
- ಬೆನ್ನು ನೋವಿಗೆ ಅತ್ಯಂತ ಪರಿಣಾಮಕಾರಿಯಾದ ಪರಿಹಾರ
- ಉತ್ತಮ ನಿದ್ರೆಗೆ ಸಹಾಯ ಮಾಡುತ್ತೆ ವಜ್ರಾಸನ
ಮದುಮೇಹ ನಿವಾರಣೆಗೆ ಸಹಾಯ:
ವಜ್ರಾಸನವು ಮದುಮೇಹ ನಿರ್ವಹಣೆಗೆ ಸಹಾಯ ಮಾಡುತ್ತೆ. ಇದು ಮೇದೋಜ್ಜೀರಕ ಗ್ರಂಥಿ ಹಾಗೂ ಕಿಬ್ಬೊಟೆಯ ಅಂಗಗಳನ್ನು ಉತ್ತೇಜಿಸುತ್ತದೆ. ಇನ್ಸುಲಿನ್ ಉತ್ಪಾದನೆ ಮಾಡಲು ನಮ್ಮ ದೇಹಕ್ಕೆ ಸಾಮರ್ಥ್ಯ ನೀಡುತ್ತೆ.
ಮನಸ್ಸಿಗೆ ನೀಡುತ್ತೆ ವಿಶ್ರಾಂತಿ:
ನೀವು ಪ್ರತಿದಿನ ಧ್ಯಾನ ಮಾಡಲು ಬಯಸಿದರೆ ವಜ್ರಾಸನವು ಅತ್ಯಂತ ಒಳ್ಳೆಯ ಆಸನವಾಗಿದೆ. ಹೀಗೆ ಮಾಡುವಾಗ ಉಸಿರಾಟದ ವ್ಯಾಯಾಮಗಳು ಮೆದುಳನ್ನು ಶಾಂತಗೊಳಿಸುವಲ್ಲಿ ಸಹಾಯ ಮಾಡುತ್ತೆ.
ಬೆನ್ನು ನೋವು ಕಡಿಮೆ ಆಗುತ್ತೆ:
ವಜ್ರಾಸನ ಮಾಡುವುದರಿಂದ ನಿಮ್ಮ ಕೆಳ ಬೆನ್ನಿನ ಸ್ನಾಯುಗಳನ್ನು ಬಲಪಡಿಸುತ್ತೆ. ಇದು ಬಿಗಿತ ಹಾಗೂ ಅಸ್ವಸ್ಥತೆಯನ್ನು ನಿವಾರಣೆ ಮಾಡುವಲ್ಲಿ ಸಹಾಯ ಮಾಡುತ್ತೆ. ಒಂದು ಅಧ್ಯಯನದಲ್ಲಿ ಹೇಳಿರುವ ಪ್ರಕಾರ ಪ್ರತಿದಿನ ವಜ್ರಾಸನ ಮಾಡುವ ವ್ಯಕ್ತಿಯ ಬೆನ್ನು ನೋವು ಕಡಿಮೆ ಆಗಿದೆ ಎಂದು ತಿಳಿದು ಬಂದಿದೆ.
ಉತ್ತಮ ನಿದ್ರೆಗೆ ಸಹಾಯ:
ವಜ್ರಾಸನ ಒತ್ತಡವನ್ನು ಕಡಿಮೆ ಮಾಡುತ್ತೆ. ಹಾಗೆಯೆ ನಿಮಗೆ ಉತ್ತಮ ನಿದ್ರೆಯನ್ನು ಪಡೆಯಲು ಸಹಾಯ ಮಾಡುತ್ತೆ.
ಜೀರ್ಣಾಂಗ ವ್ಯವಸ್ಥೆಗೆ ಸಹಾಯಕಾರಿ:
ವಜ್ರಾಸನವು ಕರುಳಿನ ಚಲನೆಯನ್ನು ಸುಗಮಗೊಳಿಸುತ್ತದೆ. ಇದು ಮಲಬದ್ದತೆಯನ್ನು ಕೂಡ ನಿವಾರಿಸುವಲ್ಲಿ ಸಹಾಯಕಾರಿ ಆಗಿದೆ. ಊಟದ ನಂತರ ಸ್ವಲ್ಪ ಸಮಯದ ವರೆಗೆ ವಜ್ರಾಸನ ಮಾಡುವುದರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತೆ/
ವಜ್ರಾಸನ ಮಾಡುವ ವಿಧಾನ
- ಮೊದಲು ನೀವು ಎರಡು ಕಾಲುಗಳನ್ನು ಮುಂದೆ ಚಾಚಿ ನೆಲದ ಮೇಲೆ ಕುಳಿತುಕೊಳ್ಳಬೇಕು
- ನಂತರ ಎರಡು ಕಾಲುಗಳನ್ನು ಮಂಡಿಯ ಬಳಿ ಬಗ್ಗಿಸಿ ಕುಳಿತುಕೊಳ್ಳಬೇಕು. ನಿಮ್ಮ ಎರಡು ಮಂಡಿಗಳು ಒಟ್ಟಿಗೆ ತಗುಲಿರಬೇಕು
- ನಿಮ್ಮ ಪೂರ್ತಿ ಶರೀರದ ಭಾರವನ್ನು ನಿಮ್ಮ ಹಿಮ್ಮಡಿಗಳ ಮೇಲೆ ಹಾಕಿರಬೇಕು
- ನಂತರ ನೇರವಾಗಿ ಕುಳಿತುಕೊಳ್ಳಬೇಕು
- ಮೊದಲು ಇದನ್ನು ಮಾಡುವಾಗ ಸ್ವಲ್ಪ ಕಷ್ಟವಾಗುತ್ತೆ. ಆದರೆ ಪ್ರತಿದಿನ ಮಾಡುವುದರಿಂದ ನಿಮ್ಮ ದೇಹ ವಜ್ರದಷ್ಟೇ ಬಲಶಾಲಿಯಾಗುತ್ತೆ.
ಬ್ರಾಹ್ಮೀ ಮೂಹೂರ್ತದಲ್ಲಿ ಎದ್ದರೆ ಏನೆಲ್ಲಾ ಲಾಭವಿದೆ ನೋಡಿ
ಬೆನ್ನು ನೋವು ಇದ್ದರೆ ಅಶ್ವಗಂಧಕ್ಕೆ ಇದನ್ನು ಬೆರೆಸಿ ಸೇವಿಸಿ
ನಿಮಗೆ ಜೀರ್ಣ ಕ್ರಿಯೆ ಸಮಸ್ಯೆ ಕಾಡುತ್ತಿದ್ದರೆ ಇದನ್ನು ಸೇವಿಸಿ
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.