
ಅಡುಗೆಯನ್ನು ಮಾಡಲು ಹಲವು ಬಗೆಯ ಎಣ್ಣೆಗಳನ್ನು ಜನರು ಬಳಸುತ್ತಾರೆ. ಹಾಗೆಯೆ ತುಂಬಾ ಜನರು ತೆಂಗಿನ ಎಣ್ಣೆಯನ್ನು ಸಹ ಬಳಸುತ್ತಾರೆ. ಹಲವು ಜನರು ತೆಂಗಿನ ಎಣ್ಣೆಯನ್ನು ಅಡುಗೆಗೆ ಬಳಸಿದ್ರೆ ಅದು ಹಾನಿಕರ ಎಂದು ಹೇಳುತ್ತಾರೆ, ಆದರೆ ಇನ್ನು ಹಲವಾರು ತೆಂಗಿನ ಎಣ್ಣೆ ಆರೋಗ್ಯಕ್ಕೆ ಒಳ್ಳೆಯದು ಅದನ್ನು ಅಡುಗೆಗೆ ಬಳಸಬಹುದು ಅಂತ ಹೇಳುತ್ತಾರೆ. ಆದರೆ ತೆಂಗಿನ ಎಣ್ಣೆಯನ್ನು ಅಡುಗೆಗೆ ಬಳಸುವುದು ಸೂಕ್ತ ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ.
ತೆಂಗಿನ ಎಣ್ಣೆಯನ್ನು ಬಳಸುವುದರಿಂದ ಅನೇಕ ಲಾಭಗಳು ನಮ್ಮ ದೇಹಕ್ಕೆ ಸಿಗುತ್ತೆ. ಈಗಂತೂ ಮಾರುಕಟ್ಟೆಯಲ್ಲಿ ತೆಂಗಿನ ಎಣ್ಣೆ ಸಿಗುತ್ತೆ ಆದರೆ ಎಲ್ಲಾ ತೆಂಗಿನ ಎಣ್ಣೆ ನಿಜವಾದ ಎಣ್ಣೆ ಆಗಿರುವುದಿಲ್ಲ. ಹಲವು ಕೆಮಿಕಲ್ ಮಿಶ್ರಿತ ಎಣ್ಣೆಗಳು ಸಹ ಸಿಗುತ್ತೆ. ಆದ ಕಾರಣ ಒರಿಜಿನಲ್ ತೆಂಗಿನ ಎಣ್ಣೆಯನ್ನು ಬಳಸುವುದರಿಂದ ನಮ್ಮ ದೇಹಕ್ಕೆ ಲಾಭಗಳು ಸಿಗುತ್ತವೆ.
ಇದನ್ನೂ ಓದಿ: ತಲೆಯಲ್ಲಿ ಎರಡು ಸುಳಿ ಇದ್ದರೆ ಏನು ಅರ್ಥ?
ತೆಂಗಿನ ಎಣ್ಣೆಯಿಂದ ಆರೋಗ್ಯಕ್ಕೆ ಸಿಗುವ ಲಾಭಗಳು
- ಹೃದಯದ ಆರೋಗ್ಯಕ್ಕೆ ಒಳ್ಳೆಯದು
- ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ
- ಡಯಾಬಿಟಿಸ್ ನಿಯಂತ್ರಣಕ್ಕೆ ಸಹಾಯಕಾರಿ
ಹೃದಯದ ಅರೋಗ್ಯ: ತೆಂಗಿನ ಎಣ್ಣೆಯಲ್ಲಿ ಅರ್ಧದಷ್ಟು ಲಾರಿಕ್ ಆಮ್ಲ ಇದೆ. ಈ ಆಮ್ಲವು ದೇಹದಲ್ಲಿ ಚೋಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತೆ. ಹಾಗೆಯೆ ಇದು ಬಿಪಿ ಅಥವಾ ರಕ್ತದೊತ್ತಡ ನಿಯಂತ್ರಿಸಲು ಸಹಾಯಕವಾಗಿದೆ.
ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ: ತೆಂಗಿನ ಎಣ್ಣೆಯನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುತ್ತೆ.
ಡಯಾಬಿಟಿಸ್ ನಿಯಂತ್ರಣಕ್ಕೆ ಸಹಾಯಕಾರಿ: ಶುಗರ್ ಸಮಸ್ಯೆ ಇರುವವರು ತೆಂಗಿನ ಎಣ್ಣೆಯನ್ನು ಬಳಸುವುದು ಉತ್ತಮ. ಯಾಕೆಂದರೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತೆ.
ಇದನ್ನೂ ಓದಿ: ಒಂದು ಸೊಳ್ಳೆ ಬತ್ತಿ ಹಚ್ಚಿದರೆ 100 ಸಿಗರೇಟ್ ಸೇದಿದಂತೆ !