
ಈ ಮೊಡವೆಗಳನ್ನು ಹೋಗಲಾಡಿಸಲು ಹಾಲು ನಮಗೆ ಬಹು ಉಪಯೋಗಿಯಾಗಿದೆ. ಅಷ್ಟೇ ಅಲ್ಲ ಹಾಲನ್ನು ಬಳಸುವುದರಿಂದ ನಮ್ಮ ಮುಖದ ಮೇಲಿರುವ ಕಲೆಗಳು ಕೂಡ ನಿವಾರಣೆ ಆಗುತ್ತದೆ. ಹಾಲನ್ನು ಬಳಸುವುದರಿಂದ ನಮ್ಮ ಮುಖದ ಮೇಲಿರುವ ಸತ್ತ ಚರ್ಮ ಇಲ್ಲದಂತಾಗುತ್ತದೆ. ಈ ಗುಣಗಳಿಂದ ಹಾಲನ್ನು ಸೌಂದರ್ಯ ವರ್ಧಕ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಅಲ್ಲದೆ ಹಾಲು ನಮ್ಮ ತ್ವಚೆಗೆ ಹೊಸ ಕಾಂತಿಯನ್ನು ನೀಡುತ್ತದೆ.
ಹಸಿ ಹಾಲನ್ನು ಮುಖಕ್ಕೆ ಹಚ್ಚುವುದರಿಂದ ನಮ್ಮ ಮುಖದ ಕಾಂತಿ ಹೆಚ್ಚುತ್ತದೆ. ಇದು ನಮ್ಮ ಮುಖದಲ್ಲಿರುವ ಎಣ್ಣೆ, ಜಿಡ್ಡು, ಮತ್ತು ಬ್ಯಾಕ್ಟೀರಿಯಾವನ್ನು ಹೋಗಲಾಡಿಸುತ್ತದೆ. ನಮ್ಮ ಮುಖಕ್ಕೆ ಸರಿಯಾದ ಕಾಂತಿಯನ್ನು ನೀಡುತ್ತದೆ. ಹಾಲಿನಿಂದ ಮುಖ ತೊಳೆದರೆ ಮುಖದ ಕಾಂತಿ ತಾನಾಗಿಯೇ ಹೆಚ್ಚುತ್ತದೆ. ಹಾಲಿನಲ್ಲಿರುವ ಲ್ಯಾಕ್ಟಿಕ್ ಆಮ್ಲವು ತ್ವಚೆಗೆ ಕಾಂತಿಯನ್ನು ನೀಡುವ ಕೆಲಸವನ್ನು ಮಾಡುತ್ತದೆ. ಇದು ವಯಸ್ಸಾದವರ ಚರ್ಮಕ್ಕೆ ಕೂಡ ಕಾಂತಿಯನ್ನು ನೀಡುತ್ತದೆ. ಹಾಲು ಸತ್ತ ಕೋಶಗಳನ್ನು ನಿಯುವರಿಸಿ ಹೊಸ ಕೋಶಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಒಂದು ಸೊಳ್ಳೆ ಬತ್ತಿ ಹಚ್ಚಿದರೆ 100 ಸಿಗರೇಟ್ ಸೇದಿದಂತೆ !
ಹಾಲು ಮುಖದ ಮೇಲಿರುವ ಕಲೆಗಳನ್ನು ನಿವಾರಿಸುತ್ತದೆ ಮತ್ತು ಮುಖದ ಮೇಲೇರುವ ರಂಧ್ರಗಳನ್ನು ಮುಚ್ಚಲು ಸಹಾಯ ಮಾಡುತ್ತದೆ. ಹಾಲನ್ನು ಬಳಕೆ ಮಾಡುವುದರಿಂದ ಮೊಡವೆಗಳು ಕೂಡ ನಿವಾರಣೆ ಆಗುತ್ತದೆ. ಹಾಲು ಸನ್ ಬರ್ನ್ ಇಂದ ನಮ್ಮ ತ್ವಚೆಯನ್ನು ರಕ್ಷಿಸುತ್ತದೆ. ಮತ್ತು ಹಾಲಿನಿಂದ ಬ್ಲಾಕ್ ಹೆಡ್ ಸಮಸ್ಯೆಯು ಕೂಡ ದೂರವಾಗುತ್ತದೆ. ಹೀಗೆ ಹಾಲಿನಿಂದ ನಮ್ಮ ಮುಖವನ್ನು ಮಸಾಜ್ ಮಾಡುವುದರಿಂದ ನಮ್ಮ ಮುಖ ಶುದ್ಧವಾಗಿರುತ್ತದೆ ಮತ್ತೆ ಮೊಡವೆ ಸಮಸ್ಯೆ ದೂರವಾಗುತ್ತದೆ. ಮುಖದ ತೇವಾಂಶವನ್ನು ಕಾಪಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ .
ಒಂದು ಚಮಚ ಗ್ರೀನ್ ಟೀಯನ್ನೂ ೩ ಚಮಾಚ ಹಾಲಿ ನೊಂದಿಗೆ ಬೆರೆಸಿ ಹಚ್ಚಿಕೊಳ್ಳಿ ಮತ್ತು ೨೦ ನಿಮಿಷದ ವರೆಗೆ ಇಟ್ಟುಕೊಂಡು ನಂತರ ಮುಖವನ್ನು ತೊಳೆಯಿರಿ ಇದರಿಂದ ನಿಮ್ಮ ಮುಖದ ಟೋನಿಂಗ್ ಹೆಚ್ಚಾಗುತ್ತದೆ. ಇದರೊಂದಿಗೆ ಹಾಲಿನೊಂದಿಗೆ ಜೇನುತುಪ್ಪ ಮತ್ತು ಆಲೋವೆರ ಜೆಲ್ ಅನ್ನು ಮಿಶ್ರಣ ಮಾಡಿ ಹಚ್ಚುವುದರಿಂದ ಮುಖದಲ್ಲಿರುವ ಬ್ಯಾಕ್ಟೀರಿಯಾ ನಿವಾರಣೆ ಆಗುತ್ತದೆ.