ನಾವು ಪ್ರತಿನಿತ್ಯ ಸೇವನೆ ಮಾಡುವ ಆಹಾರಗಳು ನಮ್ಮ ಮೆದುಳಿನ ಆರೋಗ್ಯವನ್ನು ಕೂಡ ಹೆಚ್ಚಿಸುತ್ತೆ. ಉತ್ತಮ ಆಹಾರ ಸೇವನೆಯು ನಮ್ಮ ಮೆದುಳಿನ ಆರೋಗ್ಯವನ್ನು ಕಾಪಾಡುತ್ತೆ. ಹಾಗೆಯೆ ನೆನಪಿನ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತೆ. ಮೆದುಳು ಆರೋಗ್ಯವಾಗಿರಲು ಕೆಲವು ಪೋಷಕಾಂಶಗಳು ಕೂಡ ಅಗತ್ಯವಾಗಿರುತ್ತೆ. ಇವುಗಳನ್ನು ಸೇವಿಸಿದ್ರೆ ಮೆದುಳಿನ ಕಾರ್ಯವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.
ಡಾರ್ಕ್ ಚೊಕೊಲೇಟ್ಸ್: ನಿಯಮಿತವಾಗಿ ಡಾರ್ಕ್ ಚಾಕಲೇಟ್ ಸೇವಿಸುವುದು ನಮ್ಮ ಮೆದುಳಿನ ಕಾರ್ಯಕ್ಕೆ ಸಹಾಯವಾಗುತ್ತೆ. ಈ ಚಾಕಲೇಟ್ ತಿನ್ನುವುದರಿಂದ ನಮ್ಮ ಮೆದುಳಿನ ಒತ್ತಡವನ್ನು ಕಡಿಮೆ ಮಾಡುತ್ತೆ. ಹಾಗೆಯೆ ಇದು ಖಿನ್ನತೆ ಹಾಗೂ ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತೆ.
ಮೊಟ್ಟೆ: ಮೊಟ್ಟೆಗಳಲ್ಲಿ ಬಿ ಜೀವಸತ್ವ ಜಾಸ್ತಿಯಾಗಿರುತ್ತೆ. ಬಿ ಜೀವಸತ್ವ ಕಡಿಮೆ ಆದರೆ ಬುದ್ಧಿಮಾಂದ್ಯತೆ ಸಮಸ್ಯೆ ಹಾಗೂ ಖಿನ್ನತೆಗೆ ಒಳಗಾಗಬಹದು. ಹಾಗಾಗಿ ಮೊಟ್ಟೆಯನ್ನು ಸೇವನೆ ಮಾಡುವುದು ಒಳ್ಳೆಯದು.
Electric heating for knee and shoulder
ಡ್ರೈ ಫ್ರೂಟ್: ಮೆದುಳಿನ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಡ್ರೈ ಫ್ರೂಟ್ ಸಹಾಯಕಾರಿಯಾಗಿದೆ. ವಾಲ್ ನಟ್, ಬಾದಾಮಿ, ಅಗಸೆ ಬೀಜಗಳು ಹಾಗೂ ಇತರ ಡ್ರೈ ಫ್ರೂಟ್ ಗಳಲ್ಲಿ ಒಮೇಗಾ 3 ಹೆಚ್ಚಾಗಿರುತ್ತೆ. ಇದು ನಮ್ಮ ಮೆದುಳಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಮೀನು: ಟ್ರೌಟ್, ಸಾಲ್ಮನ್ ಈ ತರಹದ ಮೀನುಗಳಲ್ಲಿ ಒಮೇಗಾ 3 ಅಂಶ ಇರುತ್ತೆ. ಇದು ಮೆದುಳಿನ ಸೆಲ್ಸ್ ಗಳಿಗೆ ತುಂಬಾನೇ ಒಳ್ಳೆಯದು. ಇವುಗಳು ಮೆದುಳಿನ ಸೆಲ್ಸ್ ಗಳನ್ನೂ ಆರೋಗ್ಯವಾಗಿಡುವುದರಲ್ಲಿ ಸಹಾಯ ಮಾಡುತ್ತೆ.
ಇವುಗಳನ್ನೂ ಓದಿ:
ಊಟ ಮಾಡಿದ ತಕ್ಷಣ ಮಲಗಿದರೆ ಏನೆಲ್ಲಾ ತೊಂದರೆ ಆಗುತ್ತೆ ನೋಡಿ
ಚಳಿಗಾಲದಲ್ಲಿ ಈ ಸಮಸ್ಯೆ ಇದ್ದರೆ ಮೊಸರನ್ನು ಸೇವಿಸಬೇಡಿ
ಬಿಸಿನೀರು ಸೇವನೆಯಿಂದ ಈ ಸಮಸ್ಯೆ ಬರಬಹುದು ಎಚ್ಚರ
ಕಿತ್ತಳೆ ಹಣ್ಣನ್ನು ಸೇವನೆ ಮಾಡಿ ಈ ಆರೋಗ್ಯ ಲಾಭವನ್ನು ಪಡೆಯಿರಿ
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.
