
ಬೆಲ್ಲ ಎಂದರೆ ಹಲವು ಜನರಿಗೆ ತುಂಬಾ ಇಷ್ಟ. ಹಾಗೆಯೆ ಬೆಲ್ಲವನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಹಲವು ಒಳ್ಳೆಯ ಪ್ರಯೋಜನಗಳಾಗುತ್ತವೆ. ಬೆಲ್ಲ ನಮ್ಮ ದೇಹದಲ್ಲಿರುವ ರಕ್ತ ವನ್ನು ಪರಿಶುದ್ದಗೊಳಿಸಲು ಸಹಾಯ ಮಾಡುತ್ತದೆ. ಹಾಗೆಯೆ ನಮ್ಮ ದೇಹದಲ್ಲಿ ಚಯಾಪಚಯವನ್ನು ಸುಧಾರಿಸುತ್ತದೆ. ಬೆಲ್ಲವನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಹಲವು ಲಾಭಗಳಿವೆ ಆದರೆ ಅತಿಯಾಗಿ ಬೆಲ್ಲವನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಕೆಲವು ಅಡ್ಡ ಪರಿಣಾಮಗಳನ್ನು ಬೀರುತ್ತವೆ.
ಅತಿಯಾಗಿ ಬೆಲ್ಲವನ್ನು ಸೇವಿಸುವುದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಸೀಮಿತ ಪ್ರಮಾಣದಲ್ಲಿ ಬೆಲ್ಲವನ್ನು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು.
ಮೆದುಳಿನ ಕಾರ್ಯವನ್ನು ಹೆಚ್ಚಿಸುತ್ತೆ ಈ ಆಹಾರಗಳು
ಬೆಲ್ಲವು ಅಧಿಕ ಪೋಷಕಾಂಶಗಳನ್ನು ಹೊಂದಿದೆ. ಕ್ಯಾಲ್ಸಿಯಂ, ಪೊಟ್ಯಾಷಿಯಂ ಸೇರಿದಂತೆ ಇನ್ನು ಹಲವು ಅಂಶಗಳನ್ನು ಹೊಂದಿದೆ ಆದರೆ ಅತಿಯಾಗಿ ಬೆಲ್ಲವನ್ನು ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚು ಮಾಡುತ್ತೆ.
ಕೆಲವು ಜನರಿಗೆ ಬೆಲ್ಲವನ್ನು ಸೇವಿಸುವುದರಿಂದ ಅಲರ್ಜಿ ಆಗುತ್ತೆ ಅಂತವರಿಗೆ ಜ್ವರ, ತಲೆನೋವು ಅಥವಾ ಆಯಾಸ ಮುಂತಾದ ಅಡ್ಡಪರಿಣಾಮಗಳು ಕಾಣಿಸಿಕೊಳ್ಳುತ್ತದೆ.