
ಮೆಟಾ [Meta] ಮಾಲೀಕತ್ವದ What’s App ನಲ್ಲಿ ಹಲವು ಹೊಸ ಹೊಸ ಫೀಚರ್ ಗಳನ್ನ ಬಿಡುಗಡೆ ಮಾಡಿದ್ದಾರೆ. ದಿನದಿಂದ ದಿನಕ್ಕೆ ವಾಟ್ಸ್ ಆಪ್ ಬಳಕೆದಾದರೂ ಕೂಡ ಹೆಚ್ಚಾಗುತ್ತಿದ್ದಾರೆ. What’s App ಮೆಸೇಜ್ ಅಪ್ಲಿಕೇಶನ್ ಅನ್ನು ಭಾರತದಲ್ಲಿಯೇ ಬರೋಬ್ಬರಿ 550 ಮಿಲಿಯನ್ ಜನರು ಬಳಸುತ್ತಾರೆ. ಅಂದರೆ 55 ಕೋಟಿ ಜನರು ಪ್ರತಿದಿನ ವಾಟ್ಸ್ ಆಪ್ ಬಳಸುತ್ತಾರೆ. ಈಗ ಆಂಡ್ರಾಯ್ಡ್ ಹಾಗೂ ಆಪಲ್ ಎರಡು ಬಳಕೆದಾದರಿಗೆ ಈ ಹೊಸ ಹೊಸ ಫೀಚರ್ ಗಳು ಕೆಲವೇ ದಿನಗಳಲ್ಲಿ ಬಳಕೆದಾರರಿಗೆ ಲಭ್ಯವಿದೆ.
ಚಾಟ್ ಲಾಕ್ ಒಪ್ಶನ್ {Chat Lock Feature}
ಇದು ಒಂದು ಅದ್ಬುತ ಫೀಚರ್ ಅಂದೇ ಹೇಳಬಹುದು. ನೀವು ಒಂದು ಮೆಸೇಜ್ ಸೆಂಡ್ ಮಾಡಿದರೆ ನೀವು ಬೇಕಾದರೆ ಅದನ್ನು ಲಾಕ್ ಮಾಡಬಹುದು ಅಥವಾ ಅದನ್ನು ಬೇಕಾದರೆ ಹೈಡ್ ಮಾಡಬಹುದು. ವಾಟ್ಸ್ ಆಪ್ ನಲ್ಲಿ ಚಾಟ್ ಅನ್ನು ಲಾಕ್ ಮಾಡಿದರೆ ಬಳಕೆದಾದರು ಅವರ ಫಿಂಗರ್ ಪ್ರಿಂಟ್ ಅಥವಾ ನಿಮ್ಮ ಪಾಸ್ ವರ್ಡ್ ಬಳಸಿ ಮಾತ್ರ ಆ ಸಂದೇಶವನ್ನು ನೋಡಬಹುದಾಗಿದೆ. ಈ ಆಯ್ಕೆ ಚಾಟ್ ಕಾಂಟಾಕ್ಟ್ ಹಾಗೂ ಗ್ರೂಪ್ ಇನ್ಫೋ ದಲ್ಲಿ ಇರುತ್ತದೆ.
ಸೆಂಡ್ ಮಾಡಿದ ಮೆಸೇಜ್ ಎಡಿಟ್ ಮಾಡಬಹುದು
ಚಾಟ್ ಕಳುಹಿಸಿದರೆ ನೀವು ಬೇಕಾದರೆ ಅದನ್ನು ಡಿಲೀಟ್ ಮಾಡಬಹುದಿತ್ತು ಆದ್ರೆ ಈಗ ಚಾಟ್ ನಲ್ಲಿ ಏನಾದ್ರು ಮಿಸ್ಟೇಕ್ ಆಗಿದ್ರೆ ಈಗ ಮುಂಬರುವ ಹೊಸ ಅಪ್ಡೇಟ್ ನಲ್ಲಿ ಚಾಟ್ ಎಡಿಟ್ ಮಾಡಬಹುದಾಗಿದೆ. ಈ ಹೊಸ ಫೀಚರ್ ಮೊದಲು ಐಓಎಸ್ ಬಳಕೆದಾದರಿಗೆ ಲಭ್ಯವಾಗಲಿದೆ ಎಂದು ತಿಳಿಸಲಾಗಿದೆ. ನೀವು ಕಳುಹಿಸಿದ ಮೆಸೇಜ್ ಅನ್ನು ಕೇವಲ 15 ನಿಮಿಷದ ಒಳಗೆ ಎಡಿಟ್ ಮಾಡಬಹುದಾಗಿದೆ.
ವಿಡಿಯೋ ಚಾಟ್ [Video Chat]
ಇದು ಒಂದು ಹೊಸ ಫೀಚರ್ ಶೀಘ್ರದಲ್ಲಿಯೇ ಬಳಕೆದಾರರಿಗೆ ಸಿಗಲಿದೆ. ನೀವು ಸಾಮಾನ್ಯವಾದ ಮೆಸೇಜ್ ಗಳಂತೆ ನೀವು 60 ಸೆಕೆಂಡ್ ಗಳ ಒಂದು ಶಾರ್ಟ್ ವಿಡಿಯೋ ಮಾಡಿ ನಿಮ್ಮ ಕಾಂಟಾಕ್ಟ್ ನಲ್ಲಿರುವವವರಿಗೆ ಕಳುಹಿಸಬಹುದಾಗಿದೆ. ಇದು ನೀವು ಕಳುಹಿಸುವ ಸಾಮಾನ್ಯವಾದ ವಿಡಿಯೋ ಕ್ಕಿಂತ ವಿಭಿನ್ನವಾಗಿದೆ.
ಈ ಟ್ರಿಕ್ ಫಾಲೋ ಮಾಡಿ ಪ್ರತಿ ಸಲ 100 ರೂಪಾಯಿ ಪಡೆಯಿರಿ
ಇವೆಲ್ಲದರ ಜೊತೆಗೆ ವಾಟ್ಸ್ ಆಪ್ ಡಿಸೈನ್ ನಲ್ಲಿ ಕೂಡ ಭಾರಿ ಬದಲಾವಣೆ ಕೂಡ ಹೊಸ ಅಪ್ಡೇಟ್ ನಲ್ಲಿ ಬರಲಿದೆ ಎಂದು ತಿಳಿಸಲಾಗಿದೆ. ಮೆಟಾ ತನ್ನ ವಾಟ್ಸ್ ಆಪ್ ಮೆಸೇಜ್ಜಿಂಗ್ ಅಪ್ಲಿಕೇಶನ್ ಅನ್ನು ಹೊಸ ಸ್ಟೈಲ್ ನಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ.
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.