
ಕೊರೊನ ಹೊಸ ತಳಿಗಳು ಬಂದ ಹಾಗೆ ಅದರ ಗುಣಲಕ್ಷಣಗಳು ಹಾಗೂ ಅದರ ತೀವ್ರತೆ ಕೂಡ ಬದಲಾಗುತ್ತ ಇರುತ್ತೆ. ಹಾಗಾಗಿ ಕೋವಿಡ್ ಬಂದರೂ ಕೂಡ ಅದನ್ನು ಗುರುತಿಸುವುದು ಸ್ವಲ್ಪ ಕಷ್ಟವಾಗಿದೆ. ಕೊರೊನ ನಮ್ಮ ದೇಹದ ಮೇಲೆ, ಹೃದಯದ ಮೇಲೆ ಹಾಗೆಯೆ ನರಮಂಡಲದ ಮೇಲೆಯೂ ಪರಿಣಾಮ ಬೀರುತ್ತೆ ಅಂತ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಮೊದಲ ಬಾರಿಗೆ ಕೊರೊನ ಬಂದಾಗ ಉಸಿರಾಟದ ಸಮಸ್ಯೆ, ವಾಸನೆ ಬಾರದಿರುವುದು ಹಾಗೂ ಬಾಯಿ ರುಚಿಯ ನಷ್ಟ ಇವೆಲ್ಲವೂ ಲಕ್ಷಣಗಳಾಗಿ ಕಂಡು ಬಂದಿದ್ದವು. ಈಗ ಕಾವಿಡ್ ಬಂದವರಲ್ಲಿ ಬೇರೆ ಬೇರೆ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ. ಅನೇಕರಲ್ಲಿ ಭುಜಗಳಲ್ಲಿ ನೋವು ಹಾಗೂ ಕಾಲುಗಳಲ್ಲಿ ತೀವ್ರವಾದ ನೋವು ಕಾಣಿಸಿಕೊಳ್ಳುತ್ತಿದೆ. ಇದನ್ನು ಈಗ ಮೈಯಾಲ್ಜಿಯಾ ಎಂದು ಕರೆಯುತ್ತಾರೆ.’
ಮೈಯಾಲ್ಜಿಯಾ ಎಂದರೇನು?
ಮೈಯಾಲ್ಜಿಯಾವನ್ನು ಸ್ನಾಯುಗಳ ನೋವು ಅಂತಾನೂ ಕರೆಯುತ್ತಾರೆ. ಇದು ವೈರಸ್ಗೆ ಪ್ರತಿಕ್ರಿಯೆಯಾಗಿ ಪ್ರತಿರಕ್ಷಣಾ ಕೋಶಗಳಿಂದ ಬಿಡುಗಡೆಯಾದ ಉರಿಯೂತದ ಅಣುಗಳ ಪರಿಣಾಮಗಳಿಂದ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಕೊರೊನ ಲಕ್ಷಣಗಳನ್ನು ಟ್ರ್ಯಾಕ್ ಮಾಡುವ ಅಪ್ಲಿಕೇಶನ್ ಝೋ ಕೋವಿಡ್ ಪ್ರಕಾರ ಮೈಯಾಲ್ಜಿಯಾವನ್ನು ಕೋವಿಡ್ಗೆ ಪ್ರಮುಖ ಲಕ್ಷಣವೆಂದು ಪರಿಗಣಿಸಲಾಗುತ್ತದೆ.
ಇದು ನಿಮ್ಮ ಭುಜಗಳಲ್ಲಿ ಅಥವಾ ಕಾಲುಗಳ ಮೇಲೆ ಪರಿಣಾಮ ಬೀರುತ್ತೆ. ಈ ನೋವುಗಳು ಕಡಿಮೆ ಆಗಲು ಎರಡರಿಂದ ಮೂರು ದಿನ ಬೇಕು ಅಂತ ಹೇಳಿದ್ದಾರೆ. ಆದ್ದರಿಂದ ನೀವು ಕೂಡ ಈ ತರಹದ ನೋವನ್ನು ಅನುಭವಿಸುತ್ತಿದ್ದರೆ ಒಮ್ಮೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ.
ಬಾಳೆ ಎಲೆಯಲ್ಲಿ ಊಟ ಮಾಡಿದರೆ ಯಾವೆಲ್ಲ ಲಾಭ ಸಿಗುತ್ತೆ ನೋಡಿ
ಚಳಿಗಾಲದಲ್ಲಿ ತಪ್ಪದೆ ಕುಡಿಯಿರಿ ಬೆಲ್ಲದ ಹಾಲು
ಆಹಾರ ಸೇವನೆ ಮಾಡುವಾಗ ನೆಲದ ಮೇಲೆ ಯಾಕೆ ಕುಳಿತುಕೊಳ್ಳಬೇಕು
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.