The Kerala Story Kannada: ದಿ ಕೇರಳ ಸ್ಟೋರಿ ಟೀಸರ್ 3 Nov 2022 ರಂದು ರಿಲೀಸ್ ಆಗಿತ್ತು. ಟೀಸರ್ ಬಿಡುಗಡೆ ಆದ ಕೆಲವೇ ದಿನಗಳಲ್ಲಿ 32,000 ಮಹಿಳೆಯರನ್ನು ಬಲವಂತವಾಗಿ ಮತಾಂತರ ಮಾಡಿ ಉಗ್ರಗಾಮಿ ಸಂಘಟನೆಗೆ ಸೇರಿಸಲಾಗಿದೆ ಎಂಬ ಹೇಳಿಕೆಯಿಂದ ಭಾರಿ ವಿವಾದವನ್ನು ಹುಟ್ಟಿ ಹಾಕಿತ್ತು. ಈಗ ದಿ ಕೇರಳ ಸ್ಟೋರಿ [ The Kerala Story ] ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ. ವಿಪುಲ್ ಅಮೃತ್ಲಾಲ್ ಶಾ ಚಿತ್ರದ ನಿರ್ಮಾಪಕ ಮತ್ತು ಸೃಜನಶೀಲ ನಿರ್ದೇಶಕರಾಗಿದ್ದು, ಅದಾ ಶರ್ಮಾ, ಯೋಗಿತಾ ಬಿಹಾನಿ, ಸೋನಿಯಾ ಬಲಾನಿ ಮತ್ತು ಸಿದ್ಧಿ ಇದ್ನಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
The Kerala Story ಟ್ರೈಲರ್ ನಲ್ಲಿ ಏನಿದೆ?
ದಿ ಕೇರಳ ಸ್ಟೋರಿ ಚಿತ್ರವು 5 ಮೇ 2023 ರಂದು ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಈ ಚಿತ್ರದ ಟ್ರೈಲರ್ನಲ್ಲಿ ಮೊದಲು ಕೇರಳದ ಮಹಿಳೆ ಶಾಲಿನಿ ಉನ್ನಿಕೃಷ್ಣನ್ ಪರಿಚಯದೊಂದಿಗೆ ಪ್ರಾರಂಭವಾಗುತ್ತೆ. ಶಾಲಿನಿ ಐಸಿಸ್ಗೆ ಕೆಲಸ ಮಾಡುತ್ತಿದ್ದ ಕಾರಣ ಅವಳನ್ನು ಅಧಿಕಾರಿಗಳು ವಿಚಾರಣೆಯನ್ನು ಮಾಡುತ್ತಿರುತ್ತಾರೆ. ಆಗ ಅವಳು ನಾನು ಐಸಿಸ್ಗೆ ಯಾಕೆ ಸೇರಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಹೇಳುತ್ತಿರುತ್ತಾಳೆ.
ನಂತರ ಶಾಲಿನಿ ಉನ್ನಿಕೃಷ್ಣನ್ ಹಳೆಯ ಕಥೆಗಳನ್ನು ವಿವರಿಸುತ್ತಿರುತ್ತಾಳೆ. ಅವಳು ಹೇಗೆ ಇಸ್ಲಾಂ ಧರ್ಮಕ್ಕೆ ಮತಾಂತರವಾದಳು ಅಲ್ಲಿ ಅವಳಿಗೆ ಏನೆಲ್ಲಾ ಆಗಿತ್ತು ಎಂಬುದನ್ನು ನೀವು ಟ್ರೈಲರ್ ನಲ್ಲಿ ನೋಡಬಹುದಾಗಿದೆ. ಮದುವೆಯ ನಂತರ ಅವಳನ್ನು ಪಾಕಿಸ್ತಾನಕ್ಕೆ ಕಳ್ಳಸಾಗಾಣಿಕೆ ಮಾಡುವುದನ್ನು ಟ್ರೈಲರ್ ನಲ್ಲಿ ತೋರಿಸಲಾಗಿದೆ.
ವಿರೋಧವನ್ನು ಎದುರಿಸುತ್ತಿದೆ ದಿ ಕೇರಳ ಸ್ಟೋರಿ ಚಿತ್ರ
ಈ ಚಿತ್ರದ ಟೀಸರ್ ಬಿಡುಗಡೆ ಆದ ಕೆಲವು ದಿನಗಳ ನಂತರ ಈ ಚಿತ್ರದ ವಿರುದ್ಧ ಅನೇಕ ವಿರೋಧ ವ್ಯಕ್ತವಾಗಿದೆ. ಹಾಗೆಯೆ ಈ ಚಿತ್ರವನ್ನು ಬ್ಯಾನ್ ಮಾಡಬೇಕು ಎಂದು ಹೇಳಿದ್ದರು. ಈ ಟೀಸರ್ ನಲ್ಲಿ ತಪ್ಪು ಮಾಹಿತಿಯನ್ನು ನೀಡಲಾಗಿದೆ ಕೇರಳದಲ್ಲಿ ಈ ಟೀಸರ್ ನಲ್ಲಿ ತೋರಿಸಿದಂತೆ ಏನು ನಡೆಯುತ್ತಿಲ್ಲ ಎಂದು ಹೇಳಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
Source and information OP India
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
