
ಹರಿಯಾಣದ ರೋಹ್ಟಕ್ ಬಸ್ ನಿಲ್ದಾಣದ ಬಳಿ ಪತ್ತೆಯಾದ ಸೂಟ್ಕೇಸ್ನಲ್ಲಿ ಕಾಂಗ್ರೆಸ್ ಕಾರ್ಯಕರ್ತೆಯ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟವರನ್ನು 22 ವರ್ಷದ ಹಿಮಾನಿ ನರ್ವಾಲಾ ಎಂದು ಗುರುತಿಸಲಾಗಿದೆ. ಹಿಮಾನಿ ನರ್ವಾಲಾ ಅವರು ಸ್ಥಳೀಯವಾಗಿ ಜನಪ್ರಿಯ ಕಾಂಗ್ರೆಸ್ ಕಾರ್ಯಕರ್ತೆಯಾಗಿದ್ದರು.
ಹಿಮಾನಿ, ಭಾರತ್ ಜೋಡೋ ಯಾತ್ರೆಯ (Bharath Jodo yathra) ಸಂದರ್ಭದಲ್ಲಿ ರಾಹುಲ್ ಗಾಂಧಿಯವರೊಂದಿಗೆ (Rahul Gandhi) ಹೆಜ್ಜೆ ಹಾಕಿದ ನಂತರ ಜನಪ್ರಿಯತೆ ಗಳಿಸಿದ್ದರು. ಈ ಯಾತ್ರೆಯ ವೇಳೆ ರಾಹುಲ್ ಗಾಂಧಿಯವರೊಂದಿಗೆ ತೆಗೆದ ಹಲವಾರು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಹಿಮಾನಿ ಅವರ ಹತ್ಯೆಯು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಕಾಂಗ್ರೆಸ್ ಪಕ್ಷವು ಈ ಪ್ರಕರಣದ ಬಗ್ಗೆ ಗಂಭೀರ ತನಿಖೆ ನಡೆಸುವಂತೆ ಒತ್ತಾಯಿಸಿದೆ.
ಹರಿಯಾಣದ ರೋಹ್ಟಕ್ನ ಸಂಪ್ಲಾ ಬಸ್ ನಿಲ್ದಾಣದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಅವರ ಶವವು ಸೂಟ್ಕೇಸ್ನಲ್ಲಿ ಪತ್ತೆಯಾಗಿದೆ. ಈ ಪ್ರಕರಣದ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ನೀಡಿದ್ದಾರೆ: ಹಿಮಾನಿ ಅವರ ಕುತ್ತಿಗೆಗೆ ದುಪ್ಪಟ್ಟದಿಂದ ಸುತ್ತಲಾಗಿತ್ತು, ಇದು ಕೊಲೆ ಎಂದು ಸೂಚಿಸುತ್ತದೆ. ಅವರ ಕೈಗಳಿಗೆ ಮೆಹಂದಿ ಹಾಕಲಾಗಿತ್ತು, ಇದು ಪ್ರಕರಣಕ್ಕೆ ಮತ್ತಷ್ಟು ಗೊಂದಲವನ್ನುಂಟು ಮಾಡಿದೆ.
ಇದನ್ನೂ ಓದಿ: TV ಶೋ ಒಂದರಲ್ಲಿ IIT ಬಾಬಾ ಮೇಲೆ ಹಲ್ಲೆ
ಹಿಮಾನಿ ಸಾವಿನ ಬೆನ್ನಲ್ಲೇ, ಕಾಂಗ್ರೆಸ್ ನಾಯಕರ ಜೊತೆಗಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಇದನ್ನೂ ಓದಿ: ಹೆಂಡತಿ ಕಾಟಕ್ಕೆ ಬೇಸತ್ತು ಲೈವ್ ನಲ್ಲೆ ಪ್ರಾಣ ಬಿಟ್ಟ IT ಕಂಪನಿ ಮ್ಯಾನೇಜರ್
Sri Rama is a seasoned journalist with four years of experience, specializing in capturing and analyzing the latest news and trending stories. He brings extensive expertise in news collection, reporting, and interviewing across a broad spectrum of topics, including politics.