ತುಂಬಾ ಜನರು ನಾಯಿಗೆ ಏನಾದ್ರು ಆದರೆ ಅಥವಾ ಇನ್ಯಾವುದೊ ಪ್ರಾಣಿಗೆ ಏನಾದ್ರು ಆದರೆ ಅದನ್ನ ನಾನಾರೀತಿಯಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ಹಾಕುವುದು ಆ ವಿಷಯವನ್ನು ವೈರಲ್ ಮಾಡುವುದು ಸೋಶಿಯಲ್ ಮೀಡಿಯಾದಲ್ಲಿ ತೋರಿಸೋದನ್ನು ಮಾಡ್ತಾರೆ. ಆದರೆ ಮನುಷ್ಯರಿಗೆ ಹಾಲು ಕೊಡುತ್ತಿರುವ ಹಸುಗಳು ಇಷ್ಟು ದೊಡ್ಡ ಕಾಯಿಲೆ ಇಂದ ಬಳಲುತ್ತಿದ್ದರೂ ಯಾವುದೇ ರೀತಿಯ ಸಂಚಲನ ಕಂಡುಬರುತ್ತಿಲ್ಲ. ಮಾಧ್ಯಮಗಳಲ್ಲಿ ಇದರ ಬಗ್ಗೆ ಯಾವುದೇ ರೀತಿಯಲ್ಲಿ ವರದಿಯನ್ನು ಕೂಡ ದೊಡ್ಡ ಪ್ರಮಾಣದಲ್ಲಿ ಮಾಡ್ತಾ ಇಲ್ಲ. ಪ್ರತಿದಿನ ಲಕ್ಷಾಂತರ ಸಂಖ್ಯೆಯಲ್ಲಿ ಹೊಸ ಲಂಪಿ ವೈರಸ್ ಕಾಯಿಲೆಗೆ ಹಸುಗಳು ತುತ್ತಾಗುತ್ತಿವೆ ಸಹಸ್ರಾರು ಸಂಖ್ಯೆಯಲ್ಲಿ ಪ್ರತಿದಿನ ಗೋವುಗಳು ಸಾಯುತ್ತಿವೆ. ಹೀಗಾಗಿ ಈ ವಿಷಯದ ಬಗ್ಗೆ ಎಲ್ಲರು ತಿಳಿದು ಕೊಳ್ಳಬೇಕು ಹಾಗಾಗಿ ಪೂರ್ತಿಯಾಗಿ ಓದಿ ತಪ್ಪದೆ ಎಲ್ಲರೊಂದಿಗೆ ಶೇರ್ ಮಾಡಿ. ಲಂಪಿ ವೈರಸ್ ಬರದೇ ಇರುವ ಹಾಗೆ ತಡೆಯೋಣ.
ಲಂಪಿ ವೈರಸ್ ಇದೇನು ಸದ್ಯಕ್ಕೆ ಮನುಷ್ಯರಿಗೆ ಹರಡುತಿಲ್ಲ ಕೇವಲ ಪ್ರಾಣಿಯಿಂದ ಪ್ರಾಣಿಗಳಿಗೆ ಹರಡುತ್ತಿವೆ. ಮುಂದೊಂದು ದಿನ ಬಂದ್ರು ಬರಬಹುದು ಈಗ ಸದ್ಯ ಬರಲ್ಲ. ಈ ವೈರಸ್ ಸೊಳ್ಳೆ,ನೊಣಗಳಿಂದ ಒಂದು ಪ್ರಾಣಿಯಿಂದ ಪ್ರಾಣಿಗೆ ಹರಡುತ್ತೆ. ಹೆಚ್ಚಾಗಿ ಹಸು ಕರುಗಳಿಗೆ, ಎಮ್ಮೆಗಳಿಗೆ ಸಮಸ್ಯೆಯನ್ನು ತರುತ್ತೆ ಅಂತ ಫುಡ್ ಅಂಡ್ ಅಗ್ರಿಕಲ್ಚರ್ ಆರ್ಗನೈಜೇಷನ್ ಆ ದಿ ಯುನೈಟೆಡ್ ಸ್ಟೇಟ್ಸ್ ಹೇಳಿದೆ. [Food and Agriculture organization of the United States] ಒಂದು ಹಸುವಿನ ಬಾಯಿಂದ ಬರುವ ಜೊಲ್ಲಿನಿಂದ ಅವುಗಳ ಆಹಾರದಲ್ಲಿ ಸೇರಿಕೊಳ್ಳುತ್ತೆ. ಇವಗಳನ್ನು ಬೇರೆ ಹಸುಗಳು ತಿಂದರೆ ಅವುಗಳಿಗೂ ಕೂಡ ಸೋಂಕು ಹರಡುತ್ತೆ. ಲಂಪಿ ವೈರಸ್ ನೊಂದ ಹಸುಗಳ ಮೈಮೇಲೆ ಹೆಚ್ಚಾಗಿ ಸಣ್ಣ ಸಣ್ಣ ಗಂಟುಗಳ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಇದು ಸುಮಾರು ಎರಡರಿಂದ ಐದು ಸೆಂಟಿ ಮೀಟರ್ ಗಳಷ್ಟು ದೊಡ್ಡದಾಗುತ್ತದೆ. ಇದು ಹಸುಗಳ ತಲೆ, ಕುತ್ತಿಗೆ, ಕೆಚ್ಚಲು, ಜನನಾಂಗ, ಗುದದ್ವಾರದ ಬಳಿ ಹೆಚ್ಚಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ನಂತರ ಈ ಗಂಟುಗಳು ಹುಣ್ಣಾಗಿ ಬದಲಾಗುತ್ತೆ ನಂತರ ಆ ಗಾಯ ದೊಡ್ಡದಾಗಿ ತುಂಬಾ ಶೋಚನೀಯ ಪರಿಸ್ಥಿತಿಗೆ ಆ ಹಸುಗಳು ಬರುತ್ತವೆ. ಹೀಗೆ ಆದ ಹಸುಗಳನ್ನು ನೋಡಲು ಕೂಡ ಸಾಧ್ಯವಾಗುವುದಿಲ್ಲ ಅವುಗಳನ್ನು ನೋಡಿದರೆ ಮನಕಲಕುತ್ತೆ. ಈ ಕಾಯಿಲೆ ಬಂದಾಗ ಹಸುಗಳಿಗೆ ತುಂಬಾ ಜ್ವರ ಕಾಣಿಸಿಕೊಳ್ಳುತ್ತೆ ಹಾಲನ್ನು ಕಡಿಮೆ ಕೊಡುತ್ತೆ ಹಾಗೆ ಹಸುಗಳ ಬಾಯಲ್ಲಿ, ಮೂಗಲ್ಲಿ ಜೊಲ್ಲು ಬರುತಿರುತ್ತೆ. ಜಾನುವಾರುಗಳು ಆಹಾರಗಳು ಕೂಡ ಸೇವಿಸಲು ಸಾಧ್ಯವಾಗುವುದಿಲ್ಲ. ಗೋವುಗಳ ಮೈತುಂಬ ಗಾಯಗಳಾಗಿರುತ್ತವೆ. ಒಂದು ವೇಳೆ ಹಸುಗಳು ಗರ್ಭಪಾತ ಆಗುವ ಸಂಭವ ಕೂಡ ಇದೆ ಹಾಗೆ ಹಸುಗಳಿಗೆ ಬಂಜೆತನ ಕೂಡ ಬರಬಹುದು. ಸೋಂಕು ತಗುಲಿದ ನಂತರ ಕಾಣಿಸಿಕೊಳ್ಳಲು ಸುಮಾರು ೨೮ ದಿನ ಬೇಕಾಗುತ್ತೆ ಅಂತ ಹೇಳಲಾಗಿದೆ.
ಇದನ್ನು ಓದಿ; ಹಸುಗಳಿಗೆ ಕಾಡುತ್ತಿದೆ ಲಂಪಿ ವೈರಸ್
ಗೋಮಾತೆಯ ನೋವು ಯಾರಿಗೂ ಕಾಣುತ್ತಿಲವೇ? ಭಾರತಕ್ಕೆ ಅತಿ ದೊಡ್ಡ ಗಂಡಾಂತರ
ಈ ಕಾಯಿಲೆ ಬಂದ ನಂತರ ಹಸುಗಳ ಸಾವಿನ ಸಂಖ್ಯೆ ತುಂಬಾ ಜಾಸ್ತಿ ಆಗಿದೆ. ಹೆಚ್ಚಾಗಿ ರಾಜಸ್ತಾನದಲ್ಲಿ ಕಾಯಿಲೆ ಹರಡುವ ವೇಗ ಹಾಗು ಸಾವಿನ ಪ್ರಮಾಣ ಜಾಸ್ತಿಯಾಗಿದೆ. ಕರ್ನಾಟಕ ಸೇರಿದಂತೆ ಭಾರತದಾದ್ಯಂತ ಈ ವೈರಸ್ ಹರಡಿಕೊಂಡಿದೆ. ಕರ್ನಾಟಕದ ಹಾವೇರಿ ಗದಗ ಜಿಲ್ಲೆಗಳಿಗೂ ಸೋಂಕು ಕಾಲಿಟ್ಟಿದೆ. ಹಾವೇರಿ ಜಿಲ್ಲೆಯಲ್ಲಿ ದಿನಕ್ಕೆ ೧೦೦ ಕ್ಕೂ ಹೆಚ್ಚು ಹಸುಗಳು ಮೃತಪಟ್ಟಿವೆ ಅಂತ ವರದಿಯಾಗಿದೆ. ಭಾರತ ಒಂದು ಕೃಷಿಪ್ರಧಾನ ದೇಶ ಹಾಗೆಯೆ ಭಾರತ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುವ ದೇಶ. ಪ್ರತಿದಿನ ಭಾರತದಲ್ಲಿ ೨೧ ಕೋಟಿ ಟನ್ ಗಳಷ್ಟು ಹಾಲನ್ನು ಉತ್ಪಾದನೆ ಮಾಡುತ್ತೆ. ೩೭ ವಿವಿಧ ತಳಿಗಳ ಹಸುಗಳು ಭಾರತದಲ್ಲಿದೆ. ಭಾರತದಲ್ಲಿ ಹಸುವನ್ನು ಮಾತೆಯ ರೂಪದಲ್ಲಿ ಪೂಜಿಸಲಾಗುತ್ತೆ. ಹಸುಗಳನ್ನು ಮನೆಯ ಸದಸ್ಯನಂತೆ ನೋಡಿಕೊಳ್ಳುವ ಸಂಸ್ಕೃತಿ ನಮ್ಮ ದೇಶದ್ದು.
ಮೊದಲು ಇದು ಬಂಗಾಳದೇಶದಲ್ಲಿ ಕಾಣಿಸಿಕೊಂಡಿದ್ದು ನಂತ್ರ ಕೋಲ್ಕತ್ತಾ ಮೂಲಕ ಪೂರ್ತಿ ಭಾರತವನ್ನು ಹರಡಿಕೊಂಡಿದೆ. ಮಾಹಿತಿಯ ಪ್ರಕಾರ ಅಕ್ರಮವಾಗಿ ಹಸುಗಳನ್ನು ಬಾಂಗ್ಲಾದೇಶಕ್ಕೆ ಸಾಗಿಸುವ ಸಂದರ್ಭದಲ್ಲಿ ಈ ವೈರಸ್ ಭಾರತಕ್ಕೆ ಬಂದಿದೆ ಎಂದು ಹೇಳಲಾಗಿದೆ. ಸೋಂಕಿತ ಹಸುಗಳ ಹಾಲನ್ನು ಕುಡಿದರೆ ಏನಾಗುತ್ತೆ? ಈ ಹಸುಗಳ ಹಾಲನ್ನು ಕುಡಿಯುವುದರಿಂದ ಮನುಷ್ಯನಿಗೆ ಯಾವುದೇ ರೀತಿಯ ತೊಂದರೆ ಬರುವುದಿಲ್ಲ ಎಂದು ಹೇಳಿದ್ದಾರೆ.
ರಾಜಸ್ಥಾನ ದಲ್ಲಿ ಹಸುಗಳ ಸಾವಿನ ಸಂಖ್ಯೆ ತುಂಬಾ ಜಾಸ್ತಿ ಆಗಿದೆ. ಪಂಜಾಬ್ ನಲ್ಲಿ ಕೂಡ ಹಾಲಿನ ಉತ್ಪಾದನೆ ಕಡಿಮೆ ಆಗಿದೆ ಎಂದು ವರದಿಯಾಗಿದೆ. ಜೂಲೈ ತಿಂಗಳಿನಿಂದ ಈ ಸೋಂಕು ಹರಡುತ್ತಿದೆ. ಸುಮಾರು ೭೫ ಸಾವಿರ ಹಸುಗಳು ಸಾವನ್ನಪಿದೆ.
ಇವುಗಳನ್ನು ತಡಿಯಲು ಹಸುಗಳ ಸಾಗಾಟಕ್ಕೆ ಬ್ರೇಕ್ ಹಾಕಬೇಕು ಹಾಗೆಯೆ ಸೋಂಕಿತ ಹಸುಗಳಿಂದ ಬೇರೆ ಹಸುಗಳನ್ನು ದೂರ ಇಡಬೇಕು. ಕೊಟ್ಟಿಗೆಯನ್ನು ಸ್ವಚ್ಛವಾಗಿ ಇಡಬೇಕು ಸೊಳ್ಳೆ, ನೊಣ ಬರದಂತೆ ನೋಡಬೇಕು. ಈಗಾಗಲೇ ಕೆಲವೊಂದು ಕಡೆ ಲಸಿಕೆಯನ್ನು ಕೂಡ ಕೊಟ್ಟಿದಾರೆ. ಇನ್ನೇನು ಒಂದರಿಂದ ಎರಡು ತಿಂಗಳಿನಲ್ಲಿ ಭಾರತದಾದ್ಯಂತ ಲಸಿಕೆ ಸಿಗಲಿದೆ ಹಾಗೆ ಇದು ಪರಿಣಾಮಕಾರಿಯಾಗಿದೆ ಎಂದು ಸರ್ಕಾರ ಹೇಳಿದೆ. ಈ ಕಾಯಿಲೆ ಗೆ ಯಾವುದೇ ಪರ್ಟಿಕ್ಯುಲರ್ ಟ್ರೀಟ್ಮೆಂಟ್ ಇಲ್ಲ ಇದುಬರದಂತೆ ನೋಡಿಕೊಳ್ಳುವುದೇ ಮುಖ್ಯ ಅಂತ ಹೇಳಿದ್ದಾರೆ.