
- ಮೊಹಮ್ಮದ್ ಘಜ್ನಿ ಕೈಗೆ ಸಿಕ್ಕಿ ತುಂಡಾಗಿದ್ದ ಶಿವಲಿಂಗ
- ಸೀತಾರಾಮ ಶಾಸ್ತ್ರಿ ಅವರು ಕಳೆದ 21 ವರ್ಷಗಳಿಂದ ಸೋಮನಾಥದ ಪವಿತ್ರ ಶಿವಲಿಂಗದ ತುಣುಕುಗಳನ್ನು ಸಂರಕ್ಷಿಸುತ್ತಿದ್ದಾರೆ
ಗುಜರಾತಿನ ಸೋಮನಾಥ ದೇವಾಲಯವು ಭಾರತೀಯ ಇತಿಹಾಸದಲ್ಲಿ ಅತ್ಯಂತ ಪ್ರಾಚೀನ ಮತ್ತು ಪ್ರಸಿದ್ಧವಾದ ಶಿವನ ದೇವಾಲಯಗಳಲ್ಲಿ ಒಂದಾಗಿದೆ. 11ನೇ ಶತಮಾನದಲ್ಲಿ ಮೊಹಮ್ಮದ್ ಘಜ್ನಿಯ ಆಕ್ರಮಣದ ಸಮಯದಲ್ಲಿ ಈ ದೇವಾಲಯವನ್ನು ಧ್ವಂಸಗೊಳಿಸಲಾಯಿತು ಮತ್ತು ಅದರಲ್ಲಿರುವ ಪ್ರಾಚೀನ ಶಿವಲಿಂಗವನ್ನು ಒಡೆದು ಹಾಕಲಾಯಿತು.
ಇದೀಗ, ಅರ್ಚಕ ಸೀತಾರಾಮ ಶಾಸ್ತ್ರಿ ಅವರು ತಮ್ಮ ಬಳಿ ಈ ಶಿವಲಿಂಗದ ಪ್ರಾಚೀನ ಅವಶೇಷಗಳು ಇರುವುದಾಗಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ದೇವಾಲಯದಲ್ಲಿ ಶಿವಲಿಂಗ ಮತ್ತೆ ಪ್ರತಿಷ್ಠಾಪನೆಯಾಗುತ್ತ ಎನ್ನುವ ಕುತೂಹಲ ಶುರುವಾಗಿದೆ.
ಸೀತಾರಾಮ ಶಾಸ್ತ್ರಿ ಅವರು ಕಳೆದ 21 ವರ್ಷಗಳಿಂದ ಸೋಮನಾಥದ ಪವಿತ್ರ ಶಿವಲಿಂಗದ ತುಣುಕುಗಳನ್ನು ಸಂರಕ್ಷಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಈ ತುಣುಕುಗಳನ್ನು ಸೋಮನಾಥ ದೇವಾಲಯದಲ್ಲಿ ಮರುಪ್ರತಿಷ್ಠಾಪಿಸುವ ಕನಸನ್ನು ಅವರು ಹೊಂದಿದ್ದಾರೆ. ಈ ಉದ್ದೇಶವನ್ನು ಸಾಧಿಸಲು ಅವರು ಆಧ್ಯಾತ್ಮಿಕ ಗುರು ರವಿಶಂಕರ್ ಗುರೂಜಿಯವರನ್ನು ಭೇಟಿಯಾಗಿದ್ದಾರೆ. ಗುರೂಜಿಯವರು ಶಾಸ್ತ್ರಿ ಅವರ ಈ ನಿರ್ಣಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಈ ಯತ್ನವು ಸೋಮನಾಥ ದೇವಾಲಯದ ಪುನರುತ್ಥಾನಕ್ಕೆ ಕಾರಣವಾಗಲಿದೆ ಎಂದು ಹೇಳಿದ್ದಾರೆ.
ಶಾಸ್ತ್ರಿ ಅವರು ಹೇಳಿದ ಪ್ರಕಾರ, ಈ ಶಿವಲಿಂಗದ ತುಣುಕುಗಳನ್ನು ಅವರಿಗೆ ಅವರ ಚಿಕ್ಕಪ್ಪ ನೀಡಿದ್ದರು. ಅವರ ಚಿಕ್ಕಪ್ಪ ಇದನ್ನು ಪ್ರಣವೇಂದ್ರ ಸರಸ್ವತಿ ಜಿ ಅವರಿಂದ ಪಡೆದಿದ್ದರು. ಈ ಶಿವಲಿಂಗವು ಸುಮಾರು 1000 ವರ್ಷಗಳಷ್ಟು ಹಳೆಯದಾಗಿದೆ ಮತ್ತು ಸೋಮನಾಥ ದೇವಾಲಯದ ಮೂಲ ಶಿವಲಿಂಗದ ಭಾಗವಾಗಿದೆ ಎಂದು ನಂಬಲಾಗಿದೆ. ಅದಾದ ನಂತರ ವರ್ಷಗಳ ಕಾಲ ಶಾಸ್ತ್ರಿ ಅವರ ಚಿಕ್ಕಪ್ಪ 60 ವರ್ಷಗಳ ಕಾಲ ಶಿವಲಿಂಗದ ಪೂಜೆ ಮಾಡಿದ್ದರು.
ಇದನ್ನೂ ಓದಿ: ನೂರಾರು ವರ್ಷ ಬದುಕಲು ಈ ರಹಸ್ಯ ಗೊತ್ತಿದ್ದರೆ ಸಾಕು! 105 ವರ್ಷದ ಮಹಿಳೆ ಹೇಳಿದ್ದೇನು
ಸೋಮನಾಥ ದೇವಾಲಯವನ್ನು ಹಲವಾರು ಬಾರಿ ದಾಳಿ ಮಾಡಿ ನಾಶಪಡಿಸಲಾಯಿತು. ಈ ದಾಳಿಗಳಲ್ಲಿ ದೇವಾಲಯವನ್ನು ಲೂಟಿ ಮಾಡಲಾಯಿತು ಮತ್ತು ಅಲ್ಲಿನ ಶಿವಲಿಂಗವನ್ನು ಹಾನಿಗೊಳಿಸಲಾಯಿತು. ಇತಿಹಾಸದಲ್ಲಿ, ಸುಮಾರು 50,000 ಜನರನ್ನು ಕೊಂದು ಹಾಕಿ ಸೋಮನಾಥ ದೇವಾಲಯವನ್ನು ಪ್ರವೇಶಿಸಿದ ಆಕ್ರಮಣಕಾರರ ಬಗ್ಗೆ ಉಲ್ಲೇಖಗಳಿವೆ. ಈ ಆಕ್ರಮಣಕಾರರು ದೇವಾಲಯದಲ್ಲಿನ ಎಲ್ಲಾ ಅಮೂಲ್ಯ ವಸ್ತುಗಳನ್ನು ಕದ್ದೊಯ್ದರು ಮತ್ತು ಶಿವಲಿಂಗವನ್ನು ನಾಶಪಡಿಸಿದರು.
ಶಿವಲಿಂಗವನ್ನು ನಾಶಪಡಿಸಿದ ಕೂಡಲೇ, ಅದರ ಅವಶೇಷಗಳನ್ನು ಸಂರಕ್ಷಿಸುವ ಒಂದು ಪವಿತ್ರ ಕರ್ತವ್ಯವನ್ನು ಕೆಲವು ಸಂತರು ಮಾಡಿದರು. ನಿಜವಾದ ಸೋಮನಾಥ ಲಿಂಗವನ್ನು ಸೋಮನಾಥ ದೇವಾಲಯದಲ್ಲಿ ಸ್ಥಾಪಿಸಲಾಗುವುದು, ಇದು ನಮ್ಮ ಸಂಕಲ್ಪ ಎಂದರು.
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.