
ಕಾರ್ಕಳ: ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿರುವ ಈ ಸಂದರ್ಭದಲ್ಲಿ, ಸೈಬರ್ ವಂಚಕರು ಸಕ್ರಿಯರಾಗಿದ್ದಾರೆ. ಕಾರ್ಕಳದ ಯುವಕನೊಬ್ಬನಿಗೆ ಪಾಕಿಸ್ತಾನದ ನಂಬರ್ನಿಂದ ಉಡುಪಿಯ ಯುವಕನಿಗೆ ವಾಟ್ಸಪ್ ಸಂದೇಶ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.
ಕಾರ್ಕಳ ತಾಲೂಕಿನ ಬಜಗೋಳಿಯ ಸುಶಾಂತ್ ಎಂಬುವವರಿಗೆ ಶನಿವಾರ ಬೆಳಗ್ಗೆ 10:24ಕ್ಕೆ ಅಪರಿಚಿತ ವ್ಯಕ್ತಿಯಿಂದ “ಹೌ ಆರ್ ಯು” ಎಂದು ವಾಟ್ಸಪ್ ಸಂದೇಶ ಬಂದಿದೆ. ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವುದರಿಂದ ಗಾಬರಿಗೊಂಡ ಸುಶಾಂತ್ ತಕ್ಷಣವೇ ಆ ನಂಬರನ್ನು ಬ್ಲಾಕ್ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸಾರ್ವಜನಿಕರಿಗೆ ಇಂತಹ ಯಾವುದೇ ಅನುಮಾನಾಸ್ಪದ ಸಂದೇಶಗಳಿಗೆ ಪ್ರತಿಕ್ರಿಯಿಸದಂತೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಡಿಜಿಟಲ್ ಯುದ್ಧ ಶುರು! ನಿಮ್ಮ WhatsApp, Facebook ಅಪಾಯದಲ್ಲಿ!
ಸೈಬರ್ ಕಳ್ಳರ ಹಾವಳಿ ಬಗ್ಗೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯನ್ನು ದುರುಪಯೋಗಪಡಿಸಿಕೊಳ್ಳಲು ಸೈಬರ್ ಕಳ್ಳರು ಹೊಂಚು ಹಾಕುತ್ತಿದ್ದಾರೆ ಎಂದು ಸಿವಿಲ್ ಡಿಫೆನ್ಸ್ ಅಧಿಕಾರಿಗಳು ಎಚ್ಚರಿಸಿದ್ದಾರೆ. ಇಂತಹ ಅಪಾಯಕಾರಿ ಸಂದರ್ಭಗಳಲ್ಲಿ ಸೈಬರ್ ವಂಚನೆಗೆ ಬಲಿಯಾಗದಂತೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.
“ನಿಮ್ಮ ಏರಿಯಾ ಸೇಫ್ ಇಲ್ಲ, ಅಪಾರ್ಟ್ಮೆಂಟ್ ಡೇಂಜರ್ ನಲ್ಲಿದೆ, ಬಂಕರ್ಗಳ ಮಾಹಿತಿ ನೀಡಲಾಗುವುದು, ಸ್ಥಳಾಂತರದ ಸುದ್ದಿ ನೀಡಲಾಗುತ್ತೆ, ಈ ಅಪ್ಲಿಕೇಶನ್ ಓಪನ್ ಮಾಡಿ” ಎಂಬಂತಹ ಸುಳ್ಳು ಸಂದೇಶಗಳು ಮತ್ತು ಇಮೇಲ್ಗಳು ಬರುವ ಸಾಧ್ಯತೆ ಇದೆ. ಇಂತಹ ಯಾವುದೇ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ಲಿಂಕ್ಗಳನ್ನು ಕಳುಹಿಸುವುದಿಲ್ಲ ಮತ್ತು ಕಂಟ್ರೋಲ್ ರೂಂನಿಂದ ಯಾರಿಗೂ ಕರೆ ಅಥವಾ ಸಂದೇಶ ಬರುವುದಿಲ್ಲ. ಸೇನೆ ಮತ್ತು ಸರ್ಕಾರದ ಯಾವುದೇ ಅಧಿಕೃತ ಮಾಹಿತಿಯನ್ನು ಮಾಧ್ಯಮ ಅಥವಾ ರೇಡಿಯೊ ಮೂಲಕ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.
ಯುದ್ಧದ ಸಮಯದ ಸೂಕ್ಷ್ಮತೆಯನ್ನು ಬಳಸಿಕೊಂಡು ಸೈಬರ್ ಕ್ರಿಮಿನಲ್ಗಳು ನಿಮ್ಮನ್ನು ಯಾಮಾರಿಸುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ, ಯಾವುದೇ ಒಟಿಪಿ (OTP) ಅಥವಾ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದು ಸಿವಿಲ್ ಡಿಫೆನ್ಸ್ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಪಾಕ್ ನೌಕಾಪಡೆಯಿಂದ ಬೆಂಗಳೂರು ಬಂದರು ಧ್ವಂಸ!
ಸೈಬರ್ ಸುರಕ್ಷತೆಗಾಗಿ ಮುಂಜಾಗ್ರತಾ ಕ್ರಮಗಳು
- ಅಪರಿಚಿತ ನಂಬರ್ಗಳಿಂದ ಬರುವ ಸಂದೇಶಗಳನ್ನು ನಿರ್ಲಕ್ಷಿಸಿ: ನಿಮಗೆ ಪರಿಚಯವಿಲ್ಲದ ಯಾವುದೇ ವಾಟ್ಸಪ್ ಅಥವಾ ಇತರ ಸಾಮಾಜಿಕ ಮಾಧ್ಯಮಗಳ ಸಂದೇಶಗಳಿಗೆ ಉತ್ತರಿಸಬೇಡಿ.
- ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬೇಡಿ: ನಿಮ್ಮ ಹೆಸರು, ವಿಳಾಸ, ಫೋನ್ ನಂಬರ್, ಬ್ಯಾಂಕ್ ವಿವರಗಳು ಅಥವಾ ಒಟಿಪಿಯಂತಹ ಸೂಕ್ಷ್ಮ ಮಾಹಿತಿಯನ್ನು ಆನ್ಲೈನ್ನಲ್ಲಿ ಅಥವಾ ಅಪರಿಚಿತರೊಂದಿಗೆ ಹಂಚಿಕೊಳ್ಳಬೇಡಿ.
- ಅನುಮಾನಾಸ್ಪದ ಲಿಂಕ್ಗಳ ಮೇಲೆ ಕ್ಲಿಕ್ ಮಾಡಬೇಡಿ: ಯಾವುದೇ ಅಪರಿಚಿತ ಲಿಂಕ್ಗಳು ಅಥವಾ ಅ attachments ಗಳನ್ನು ತೆರೆಯಬೇಡಿ. ಅವು ಮಾಲ್ವೇರ್ ಅಥವಾ ಫಿಶಿಂಗ್ ಲಿಂಕ್ಗಳಾಗಿರಬಹುದು.
- ಬಲವಾದ ಪಾಸ್ವರ್ಡ್ ಬಳಸಿ: ನಿಮ್ಮ ಎಲ್ಲಾ ಆನ್ಲೈನ್ ಖಾತೆಗಳಿಗೆ ಬಲವಾದ ಮತ್ತು ವಿಶಿಷ್ಟ ಪಾಸ್ವರ್ಡ್ಗಳನ್ನು ಬಳಸಿ.
- ಎರಡು-ಹಂತದ ದೃಢೀಕರಣವನ್ನು ಸಕ್ರಿಯಗೊಳಿಸಿ: ಸಾಧ್ಯವಿರುವಲ್ಲೆಲ್ಲಾ ಎರಡು-ಹಂತದ ದೃಢೀಕರಣವನ್ನು (Two-Factor Authentication) ಸಕ್ರಿಯಗೊಳಿಸಿ.
- ನಿಮ್ಮ ಸಾಧನಗಳನ್ನು ನವೀಕರಿಸಿ: ನಿಮ್ಮ ಮೊಬೈಲ್, ಕಂಪ್ಯೂಟರ್ ಮತ್ತು ಇತರ ಸಾಧನಗಳಲ್ಲಿನ ಸಾಫ್ಟ್ವೇರ್ಗಳನ್ನು ನಿಯಮಿತವಾಗಿ Update ಮಾಡಿ.
- ವಿಶ್ವಾಸಾರ್ಹ ಆಂಟಿವೈರಸ್ ಬಳಸಿ: ನಿಮ್ಮ ಸಾಧನಗಳಲ್ಲಿ ವಿಶ್ವಾಸಾರ್ಹ ಆಂಟಿವೈರಸ್ ಸಾಫ್ಟ್ವೇರ್ ಅನ್ನು ಸ್ಥಾಪಿಸಿ ಮತ್ತು ನಿಯಮಿತವಾಗಿ ಸ್ಕ್ಯಾನ್ ಮಾಡಿ.
ಇದನ್ನೂ ಓದಿ: ಮೋದಿಗೆ ಕಿಚ್ಚ ಸುದೀಪ್ ಪತ್ರ! ಆಪರೇಷನ್ ಸಿಂಧೂರ್ ಬಗ್ಗೆ ಹೀಗಂದಿದ್ಯಾಕೆ?
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.