
ಎಲ್ಲರಿಗು ಬೇರೆ ಬೇರೆ ತರಹದ ಕನಸುಗಳು ಬೀಳುತ್ತವೆ. ಹಾಗೆ ಆ ಕನಸುಗಳಲ್ಲಿ ಒಳ್ಳೆಯದು ಕೆಟ್ಟದ್ದು ಎಂದು ಇರುತ್ತದೆ. ಮತ್ತು ಅಪಶಕುನ ಮತ್ತು ಶುಭಶಕುನ ಎಂದು ಹೇಳುತ್ತಾರೆ. ಹಾಗೆ ಕನಸಿನಲ್ಲಿ ಗಿಳಿ ಕಂಡರೆ ಶುಭವೋ ಅಥವಾ ಅಶುಭವೋ ಎಂದು ನೋಡೋಣ ಬನ್ನಿ.
ಕೆಲವರಿಗೆ ಮನೆಯಲ್ಲಿ ಗಿಳಿಗಳನ್ನು ಸಾಕುವ ಹವ್ಯಾಸ ಕೂಡಾ ಇರುತ್ತದೆ. ಕನಸಿನಲ್ಲಿ ನಾವು ಬೇರೆ ಬೇರೆ ವಿಷಯಗಳನ್ನು ನೋಡುತ್ತೇವೆ. ಅದರಲ್ಲಿ ಒಳ್ಳೆಯದು ಇರುತ್ತದೆ ಮತ್ತು ಕೆಟ್ಟದ್ದು ಇರುತ್ತದೆ. ನಿದ್ರೆ ಕಾಣಿಸಿಕೊಳ್ಳುವ ಸಂಗತಿಗಳಿಗೆ ಸ್ವಪ್ನಶಾಸ್ತ್ರದಲ್ಲಿ ಬೇರೆ ಬೇರೆ ಅರ್ಥಗಳಿವೆ. ಕನಸಗಳು ಶುಭ ಮತ್ತು ಅಶುಭ ಸಂಕೇತಗಳನ್ನು ನೀಡುತ್ತವೆ.ಕನಸಿನಲ್ಲಿ ಗಿಳಿ ಕಂಡರೆ ಅದು ಏನನ್ನು ಸಂಕೇತಿಸುತ್ತದೆ ಎಂದು ನಿಮಗೆ ತಿಳಿದಿದೆಯೇ?
ಸಾಮಾನ್ಯವಾಗಿ ಸ್ವಪ್ನದಲ್ಲಿ ಗಿಳಿ ಕಾಣಿಸಿಕೊಂಡರೆ ಅದನ್ನು ಶುಭಕರ, ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಆದರೆ, ಕೆಲವು ಸಂದರ್ಭದಲ್ಲಿ ಇದು ಅಶುಭ ಸಂಕೇತ ಕೂಡ ಆಗಿರುತ್ತದೆ. ಪಂಜರದಲ್ಲಿರುವ ಗಿಳಿಯ ದೃಶ್ಯ ನಿಮ್ಮ ಕನಸಿನಲ್ಲಿ ಸುಳಿದಾಡಿದರೆ ಅದು ಸಂಪತ್ತು. ಭುಜದ ಮೇಲೆ ಗಿಳಿ ಕೂತಿರುವುದನ್ನು ನೋಡಿದರೆ ಅದು ಶುಭ ಸಂಕೇತ. ಮತ್ತು ನಮಗೆ ವ್ಯವಹಾರದಲ್ಲಿ ಪ್ರಗತಿ ಸಿಗುತ್ತದೆ ಎಂದು ಅರ್ಥ.
ಬ್ರಾಹ್ಮೀ ಮೂಹೂರ್ತದಲ್ಲಿ ಎದ್ದರೆ ಏನೆಲ್ಲಾ ಲಾಭವಿದೆ ನೋಡಿ
ಜೋಡಿ ಗಿಳಿ ಕನಸಿನಲ್ಲಿ ಕಾಣಿಸಿಕೊಂಡರೆ ನಿಮ್ಮ ಪ್ರೀತಿ ಮತ್ತು ವೈವಾಹಿಕ ಜೀವನಕ್ಕೆ ಬಹಳ ಮಂಗಳಕರ ಎಂಬುದು ಸಂಕೇತವಂತೆ. ಸಾಮಾನ್ಯ ಗಿಳಿಗಳು ಕನಸಿನಲ್ಲಿ ಕಾಣಿಸಿದರೆ ನಿಮ್ಮ ಮನೆಗೆ ಅತಿಥಿಗಳು ಬರುತ್ತಾರೆ ಎಂದು ಸೂಚಿಸುತ್ತದೆ. ಆದರೆ, ನಿಮ್ಮ ಕನಸಿನಲ್ಲಿ ಕಂಡ ಗಿಳಿ ನಿಮ್ಮೊಂದಿಗೆ ಮಾತನಾಡುತ್ತಿದ್ದರೆ ಅದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಯಾಕೆಂದರೆ, ಯಾರಾದರೂ ನಿಮ್ಮನ್ನು ಮೋಸಗೊಳಿಸಬಹುದು ಎಂಬುದು ಇದರ ಅರ್ಥವಾಗಿರುತ್ತದೆ.
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.