
ಹಲವು ಜನರ ಮನೆಯಲ್ಲಿ ಕುದುರೆ ಓಡುವ ಫೋಟೋ ಇರುತ್ತೆ. ಈ ಓಡುವ ಕುದುರೆಗಳ ಫೋಟೋಗಳನ್ನು ಯಾವ ದಿಕ್ಕಿನಲ್ಲಿ ಹಾಕಬೇಕು. ಯಾವ ದಿಕ್ಕಿಗೆ ಹಾಕಿದ್ರೆ ಒಳ್ಳೆಯದಾಗುತ್ತೆ ಅಂತ ತಿಳಿಯಿರಿ. ಮನೆಯಲ್ಲಿ ಕುದುರೆಗಳ ಚಿತ್ರವನ್ನು ಹಾಕುವುದು ಶುಭ ಎಂದು ಪರಿಗಣಿಸಲಾಗಿದೆ. ಇದರಿಂದ ಮನೆಯಲ್ಲಿ ಸದಾ ಧನಾತ್ಮಕ ಶಕ್ತಿ ನೆಲೆಸಿರುತ್ತೆ ಎಂದು ಹಳಲಾಗುತ್ತೆ.
ಎಲ್ಲ ಕಡೆ ಹೆಚ್ಚು ಏಳು ಕುದುರೆಗಳು ಓದುವ ಚಿತ್ರವನ್ನು ಹಾಕಿರುತ್ತಾರೆ. ಇದೆ ರೀತಿಯಾಗಿ ಏಳು ಕುಡುತ್ರೆಗಳ ಫೋಟೋ ಯಾಕಿರುತ್ತೆ ಗೊತ್ತಾ? 7 ಸಂಖ್ಯೆ ನೈಸರ್ಗಿಕವಾಗಿದೆ. ಏಳು ಕುದುರೆಗಳು ಸೂರ್ಯನ ರಥ ಎಳೆಯುತ್ತವೆ. ಅವು ಏಳು ಬಣ್ಣಗಳನ್ನು ಸೂಚಿಸುತ್ತವೆ. ಏಳು ಬಣ್ಣ ಸೇರಿಯೇ ಬಿಳಿಯ ಬಣ್ಣವಾಗುವುದು.
ಇದನ್ನೂ ಓದಿ: ಹಣ ಹೆಚ್ಚಾಗಲು ಈ ರೀತಿಯಾಗಿ ಮಾಡಿ
ಈ ದಿಕ್ಕಿನಲ್ಲಿ 7 ಕುದುರೆಗಳ ಫೋಟೋವನ್ನು ಹಾಕಿ
- ಉತ್ತರ ದಿಕ್ಕಿನಲ್ಲಿ ಓಡುವ ಕುದುರೆ ಫೋಟೋವನ್ನು ಹಾಕುವುದರಿಂದ ಮಾನಗಳಕರವೆಂದು ಪರಿಗಣಿಸಲಾಗಿದೆ. ಇದರಿಂದ ಬಹಳ ಒಳ್ಳೆಯದಾಗುತ್ತೆ.
- ಮನೆಯಲ್ಲಿ ಏಳು ಕುದುರೆಗಳ ರಥದ ಮೇಲೆ ಸೂರ್ಯ ದೇವ ಸವಾರಿ ಮಾಡುತ್ತಿರುವ ಚಿತ್ರವನ್ನು ಪೂರ್ವ ದಿಕ್ಕಿನಲ್ಲಿ ಹಾಕಿದ್ರೆ ಶುಭಕರ.
- ನಿಮ್ಮ ಜೀವನದಲ್ಲಿ ಹೆಸರು ಗಳಿಸಬೇಕು, ಖ್ಯಾತಿ ಗಳಿಸಬೇಕು ಎಂದಾದರೆ ದಕ್ಷಿಣ ದಿಕ್ಕಿನಲ್ಲಿ ಓದುವ ಕುದುರೆಗಳ ಫೋಟೋ ಹಾಕಬೇಕು.
- ನೀವು ಸಾಲದ ತೊಂದರೆಯಲ್ಲಿದ್ದರೆ ಪಚ್ಚಿಮ ದಿಕ್ಕಿನಲ್ಲಿ ಒಂದು ಜೋಡಿ ಕೃತಕ ಕುದುರೆಗಳನ್ನು ಇಡಬೇಕು. ಈ ರೀತಿಯಾಗಿ ಇಡುವುದರಿಂದ ಮಹಾಲಕ್ಷ್ಮಿ ಸದಾ ನೆಲೆಸಿರುತ್ತಾಳೆ.ಹಾಗೆಯೆ ಮನೆಯಲ್ಲಿ ಸುಖ, ಸಮೃದ್ಧಿ ಸದಾ ನೆಲೆಸಿರುತ್ತೆ.
- ಬಿಳಿ ಬಣ್ಣದ ಕುದುರೆಗಳು ಸಕಾರಾತ್ಮಕ ಶಕ್ತಿಯ ಸಂಕೇತಗಳಾಗಿವೆ. ನೀವು ಈ ಚಿತ್ರವನ್ನು ಎಲ್ಲಿ ಹಾಕುವುದಿದ್ದರು ಬಿಳಿ ಬಣ್ಣದಾಗಿರಬೇಕು. ಇದು ನಿಮ್ಮ ಮನೆ ಅಥವಾ ಕಚೇರಿಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ದೂರಮಾಡಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತೆ.
ಕುದುರೆಗಳ ಫೋಟೋವನ್ನು ಮನೆಯಲ್ಲಿ ಹಾಕುವುದರಿಂದ ಮನೆಯಲ್ಲಿ ಸದಾ ನೆಮ್ಮದಿ ನೆಲೆಸಿರುತ್ತೆ ಹಾಗೆ ಸುಖ ಸಮೃದ್ಧಿ ನಿಮ್ಮದಾಗುತ್ತೆ ಎಂದು ನಂಬಲಾಗಿದೆ.
ಇದನ್ನೂ ಓದಿ: ಸಾಲಿಗ್ರಾಮ ಪೂಜೆ ಮಾಡಿದ್ರೆ ಏನೆಲ್ಲಾ ಲಾಭವಿದೆ ನೋಡಿ