ಬಾಳೆಹಣ್ಣು ಒಂದು ಅದ್ಬುತ ಪೋಷಕಾಂಶಗಳನ್ನು ಹೊಂದಿರುವ ಹಣ್ಣು. ಇದನ್ನು ಸೇವನೆ ಮಾಡುವುದರಿಂದ ಅನೇಕ ಲಾಭಗಳಿವೆ. ಬಾಳೆಹಣ್ಣಿನಲ್ಲಿ ವಿಟಮಿನ್ ಗಳು ಪೊಟ್ಯಾಶಿಯಂ ಅಧಿಕ ಶೇಖಡದಲ್ಲಿ ಲಭಿಸುತ್ತದೆ. ಬಾಳೆಹಣ್ಣು ಸೇವನೆ ಮಾಡುವುದರಿಂದ ಯಾವೆಲ್ಲ ಲಾಭ ಸಿಗುತ್ತೆ ನೋಡಿ.
- ಬಾಳೆಹಣ್ಣು ಆಯಾಸವನ್ನು ದೂರ ಮಾಡುತ್ತೆ
- ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುತ್ತೆ ಬಾಳೆಹಣ್ಣು
- ಜೀರ್ಣಶಕ್ತಿ ಹೆಚ್ಚುತ್ತೆ
ಬಾಳೆಹಣ್ಣು ಆಯಾಸವನ್ನು ದೂರ ಮಾಡುತ್ತದೆ ಹಾಗೆಯೆ ದೇಹದ ದಾಹವನ್ನು ನಿಯಂತ್ರಿಸುತ್ತದೆ. ಅನಿಮಿಯಾ ರೋಗವನ್ನು ಹೋಗಲಾಡಿಸುತ್ತದೆ.
ರಾತ್ರಿ ಮಲಗುವ ಮುಂಚೆ ಹಣ್ಣಾದ ಒಂದು ಬಾಳೆಹಣ್ಣನ್ನು ತಿನ್ನುವುದರಿಂದ ಮಲಬದ್ಧತೆ ದೂರವಾಗುತ್ತದೆ. ಜಿಗುಟು ಬೇದಿಗಳನ್ನು ತಡೆಗಟ್ಟಿ ಕರುಳನ್ನು ಸಂರಕ್ಷಿಸುತ್ತದೆ.
ರಕ್ತದೊತ್ತಡ ಇರುವವರು ಬಾಳೆಹಣ್ಣು ತಿಂದರೆ ಒಳ್ಳೆಯದು. ಬಾಳೆಹಣ್ಣಿನ ತಿರುಳನ್ನು ಚರ್ಮ ಸುಟ್ಟ ಸ್ಥಳದಲ್ಲಿ ಗಾಯಗಳ ಮೇಲೆ ಇಟ್ಟರೆ ಬಾದೆ, ಉರಿ ಕಡಿಮೆಯಾಗಿ ಬಿಡುತ್ತದೆ.
ತೂಕ ಕಡಿಮೆ ಇರುವವರು ದಿನಕ್ಕೆರಡು ಬಾಳೆಹಣ್ಣುಗಳನ್ನು ತಿಂದರೆ ತೂಕ ಹೆಚ್ಚಾಗುತ್ತದೆ. ಸಣ್ಣ ಮಕ್ಕಳ ಬೆಳವಣಿಗೆಗೆ ಜೀರ್ಣಶಕ್ತಿ ಹಾಗೂ ಚುರುಕುತನಕ್ಕೆ ಬಾಳೆಹಣ್ಣು ಸಹಕಾರಿಯಾಗುತ್ತದೆ.
ಹಾಲಿನಲ್ಲಿ ಬಾಳೆಹಣ್ಣಿನ ತಿರುಳನ್ನು ಬೆರೆಸಿ ತಿಂದರೆ ಹೊಟ್ಟೆಯಲ್ಲಿನ ಉರಿ ಕಡಿಮೆಯಾಗುತ್ತದೆ ಮತ್ತು ಅಲ್ಸರ್ ಅನ್ನು ನಿವಾರಿಸುತ್ತದೆ.
ಈ ಆಹಾರವನ್ನು ಸೇವನೆ ಮಾಡಿದ್ರೆ ನೀವೇ ಕೊರೊನಾಗೆ ಆಹ್ವಾನ ನೀಡಿದಂತೆ
ಪ್ರತಿದಿನ ಬೆಳ್ಳಿಗ್ಗೆ ಕ್ಯಾರಟ್ ಸೇವನೆ ಇಂದ ಏನೆಲ್ಲಾ ಲಾಭವಿದೆ ಗೊತ್ತಾ?
ತುಳಸಿ ಎಲೆಗಳನ್ನು ತಿನ್ನುವುದರಿಂದ ಏನೆಲ್ಲಾ ಆಗುತ್ತೆ?
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
