
ನೀರು ನಮ್ಮ ದೇಹಕ್ಕೆ ಅತ್ಯಂತ ಅವಶ್ಯಕ. ನೀರು ಕುಡಿಯುವುದರಿಂದ ಅನೇಕ ಲಾಭಗಳು ನಮಗೆ ಸಿಗುತ್ತೆ. ಬಿಸಿ ನೀರನ್ನು ಕುಡಿದರೆ ಕೂಡ ಒಳ್ಳೆಯದು. ಹೆಚ್ಚಾಗಿ ಎಲರೂ ತಣ್ಣಗಿನ ನೀರನ್ನು ಕುಡಿತಾರೆ. ಆದ್ರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿದರೆ ಏನೆಲ್ಲಾ ಪ್ರಯೋಜನಗಳಿವೆ ನೋಡಿ.
- ಬಿಸಿ ನೀರನ್ನು ಕುಡಿದರೆ ಸಿಗುತ್ತೆ ಹಲವು ಲಾಭ
- ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯಿರಿ
- ದೇಹದಲ್ಲಿ ಜಾಸ್ತಿ ಪ್ರಮಾಣದ ನೀರಿನಂಶ ಇದ್ದರೆ ಬರಲ್ಲ ಹಲವು ರೋಗ
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಅನೇಕ ರೋಗಗಳು ನಮ್ಮನ್ನು ಕಾಡುವುದಿಲ್ಲ. ನಮ್ಮ ದೇಹವನ್ನು ರೋಗಗಳಿಂದ ರಕ್ಷಿಸುತ್ತೆ ಅನ್ನುವುದು ವೈಜ್ಞಾನಿಕ ಸಂಶೋದನೆಗಳು ತಿಳಿಸಿವೆ. ಹಾಗೆಯೆ ಮೊದಲಿಂದಲೂ ಆಯುರ್ವೇದದಲ್ಲಿ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದು ಒಂದು ವರದಾನವಾಗಿದೆ ಎಂದು ಹೇಳಲಾಗಿದೆ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯುವುದರಿಂದ ಬೊಜ್ಜಿನ ಸಮಸ್ಯೆ ಬರುವುದಿಲ್ಲ. ಗ್ಯಾಸ್ಟ್ರಿಕ್ ಸಮಸ್ಯೆ ಇದ್ದರು ಕೂಡ ಕಡಿಮೆ ಆಗುತ್ತೆ. ನೀವು ತೂಕವನ್ನು ಕಡಿಮೆ ಮಾಡಲು ಬಯಸಿದರೆ ಉಗುರು ಬೆಚ್ಚಗಿನ ನೀರಿನೊಂದಿಗೆ ನಿಂಬೆ ರಸವನ್ನು ಸೇರಿಸಿ ಕುಡಿಯಿರಿ ಎಂದು ಹೇಳಲಾಗಿದೆ.
ಬಿಸಿ ನೀರನ್ನು ಕುಡಿಯುವುದರಿಂದ ಒತ್ತಡ ಕಡಿಮೆ ಆಗುತ್ತೆ ಹಾಗೆಯೆ ಮಲಬದ್ಧತೆ ಸಮಸ್ಯೆ ಕಡಿಮೆ ಆಗುತ್ತೆ. ಬಿಸಿ ನೀರು ಕುಡಿದರೆ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತೆ.
ಮೊಣಕಾಲು ನೋವು ಇದ್ದಾರೆ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ ಎಂದು ಹೇಳಲಾಗಿದೆ. ನಿಮಗೆ ಗಂಟಲು ನೋವು ಸಮಸ್ಯೆ ಇದ್ದರು ಕೂಡ ಹಿಸಿ ನೀರನ್ನು ಕುಡಿಯುವುದರಿಂದ ಸ್ವಲ್ಪ ಆರಾವಾಗುತ್ತೆ.
Disclaimer: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ROCK TV Kannada ಅದನ್ನು ಖಚಿತಪಡಿಸುವುದಿಲ್ಲ.
ನೀವು ಸಂಜೆಯ ಸಮಯದಲ್ಲಿ ಚಹಾ ಕುಡಿಯುತ್ತೀರಾ? ಇದು ಎಷ್ಟು ಹಾನಿಕರ ಗೊತ್ತಾ?
ನೀವು ಆರೋಗ್ಯವಾಗಿರಲು ಈ ಯೋಗಾಸನಗಳನ್ನು ಮಾಡಿ । Yogasana 2023
ಪಪ್ಪಾಯಿ ಹಣ್ಣಿಗಿಂತ ಪಪ್ಪಾಯಿ ಕಾಯಿ ತಿಂದರೆ ಏನೆಲ್ಲಾ ಲಾಭವಿದೆ ನೋಡಿ
ಪ್ರತಿದಿನ ಬೆಳ್ಳಿಗ್ಗೆ ಕ್ಯಾರಟ್ ಸೇವನೆ ಇಂದ ಏನೆಲ್ಲಾ ಲಾಭವಿದೆ ಗೊತ್ತಾ?
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.