
ಊಟ ಮಾಡಿದ ತಕ್ಷಣವೇ ಮಲಗುವ ಅಭ್ಯಾಸ ನಿಮಗೆ ಇದೆಯೇ? ಹಾಗಾದರೆ ತಪ್ಪದೇ ಇದನ್ನೂ ನೋಡಿ. ಹಲವು ಜನರು ರಾತ್ರಿ ತಡವಾಗಿ ಊಟ ಮಾಡ್ತಾರೆ ಹಾಗೆಯೇ ಊಟ ಮಾಡಿದ ತಕ್ಷಣ ಮಲಗುತ್ತಾರೆ. ಹಾಗೆ ಹಗಲಿನಲ್ಲಿ ಕೂಡ ಊಟ ಮಾಡಿದ ತಕ್ಷಣ ಮಲಗುವುದರಿಂದ ಅನೇಕ ಗಂಭೀರ ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡುತ್ತವೆ.
ತೂಕ ಹೆಚ್ಚಾಗುತ್ತೆ
ರಾತ್ರಿ ಸಮಯದಲ್ಲಿ ಸ್ವಲ್ಪ ಕಡಿಮೆ ಆಹಾರ ಸೇವಿಸಬೇಕು ಎಂದು ಹೇಳ್ತಾರೆ. ಹೀಗೆ ರಾತ್ರಿ ಊಟ ಮಾಡಿದ ತಕ್ಷಣ ಮಲಗುವುದರಿಂದ ನಾವು ತಿಂದ ಆಹಾರ ಜೀರ್ಣ ಆಗೋದಿಲ್ಲ. ಹಾಗೆಯೆ ಈ ರೀತಿಯಾಗಿ ಮಾಡುವುದರಿಂದ ನಿದ್ರೆ ಕೂಡ ಸರಿಯಾಗಿ ಬರುವುದಿಲ್ಲ. ಈ ಕಾರಣದಿಂದಾಗಿ ನಿಮ್ಮ ದೇಹದ ತೂಕ ಹೆಚ್ಚಾಗುವ ಸಾಧ್ಯತೆ ಇದೆ.
ಅಸಿಡಿಟಿ ಶುರುವಾಗುತ್ತೆ
ಊಟ ಮಾಡಿದ ತಕ್ಷಣ ಮಲಗುವ ಅಭ್ಯಾಸ ಇದ್ದಾರೆ ಇದು ಅಸಿಡಿಟಿಗೆ ಕಾರಣವಾಗುತ್ತೆ. ಊಟ ಮಾಡಿದ ತಕ್ಷಣ ಮಲಗಿದರೆ ಜೀರ್ಣಕ್ರಿಯೆನಿಧಾನ ಆಗುತ್ತೆ. ಜೀರ್ಣ ಆಗುವ ಸಮಯದಲ್ಲಿ ಕರುಳು ಜೀರ್ಣ ಮಾಡುವ ಸಮಯದಲ್ಲಿ ಆಮ್ಲವನ್ನು ಬಿಡುಗಡೆ ಮಾಡುತ್ತೆ. ಈ ಸಮಯದಲ್ಲಿ ಮಲಗುವುದರಿಂದ ಈ ಆಮ್ಲವು ಹೊಟ್ಟೆಯಿಂದ ಹೊರಗೆ ಬಂದು ನಿಮಗೆ ಕಿರಿ ಕಿರಿ ಉಂಟಾಗುತ್ತೆ.
ಮಧುಮೇಹ
ನಾವು ಆಹಾರ ಸೇವನೆ ಮಾಡಿದ ನಂತರ ನಮ್ಮ ದೇಹದಲ್ಲಿ ಸಕ್ಕರೆ ಅಂಶ ಅಥವಾ ಗ್ಲುಕೋಸ್ ಉತ್ಪತ್ತಿಯಾಗುತ್ತೆ. ಈ ಸಮಯದಲ್ಲಿ ಮಲಗಿದರೆ ದೇಹದಲ್ಲಿ ಸಕ್ಕರೆ ಅಂಶ ಬಳಸುವುದಿಲ್ಲ. ಹಾಗೆಯೆ ಸಕ್ಕರೆ ರಕ್ತದಲ್ಲಿ ಕರಗಲು ಪ್ರಾರಂಭವಾಗುತ್ತೆ. ಈ ರೀತಿಯಾಗಿ ಮಾಡುವುದರಿಂದ ಮಧುಮೇಹ ಕಾಯಿಲೆ ಶುರುವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಚಳಿಗಾಲದಲ್ಲಿ ತಪ್ಪದೆ ಇವುಗಳನ್ನು ಸೇವಿಸಿ
ನಿದ್ರೆ ಸಮಸ್ಯೆ
ಊಟ ಮಾಡಿದ ನಂತರ ಮಲಗುವುದರಿಂದ ನಿಮಗೆ ತಕ್ಷಣ ನಿದ್ರೆ ಬರುವುದಂತೂ ಹೌದು.ಆದರೆ ತಡ ರಾತ್ರಿಯಲ್ಲಿ ನಿಮಗೆ ಎಚ್ಚರವಾಗುತ್ತೆ. ಹಾಗಾಗಿ ನಿದ್ರೆಯ ಸಮಸ್ಯೆ ನಿಮಗೆ ಕಾಡುತ್ತೆ. ಸರಿಯಾಗಿ ನಿದ್ರೆ ಬರದಿದ್ದರೂ ಕೂಡ ಅನೇಕ ಆರೋಗ್ಯ ಸಮಸ್ಯೆ ಕಾಡುತ್ತೆ. ಹಾಗೆಯೆ ಈ ಸಮಯದಲ್ಲಿ ನಿಮ್ಮ ಚಯಾಪಚಯ ಕ್ರಿಯೆ ಕೂಡ ಸರಿಯಾಗಿ ಆಗುವುದಿಲ್ಲ.
ಊಟ ಹಾಗೂ ಮಲಗುವ ಸಮಯವನ್ನು ಕನಿಷ್ಠ 3 ಗಂಟೆಗಳ ಅಂತರವನ್ನು ಇಟ್ಟುಕೊಂಡರೆ ಒಳ್ಳೆಯದು. ಹೀಗೆಯೇ ಸಮಯ ನೀಡುವುದರಿಂದ ನಾವು ತಿಂದ ಆಹಾರ ಕೂಡ ಸರಿಯಾಗಿ ಜೀರ್ಣವಾಗುತ್ತೆ. ನಿಮಗೆ ಮೂರು ಗಂಟೆಗಳ ಅಂತರವನ್ನು ನೀಡಲು ಸಾಧ್ಯವಾಗದಿದ್ದರೆ ಕನಿಷ್ಠ ಎರಡು ಗಂಟೆಗಳ ಅಂತರವನ್ನು ನೀಡುವುದು ಉತ್ತಮ.
ಇದನ್ನೂ ಓದಿ: ಕಾಲಿ ಹೊಟ್ಟೆಯಲ್ಲಿ ಹಾಲು ಕುಡಿದರೆ ಏನಾಗುತ್ತೆ ನೋಡಿ