ಟೀ ಅತ್ಯಂತ ಜನಪ್ರಿಯ ಪಾನೀಯ. ಸಾಮಾನ್ಯವಾಗಿ ಹೆಚ್ಚಿನ ಎಲ್ಲ ಜನರು ಚಹಾ ಸೇವನೆ ಮಾಡುತ್ತಾರೆ. ಚಿಕ್ಕ ಜ್ವರ ಹಾಗೂ ನೆಗಡಿ ಕಾಡುತ್ತಿದ್ದರೆ ಸಾಮಾನ್ಯವಾಗಿ ಹಿಂದಿನಿಂದಲೂ ಟೀ ಕುಡಿಯುತ್ತಾರೆ. ಆದ್ರೆ ಅತಿಯಾದ ಚಹಾ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಯಾವೆಲ್ಲ ದುಷ್ಪರಿಣಾಮ ಆಗುತ್ತೆ ಅಂತ ತಿಳಿಯಿರಿ.
- ಅತಿಯಾದ ಟೀ ಸೇವನೆ ಆರೋಗ್ಯಕ್ಕೆ ಹಾನಿಕರ
- ಅತಿಯಾದ ಚಹಾ ಸೇವನೆ ಜೀರ್ಣಾಂಗದ ಮೇಲೆ ಪರಿಣಾಮ ಬೀರುತ್ತೆ
- ಚಹಾದಲ್ಲಿರುವ ಕೆಫೆನ್ ಹೃದಯ ರಕ್ತನಾಳದ ವ್ಯವಸ್ಥೆಗೆ ಕೆಟ್ಟದ್ದು
ಚಹಾವು ನೈಸರ್ಗಿಕವಾಗಿ ಕೆಫೀನ್ ಅನ್ನು ಹೊಂದಿರುತ್ತದೆ, ಅತಿಯಾಗಿ ಟೀ ಸೇವನೆ ಮಾಡಿದರೆ ಜನರಲ್ಲಿ ಉದ್ವಿಗ್ನತೆ, ಆತಂಕ ಮತ್ತು ಪ್ರಕ್ಷುಬ್ಧತೆಯನ್ನು ಕಾಡಬಹುದು. ಅತಿಯಾದ ಚಹಾ ಸೇವಿಸುವುದರಿಂದ ನಿದ್ರೆಯ ಸಮಸ್ಯೆ ಕೂಡ ಕಾಡುತ್ತೆ.
ಟೀ ಅಲ್ಲಿ ಇರುವ ಥಿಯೋಫಿಲಿನ್ ಅಂಶ ಮಲಬದ್ದತೆಗೆ ಕಾರಣವಾಗಬಹುದು. ಹಾಗೆಯೆ ಇದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತೆ.
ಚಹಾ ಅತಿಯಾಗಿ ಸೇವಿಸಿದರೆ ಅಥವಾ ಕೆಫೆನ್ ಹೊಂದಿರುವ ಪಾನೀಯಗಳನ್ನು ಅತಿಯಾಗಿ ಸೇವನೆ ಮಾಡಿದರೆ ಗರ್ಭಪಾಥ ಮತ್ತು ಕಡಿಮೆ ತೂಕ ಗರ್ಭಧಾರಣೆಯ ಅಪಾಯಗಳನ್ನು ಹೆಚ್ಚಿಸಬಹುದು.
ಕೊರೊನ ತೀವ್ರತೆ ಹಾಗೂ ಲಕ್ಷಣಗಳು ಬದಲಾಗಿದೆ
ದೇಸಿ ಹಸುವಿನ ತುಪ್ಪ ಸೇವಿಸಿದರೆ ಯಾವ ಲಾಭಗಳಿವೆ ಗೊತ್ತಾ?
ಕೂದಲು ಉದುರುವ ಸಮಸ್ಯೆಗೆ ಪರಿಹಾರ । ಕೂದಲು ಉದುರುವಿಕೆಗೆ ಮನೆ ಮದ್ದು
ಹೊಟ್ಟೆಯ ಬೊಜ್ಜು ಕರಗಿಸುವುದು ಹೇಗೆ? ಹೊಟ್ಟೆಯ ಬೊಜ್ಜು ಕರಗಿಸಲು ಆಹಾರ
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
