
ನಿನ್ನೆ ಮಧ್ಯಾಹ್ನ ಸುಮಾರು 2:35ಕ್ಕೆ ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್ ಅವರು ಜೆ.ಪಿ.ನಗರದ ಹೋಟೆಲ್ನಿಂದ ತಮಗೆ ಇಷ್ಟವಾದ ಮೀನಿನ ಕರಿಯನ್ನು ಆರ್ಡರ್ ಮಾಡಿದ್ದರು. ಅವರ ಪತ್ನಿ ಪಲ್ಲವಿ ಅವರು ಆರ್ಡರ್ ಬರುವ ಮುನ್ನ, ಅಂದರೆ ಸುಮಾರು 3:00 ಗಂಟೆಗೆ ಗ್ರೌಂಡ್ ಫ್ಲೋರ್ಗೆ ಬಂದಿದ್ದರು. ಆರ್ಡರ್ ಸಹ ಅದೇ ಹೊತ್ತಿಗೆ ತಲುಪಿತು.
ಸರಿಸುಮಾರು 3:10ರ ಹೊತ್ತಿಗೆ ಓಂ ಪ್ರಕಾಶ್ ಅವರು ಊಟಕ್ಕೆ ಕುಳಿತರು. ಆದರೆ, ಊಟ ಆರಂಭಿಸುವ ಕೆಲವೇ ನಿಮಿಷಗಳ ಮೊದಲು ಪತಿ-ಪತ್ನಿಯರ ನಡುವೆ ಮತ್ತೆ ಮಾತಿನ ಚಕಮಕಿ ನಡೆದಿತ್ತು ಎಂದು ಹೇಳಲಾಗಿದೆ.
ಜಗಳವಾಡಿದ ಬಳಿಕ ಪತ್ನಿ ಎಂದಿನಂತೆ ಮಲಗಿದ್ದಾಳೆ ಎಂದು ಓಂ ಪ್ರಕಾಶ್ ಭಾವಿಸಿದ್ದರು. ಆಕೆ ಕೋಣೆಯಲ್ಲಿ ನಿದ್ರಿಸುತ್ತಿರಬಹುದೆಂದು ಅಂದುಕೊಂಡು, ತಮ್ಮ ಪಿಸ್ತೂಲನ್ನು ಕಪಾಟಿನಲ್ಲಿಟ್ಟು ಊಟಕ್ಕೆ ಕುಳಿತರು. ದುರಾದೃಷ್ಟವಶಾತ್, ಅದೇ ಅವರಿಗೆ ಕೊನೆಯ ಊಟವಾಯಿತು.
ಇದನ್ನೂ ಓದಿ: ಹಿಂದೂಗಳೇ ಮತಾಂತರ ಮಾಡಿ ಚಕ್ರವರ್ತಿ ಸೂಲಿಬೆಲೆ ಕರೆ!
ಮಧ್ಯಾಹ್ನ 3:35ರ ಸಮಯ. ಊಟ ಮುಗಿಸಿ ಏಳಲು ಸಿದ್ಧರಾಗಿದ್ದ ಓಂ ಪ್ರಕಾಶ್ ಅವರ ಮೇಲೆ ದ್ವೇಷದಿಂದ ಹೊಂಚು ಹಾಕಿದ್ದ ಪತ್ನಿ ಪಲ್ಲವಿ ದಿಢೀರನೆ ಆಗಮಿಸಿ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ತಕ್ಷಣವೇ ಅಡುಗೆ ಮನೆಯಲ್ಲಿ ಕಾಯಿಸಿಟ್ಟಿದ್ದ ಬಿಸಿ ಎಣ್ಣೆಯನ್ನು ಪತಿಯ ಮೇಲೆ ಸುರಿದಿದ್ದಾರೆ ಎಂದು ತಿಳಿದುಬಂದಿದೆ.
ಡೈನಿಂಗ್ ಟೇಬಲ್ ಮೇಲೆಯೇ ಓಂ ಪ್ರಕಾಶ್ ಕುಸಿದುಬಿದ್ದ ತಕ್ಷಣ, ಪಲ್ಲವಿ ಅವರು ಬೆಡ್ಶೀಟ್ನಿಂದ ಅವರ ಮುಖವನ್ನು ಸುತ್ತಿ, ಹೊಟ್ಟೆಗೆ ಐದಾರು ಬಾರಿ ಚಾಕುವಿನಿಂದ ಇರಿದಿದ್ದಾರೆ. ಆದರೂ ಓಂ ಪ್ರಕಾಶ್ ಉಸಿರಾಡುತ್ತಿರುವುದನ್ನು ಕಂಡು, ಹಾಗೇ ಬಿಟ್ಟರೆ ತನ್ನನ್ನೇ ಕೊಲ್ಲಬಹುದು ಎಂಬ ಭಯದಿಂದ, ಅವರ ಕುತ್ತಿಗೆಯ ಎಡಭಾಗಕ್ಕೆ ಎರಡು ಬಾರಿ ಚಾಕುವಿನಿಂದ ಇರಿದು ಪಲ್ಲವಿ ಕ್ರೌರ್ಯ ಮೆರೆದಿದ್ದಾರೆ ಎಂದು ಹೇಳಲಾಗಿದೆ.
- ಮಧ್ಯಾಹ್ನ 2:30 – ರುಚಿಕರ ಮೀನಿನ ಊಟಕ್ಕೆ ಆರ್ಡರ್
- ಮಧ್ಯಾಹ್ನ 3:20 – ಊಟದ ಸಮಯದಲ್ಲೇ ಭುಗಿಲೆದ್ದ ಕಲಹ
- ಸಂಜೆ 4:00 – ಹಗೆಯಿಂದ ಕುದಿಯುತ್ತಿದ್ದ ಪತ್ನಿಯಿಂದಲೇ ಕೊಲೆ
- ಸಂಜೆ 4:10 – ಕೃತ್ಯ ಎಸಗಿದ ಬಳಿಕ ದೂರವಾಣಿ ಕರೆ
- ಸಂಜೆ 4:15 – ಆಘಾತಕಾರಿ ವಿಡಿಯೋ ಕಾಲ್
- ಸಂಜೆ 4:45 – ಘಟನಾ ಸ್ಥಳಕ್ಕೆ ಪೊಲೀಸರ ಆಗಮನ
- ಸಂಜೆ 5:00 – ತಂದೆಯ ಕೊಲೆಯ ಸುದ್ದಿ ಕೇಳಿ ಆಘಾತಗೊಂಡ ಮಗ
- ಸಂಜೆ 5:45 – ದುರಂತ ನಡೆದ ಮನೆಗೆ ಮಗನ ಆಗಮನ
- ರಾತ್ರಿ 7:10 – ಪಲ್ಲವಿ ಮತ್ತು ಪುತ್ರಿ ಕೃತಿ ಪೊಲೀಸರ ವಶಕ್ಕೆ
- ರಾತ್ರಿ 7:30 – ಪಲ್ಲವಿ ಹಾಗೂ ಕೃತಿ ವಿರುದ್ಧ ಎಫ್ಐಆರ್ ದಾಖಲು
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.