
RBI will issue new ₹10 and ₹500 notes
RBI to issue new Rs10 and Rs500 notes: ಭಾರತೀಯ ರಿಸರ್ವ್ ಬ್ಯಾಂಕ್ (RBI) ಶೀಘ್ರದಲ್ಲೇ ಹೊಸ 10 ರೂ ಮತ್ತು 500 ರೂ ಮುಖಬೆಲೆಯ ಬ್ಯಾಂಕ್ ನೋಟುಗಳನ್ನು ಬಿಡುಗಡೆ ಮಾಡಲಿದೆ ಎಂದು ತಿಳಿಸಿದೆ. ಈ ಹೊಸ ನೋಟುಗಳು ಪ್ರಸ್ತುತ ಚಲಾವಣೆಯಲ್ಲಿರುವ ಮಹಾತ್ಮ ಗಾಂಧಿ ಸರಣಿಯ ನೋಟುಗಳ ವಿನ್ಯಾಸವನ್ನೇ ಹೊಂದಿರಲಿವೆ. ಅವುಗಳಲ್ಲಿ ಯಾವುದೇ ವಿನ್ಯಾಸ ಬದಲಾವಣೆ ಇರುವುದಿಲ್ಲ.
ಆದರೆ, ಈ ಹೊಸ ನೋಟುಗಳ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ನ ಗವರ್ನರ್ ಅವರ ಹಸ್ತಾಕ್ಷರ ಮಾತ್ರ ಬದಲಾಗಿರುತ್ತದೆ. ಉಳಿದ ಎಲ್ಲಾ ಅಂಶಗಳು ಈಗಿರುವ ನೋಟುಗಳಂತೆಯೇ ಇರಲಿವೆ ಎಂದು ಆರ್ಬಿಐ ಸ್ಪಷ್ಟಪಡಿಸಿದೆ.
ಸಂಜಯ್ ಮಲ್ಹೋತ್ರಾ ಅವರು ಜನವರಿ 2025 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ನ (RBI) ನೂತನ ಗವರ್ನರ್ ಆಗಿ ನೇಮಕಗೊಂಡರು. ಅವರಿಗಿಂತ ಮೊದಲು ಶಕ್ತಿಕಾಂತ್ ದಾಸ್ ಅವರು ಈ ಹುದ್ದೆಯಲ್ಲಿದ್ದರು. ಸಂಜಯ್ ಮಲ್ಹೋತ್ರಾ ಅವರು ಗವರ್ನರ್ ಆದ ನಂತರ ಇದು ಎರಡನೇ ಬಾರಿಗೆ ಬ್ಯಾಂಕ್ ನೋಟುಗಳನ್ನು ಮುದ್ರಿಸಲಾಗುತ್ತಿದೆ. ಹೊಸದಾಗಿ ಮುದ್ರಿಸಲಾಗುತ್ತಿರುವ ನೋಟುಗಳ ಮೇಲೆ ನೂತನ ಗವರ್ನರ್ ಅವರ ಹಸ್ತಾಕ್ಷರ ಇರಲಿದೆ. ಈ ಹಿಂದೆ ಕಳೆದ ತಿಂಗಳು, ಗವರ್ನರ್ ಮಲ್ಹೋತ್ರಾ ಅವರ ಸಹಿಯೊಂದಿಗೆ 100 ರೂ ಮತ್ತು 200 ರೂ ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ಆರ್ಬಿಐ ಘೋಷಿಸಿತ್ತು.
ಇದನ್ನೂ ಓದಿ: ಈ ಆಹಾರಗಳ ಜೊತೆಗೆ ತಪ್ಪದೇ ಮಾವಿನ ಹಣ್ಣನ್ನು ಸೇವಿಸಬೇಡಿ
ಕಳೆದ ತಿಂಗಳು (ಮಾರ್ಚ್ 2025) ಭಾರತೀಯ ರಿಸರ್ವ್ ಬ್ಯಾಂಕ್ (RBI) 100 ರೂ ಮತ್ತು 200 ರೂ ಮುಖಬೆಲೆಯ ಹೊಸ ಬ್ಯಾಂಕ್ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಈ ನೋಟುಗಳು ಸಹ ಈಗಿನ ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಹಸ್ತಾಕ್ಷರವನ್ನು ಹೊಂದಿರುತ್ತವೆ.
ಶಕ್ತಿಕಾಂತ ದಾಸ್ ಸಹಿ ಇರುವ ನೋಟುಗಳು ಅಮಾನ್ಯವಾಗುತ್ತವೆಯೇ? RBI ಸ್ಪಷ್ಟನೆ!
ಹಿಂದಿನ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರ ಹಸ್ತಾಕ್ಷರವಿರುವ ಬ್ಯಾಂಕ್ ನೋಟುಗಳು ಈಗಲೂ ಚಲಾವಣೆಯಲ್ಲಿವೆ ಮತ್ತು ಅವುಗಳ ಬಳಕೆಯನ್ನು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಸಬಹುದು. ಪ್ರಸ್ತುತ ಚಲಾವಣೆಯಲ್ಲಿರುವ ಯಾವುದೇ ನೋಟು ಅಸಿಂಧುವಾಗುವುದಿಲ್ಲ.
ಶಕ್ತಿಕಾಂತ ದಾಸ್ ಅವರಷ್ಟೇ ಅಲ್ಲ, ಅವರಿಗಿಂತ ಮೊದಲು ರಿಸರ್ವ್ ಬ್ಯಾಂಕ್ ಗವರ್ನರ್ಗಳಾಗಿದ್ದವರ ಸಹಿ ಇರುವ ನೋಟುಗಳು ಕೂಡ ಇನ್ನೂ ಬಳಕೆಯಲ್ಲಿವೆ. ಹೀಗಾಗಿ, ಹಳೆಯ ಗವರ್ನರ್ಗಳ ಸಹಿ ಇರುವ ನೋಟುಗಳ ಬಗ್ಗೆ ಯಾವುದೇ ಗೊಂದಲ ಬೇಡ. ಅವು ಎಂದಿನಂತೆ ಮಾನ್ಯವಾಗಿರುತ್ತವೆ.
ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರದ ಮೇಲೆ ದಾಳಿಗೆ ಸಂಚು ಉಗ್ರ ಅಬ್ದುಲ್ ಬಂಧನ
Sri Rama is a seasoned journalist with four years of experience, specializing in capturing and analyzing the latest news and trending stories. He brings extensive expertise in news collection, reporting, and interviewing across a broad spectrum of topics, including politics.