
30 ಸಾವಿರ ರೂಪಾಯಿಗಿಂತ ಹೆಚ್ಚು ಹಣ ಇದ್ದವರ ಬ್ಯಾಂಕ್ ಖಾತೆ ಕ್ಲೋಸ್ ಆಗುತ್ತೆ ಅನ್ನೋ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸೋಶಿಯಲ್ ಮೀಡಿಯಾ ಹಲವು ವಿಷಯಗಳಿಗೆ ಜನರ ಜೀವನವನ್ನು ಸುಲಭಗೊಳಿಸಿದೆ. ಆದರೆ ಈ ವಿಷಯವನ್ನು ಕೇಳಿ ಜನರು ಗೊಂದಲಕ್ಕೆ ಒಳಗಾಗಿದ್ದಾರೆ. ಹಾಗಾದರೆ 30 ಸಾವಿರ ರೂಪಾಯಿಗಿಂತ ಹೆಚ್ಚು ಹಣ ಇದ್ದರೆ ನಿಮ್ಮ ಬ್ಯಾಂಕ್ ಖಾತೆ ಕೂಡ ಕ್ಲೋಸ್ ಆಗುತ್ತಾ? ಈ ವಿಷಯದ ಬಗ್ಗೆ ಆರ್ ಬಿ ಐ [RBI] ಏನೆಂದು ಹೇಳಿದೆ ಅಂತ ಈ ಲೇಖನದಲ್ಲಿ ತಿಳಿಯಿರಿ.
ಮೂವತ್ತು ಸಾವಿರ ರೂಪಾಯಿಗಿಂತ ಹೆಚ್ಚು ಹಣ ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಇದ್ದರೆ ನಿಮ್ಮ ಅಕೌಂಟ್ ಕ್ಲೋಸ್ ಮಾಡಲಾಗುತ್ತೆ ಎಂದು ರಿಸರ್ವ್ ಬ್ಯಾಂಕ್ ಒಫ್ ಇಂಡಿಯಾ {RBI} ಹೇಳಿದೆ ಅಂತ ಒಂದು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಬ್ಯಾಂಕ್ ಹಾಗೂ ಹಣಕ್ಕೆ ಸಂಬಂಧಿಸಿದ ವಿಷಯ ಆಗಿದ್ದರಿಂದ ಸರ್ಕಾರಿ ಸಂಸ್ಥೆ ಪ್ರೆಸ್ ಇನ್ಫರ್ಮೇಷನ್ ಬ್ಯುರೋ ಈ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ನಡೆಸಿದೆ.
Gruhalakshmi Scheme: ಅರ್ಜಿ ಸಲ್ಲಿಸಲು App ರೆಡಿ ಆಯ್ತು.. ಡೌನ್ಲೋಡ್ ಮಾಡುವುದು ಹೇಗೆ?
ತನಿಖೆ ನಡೆಸಿದಾಗ ವೈರಲ್ ಆದಂತಹ ಈ ಫೋಟೋ ಸುಳ್ಳು ಎಂದು ತಿಳಿದುಬಂದಿದೆ. ಈ ವಿಷಯವನ್ನು ಪಿಬಿಐ ಟ್ವೀಟ್ ಮಾಡುವ ಮೂಲಕ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಿದೆ. ಕೇಂದ್ರ ಸರ್ಕಾರದ ಯೋಜನೆಗಳಿಗೆ ಸಂಬಂಧಿಸಿದ ಯಾವುದೇ ನಕಲಿ ಮಾಹಿತಿಯನ್ನು ತಿಳಿಯಲು ನೀವು @PBIFactCheck ಅನ್ನು ಫಾಲೋ ಮಾಡಬಹುದು. ಈ ಒಂದು ಸುದ್ದಿಯಿಂದ ಹಲವು ಜನರಿಗೆ ಗೊಂದಲ ಉಂಟಾಗಿತ್ತು. ಆದರೆ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದಂತಹ ಸುದ್ದಿ ಸುಳ್ಳು ಎಂದು ತಿಳಿದಿದೆ. ಈ ವಿಷಯವನ್ನು ತಪ್ಪದೇ ಎಲ್ಲರಿಗು ಶೇರ್ ಮಾಡಿ.
ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆದಂತಹ ಫೋಟೋ ಫೇಕ್ ಹಾಗೂ ಈ ಸುದ್ದಿಯನ್ನು ಯಾರು ನಂಬಬೇಡಿ ಎಂದು ಹೇಳಲಾಗಿದೆ. ಈ ಸುದ್ದಿ ಸುಳ್ಳು ಎಂದು ಫ್ಯಾಕ್ಟ್ ಚೆಕ್ [Fact Check] ಮೂಲಕ ತಿಳಿದು ಬಂದಿದೆ. RBI ಈ ಮಾಹಿತಿಯನ್ನು ನೀಡಿಲ್ಲ. ಇದು ಒಂದು ಸುಳ್ಳು ಪೋಸ್ಟ್ ಎಲ್ಲರ ಮೊಬೈಲ್ನಲ್ಲಿ ಹರಿದಾಡುತ್ತಿದೆ .
ಕರ್ನಾಟಕ ರಾಜ್ಯ ಸರ್ಕಾರ ಗೃಹ ಜ್ಯೋತಿ ಯ್ಯೋಜನೆಗೆ ಅರ್ಜಿಯನ್ನು ಸ್ವೀಕಾರ ಮಾಡುತ್ತಿದ್ದು ಗ್ರಾಹಕರು ಈಗ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆದರೆ ಈಗ ಹಲವರಿಗೆ ಸರ್ವರ್ ಸಮಸ್ಯೆ ಇಂದ ಅರ್ಜಿಯನ್ನು ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಹೊಸದೊಂದು ಲಿಂಕ್ ಅನ್ನು ನೀಡಿದ್ದಾರೆ. ನೀವು ಕೂಡ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸ ಬೇಕು ಅಂದರೆ ಇಲ್ಲಿ ಕ್ಲಿಕ್ ಮಾಡಿ. ಈ ಲಿಂಕ್ ಮೂಲಕ ನೀವು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.