
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಸರಿಗಮಪದಲ್ಲಿ ಗಾಯಕಿಯಾಗಿ ಗುರುತಿಸಿಕೊಂಡಿರುವ ಪೃಥ್ವಿ ಭಟ್ (Prithwi Bhat) ಅವರು ಮನೆಯವರ ವಿರೋಧದ ನಡುವೆಯೂ ಪ್ರೇಮ ವಿವಾಹವಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅವರು ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರೊಡಕ್ಷನ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಅಭಿಷೇಕ್ ಎಂಬುವವರನ್ನು ಮಾರ್ಚ್ 27 ರಂದು ವಿವಾಹವಾಗಿದ್ದಾರೆ ಎನ್ನಲಾಗಿದೆ.
ಮದುವೆಯಾದ ಸುಮಾರು ಇಪ್ಪತ್ತು ದಿನಗಳ ನಂತರ, ಪೃಥ್ವಿ ಅವರ ತಂದೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಅಲ್ಲದೆ, ಯಾರೋ ವಶೀಕರಣ ಮಾಡಿ ತಮ್ಮ ಮಗಳನ್ನು ಮದುವೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಸರಿಗಮಪದ ಮೂಲಕ ಮನೆಮಾತಾದ ಪೃಥ್ವಿ ಭಟ್ ಅವರ ವೈಯಕ್ತಿಕ ಜೀವನದಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ಅವರು ಅಭಿಷೇಕ್ ಎಂಬುವವರೊಂದಿಗೆ ಹೊಸ ಜೀವನಕ್ಕೆ ಕಾಲಿಟ್ಟಿದ್ದು, (Prithwi Bhat Marraige) ಈ ಮದುವೆಯ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿವೆ
ಪೃಥ್ವಿ ಅವರ ತಂದೆ ಶಿವಪ್ರಸಾದ್ ಭಟ್ ಅವರು, ತಮ್ಮ ವಿರೋಧದ ನಡುವೆಯೂ ಮಗಳು ಮನೆಯಿಂದ ಹೋಗಿ ಮದುವೆಯಾಗಿದ್ದಾಳೆ ಮತ್ತು ಆಕೆಯನ್ನು ವಶೀಕರಣ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಪೃಥ್ವಿ ಭಟ್ ಅವರ ತಂದೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಆ ಆಡಿಯೋದಲ್ಲಿ ಅವರು ಸಂಗೀತ ಶಿಕ್ಷಕ ನರಹರಿ ದೀಕ್ಷಿತ್ ಅವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೃಥ್ವಿ ಭಟ್ ಅವರದ್ದು ಎನ್ನಲಾದ ಆಡಿಯೋ ತುಣುಕು ಹೀಗಿದೆ
“ಹಾಯ್ ಅಪ್ಪಾ. ಸಾರಿ, ನೀವು ಈಗಾಗಲೇ ಎರಡು ದಿನಗಳಿಂದ ಹವ್ಯಕ ಗ್ರೂಪ್ನಲ್ಲಿ ಮತ್ತು ಬೇರೆ ಬೇರೆ ಗ್ರೂಪ್ಗಳಲ್ಲಿ ನರಹರಿ ದೀಕ್ಷಿತ್ ಸರ್ ಬಗ್ಗೆ ಮತ್ತು ನನ್ನ ಬಗ್ಗೆ ಆಡಿಯೋ ಮೆಸೇಜ್ಗಳನ್ನು ಕಳುಹಿಸುತ್ತಿದ್ದೀರಿ. ಈ ವಿಷಯದಲ್ಲಿ ನರಹರಿ ದೀಕ್ಷಿತ್ ಅವರದ್ದು ಯಾವುದೇ ತಪ್ಪಿಲ್ಲ. ನಾನು ಮೊದಲು ಹೇಳಿದ ಹಾಗೆ, ಈಗಲೂ ಹೇಳುತ್ತಿದ್ದೇನೆ, ದೀಕ್ಷಿತ್ ಸರ್ ಅವರದ್ದು ಎಂಥದ್ದೇ ತಪ್ಪಿಲ್ಲ. ಮಾರ್ಚ್ 7ಕ್ಕೆ ದೀಕ್ಷಿತ್ ಸರ್ ಮನೆಗೆ ಬಂದಿದ್ದರು, ಈ ವಿಷಯದ ಬಗ್ಗೆ ಮಾತನಾಡಿದರು. ಆಗ ನಾನು ಅವರ ಎದುರೇ ಮತ್ತು ನಿಮ್ಮಗಳ ಎದುರೇ ನನಗೆ ಅಭಿ ಇಷ್ಟ ಅಂತಾನೇ ಹೇಳಿದ್ದು. ಅವತ್ತು ನಿಮ್ಮ ಮೇಲಿನ ಭಯಕ್ಕೆ ನಾನು ಸುಮ್ಮನಾದೆ, ಆದರೆ ನನ್ನ ಮನಸ್ಸಿನಲ್ಲಿ ಅಭಿ ಇದ್ದರು.”
ಶಿವಪ್ರಸಾದ್ ಅವರ ಆಡಿಯೋ ವೈರಲ್ ಆಗುತ್ತಿದ್ದಂತೆ, ಪೃಥ್ವಿ ಭಟ್ (Prithwi Bhat) ಅವರದ್ದು ಎನ್ನಲಾದ ಆಡಿಯೋ ಕೂಡಾ ಹರಿದಾಡುತ್ತಿದೆ. ಈ ಆಡಿಯೋದಲ್ಲಿ ಪೃಥ್ವಿ ಭಟ್ ಅವರು ತಮ್ಮ ತಂದೆಯ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಹೀಗೆ, ಗಾಯಕಿ ಪೃಥ್ವಿ ಭಟ್ ಅವರ ಮದುವೆ ಪ್ರಕರಣವು ತೀವ್ರ ಗೊಂದಲ ಮತ್ತು ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ: ಕಣ್ಣಿಗೆ ಖಾರದಪುಡಿ, ಬಿಸಿ ಎಣ್ಣೆ, ಮಧ್ಯಾಹ್ನ 2:30ಕ್ಕೆ ಫಿಶ್ ಕರಿ ಆರ್ಡರ್, ಸಂಜೆ 5ಕ್ಕೆ ಪತ್ನಿಯಿಂದ ಫಿನಿಶ್!