ಹಣ ಉಳಿಸುವುದು ಎಲ್ಲರಿಗೂ ಮುಖ್ಯ. ಆದರೆ “ಹಣ ಸೇಫ್ ಆಗಿ ಇರುತ್ತಾ?” “ಬಡ್ಡಿ ಒಳ್ಳೆಯದಾ?” ಅನ್ನೋ ಪ್ರಶ್ನೆಗಳು ಸಹಜ. ಇಂದಿನ ಕಾಲದಲ್ಲಿ ಶೇರು ಮಾರುಕಟ್ಟೆ ಅಸ್ಥಿರ, ಬ್ಯಾಂಕ್ ಎಫ್ಡಿಗಳಲ್ಲಿ ಬಡ್ಡಿ ಕಡಿಮೆ. ಆದರೆ ಒಂದು ಸರ್ಕಾರಿ ಭದ್ರತೆಯ ಹೂಡಿಕೆ ಇದೆ, ಅದೇ ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ (Post Office Time Deposit – POTD). ಈ ಸ್ಕೀಮ್ ನಿಮ್ಮ ದುಡ್ಡಿಗೆ ಸೇಫ್ಟಿ + ಉತ್ತಮ ಬಡ್ಡಿ ಎರಡನ್ನೂ ಒದಗಿಸುತ್ತದೆ.
ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಎಂದರೇನು?
ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ (POTD) ಒಂದು ಸ್ಥಿರ ಠೇವಣಿ (Fixed Deposit) ರೀತಿಯ ಹೂಡಿಕೆ ಯೋಜನೆ. ನೀವು ನಿಗದಿತ ಅವಧಿಗೆ ಹಣ ಠೇವಣಿ ಇಟ್ಟರೆ, ಸರ್ಕಾರ ನಿಗದಿಪಡಿಸಿದ ಬಡ್ಡಿಯನ್ನು ನೀಡುತ್ತದೆ. ಇದರಲ್ಲಿ 1, 2, 3, ಮತ್ತು 5 ವರ್ಷಗಳ ಅವಧಿಗಳ ಆಯ್ಕೆ ಇರುತ್ತದೆ. ಬಡ್ಡಿ ವರ್ಷಕ್ಕೊಮ್ಮೆ ಲೆಕ್ಕ ಹಾಕಲಾಗುತ್ತದೆ ಮತ್ತು ಅವಧಿ ಮುಗಿದಾಗ ನಿಮಗೆ ಮೂಲಧನದ ಜೊತೆಗೆ ಬಡ್ಡಿಯ ಮೊತ್ತ ಸಿಗುತ್ತದೆ.
ಈ ಯೋಜನೆಯ ಮತ್ತೊಂದು ಆಕರ್ಷಣೆ ಎಂದರೆ ಕನಿಷ್ಠ ಮೊತ್ತ ಕೇವಲ ₹1,000 ಮಾತ್ರ!
ಅದಿನಂತರ ₹100ರ ಗುಣಾಕಾರಗಳಲ್ಲಿ (₹1,100, ₹1,200, ₹1,300…) ಹಣ ಹೆಚ್ಚಿಸಬಹುದು. ಗರಿಷ್ಠ ಮಿತಿ ಇಲ್ಲ ಅಂದರೆ, ನೀವು ಇಷ್ಟವಾದಷ್ಟು ಮೊತ್ತವನ್ನು ಹೂಡಿಕೆ ಮಾಡಬಹುದು.
ಇದು ಭಾರತ ಸರ್ಕಾರದಿಂದ ನೇರವಾಗಿ ಬೆಂಬಲಿತ ಯೋಜನೆ ಆಗಿರುವುದರಿಂದ, (100% government guarantee investment) ನಿಮ್ಮ ಹಣ ಸಂಪೂರ್ಣವಾಗಿ ಸರ್ಕಾರಿ ಗ್ಯಾರಂಟಿ ಒಳಗಿದೆ.ಯಾವುದೇ ಬ್ಯಾಂಕ್ ದಿವಾಳಿ ಹೊಡೆದರೂ ಅಥವಾ ಶೇರು ಮಾರುಕಟ್ಟೆ ಕುಸಿದರೂ ನಿಮ್ಮ ಹೂಡಿಕೆಯು ಸುರಕ್ಷಿತ. ಇಲ್ಲಿ ರಿಸ್ಕ್ = ಶೂನ್ಯ, ಭದ್ರತೆ = ಶೇ.100%
| ಅವಧಿ | ಬಡ್ಡಿ ದರ (ಪ್ರತಿ ವರ್ಷಕ್ಕೆ) |
|---|---|
| 1 ವರ್ಷ | 6.9% |
| 2 ವರ್ಷ | 7.0% |
| 3 ವರ್ಷ | 7.1% |
| 5 ವರ್ಷ | 7.5% |
((ಗಮನಿಸಿ: ಬಡ್ಡಿ ದರಗಳು ಸರ್ಕಾರದಿಂದ ತ್ರೈಮಾಸಿಕವಾಗಿ ನಿಗದಿಪಡಿಸಲ್ಪಡುತ್ತವೆ, ಬದಲಾವಣೆ ಸಾಧ್ಯ) ಗಮನಿಸಿ: 5 ವರ್ಷಗಳ ಠೇವಣಿಗೆ ಅತ್ಯಧಿಕ ಬಡ್ಡಿ ಸಿಗುತ್ತದೆ ಮತ್ತು ಇದಕ್ಕೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿ ವಿನಾಯಿತಿ ಕೂಡ ಲಭ್ಯ.
ಯಾರಿಗೆ ಈ ಖಾತೆ ತೆರೆಯಬಹುದು?
- ಯಾವುದೇ ಭಾರತೀಯ ನಾಗರಿಕರು
- ಏಕ (Single) ಅಥವಾ ಜಂಟಿ (Joint) ಖಾತೆದಾರರು
- 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನ ಮಕ್ಕಳು ತಮ್ಮ ಹೆಸರಿನಲ್ಲಿ ಖಾತೆ ತೆರೆಯಬಹುದು (ಪೋಷಕರ ಮಾರ್ಗದರ್ಶನದಲ್ಲಿ)
ಇದನ್ನೂ ಓದಿ: ಮೈಲೇಜ್ ಕಿಂಗ್: ₹100 ಪೆಟ್ರೋಲ್ನಲ್ಲಿ 70 ಕಿ.ಮೀ ಓಡಾಡಿ, ಆಫೀಸ್ಗೆ ಹೋಗೋಕೆ ಬೆಸ್ಟ್!
ನೀವು ಯಾವ ಸ್ಥಳದಲ್ಲಿದ್ದರೂ ನಿಮ್ಮ ಪೋಸ್ಟ್ ಆಫೀಸ್ ಟಿಡಿ ಖಾತೆಯನ್ನು ಭಾರತದೆಲ್ಲೆಡೆ ಯಾವುದೇ ಪೋಸ್ಟ್ ಆಫೀಸ್ಗೆ (Post Office FD 2025) ವರ್ಗಾಯಿಸಬಹುದು. ಇದು ಉದ್ಯೋಗ ಅಥವಾ ಸ್ಥಳಾಂತರದ ಸಂದರ್ಭಗಳಲ್ಲಿ ಬಹಳ ಸಹಾಯಕ.
ಬ್ಯಾಂಕ್ ಎಫ್ಡಿಗಿಂತ ಪೋಸ್ಟ್ ಆಫೀಸ್ ಟಿಡಿಯ ಲಾಭಗಳು
| ಅಂಶ | ಬ್ಯಾಂಕ್ ಎಫ್ಡಿ | ಪೋಸ್ಟ್ ಆಫೀಸ್ ಟಿಡಿ |
|---|---|---|
| ಬಡ್ಡಿ ದರ | ಸಾಮಾನ್ಯವಾಗಿ 6.5% – 7.0% | ಹೆಚ್ಚು 7.5% ವರೆಗೆ |
| ಭದ್ರತೆ | ಬ್ಯಾಂಕ್ ಗ್ಯಾರಂಟಿ (₹5 ಲಕ್ಷ DICGC) | ಶೇ.100 ಸರ್ಕಾರಿ ಭದ್ರತೆ |
| ತೆರಿಗೆ ವಿನಾಯಿತಿ | ಕೆಲವೊಂದು ಮಾತ್ರ | 5 ವರ್ಷದ ಠೇವಣಿಗೆ 80C ವಿನಾಯಿತಿ |
| ಮಾರುಕಟ್ಟೆ ಅಪಾಯ | ಇರುತ್ತದೆ | ಇಲ್ಲ |
ಒಂದು ಉದಾಹರಣೆ:
ನೀವು ₹1,00,000 ಅನ್ನು 5 ವರ್ಷಗಳ ಕಾಲ ಹೂಡಿಕೆ ಮಾಡಿದರೆ: ಬಡ್ಡಿ ದರ 7.5% ಆಗಿದ್ದರೆ,
5 ವರ್ಷಗಳ ಬಳಿಕ ನಿಮಗೆ ಸಿಗುವ ಮೊತ್ತ ಸುಮಾರು ₹1,43,500 (ಸುಮಾರು ₹43,500 ಲಾಭ). ಅದೂ ಸಂಪೂರ್ಣ ಸೇಫ್ ಮತ್ತು ಸರ್ಕಾರಿ ಗ್ಯಾರಂಟಿಯೊಂದಿಗೆ!
ಮುಖ ಅಂಶಗಳು (Quick Summary)
- ಕನಿಷ್ಠ ಠೇವಣಿ: ₹1,000
- ಗರಿಷ್ಠ ಮಿತಿ: ಇಲ್ಲ
- ಅವಧಿ ಆಯ್ಕೆ: 1, 2, 3 ಅಥವಾ 5 ವರ್ಷ
- ಬಡ್ಡಿ ದರ: ಗರಿಷ್ಠ 7.5%
- ತೆರಿಗೆ ವಿನಾಯಿತಿ: 5 ವರ್ಷಗಳ ಠೇವಣಿಗೆ ಸೆಕ್ಷನ್ 80C
- ಸಂಪೂರ್ಣ ಸರ್ಕಾರಿ ಭದ್ರತೆ
Lakshmi is an accomplished writer with six years of experience in the media industry. She possesses extensive expertise in covering a diverse range of topics, including entertainment, job-related insights, and comprehensive updates on government schemes.
