PM Rozgar Mela: ಅರ್ಜಿ ಸಲ್ಲಿಸುವುದು ಹೇಗೆ? ಏನಿದು ಪಿ ಎಂ ಉದ್ಯೋಗ ಮೇಳ?

PM Rozgar Mela ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ದೆಹಲಿಯಿಂದ ವಿಡಿಯೋ ಕಾನ್ಫರೇನ್ಸ ಮೂಲಕ ಚಾಲನೆಯನ್ನು ನೀಡಿದ್ದಾರೆ.ಸುಮಾರು 75 ಸಾವಿರ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರವನ್ನು ಕಾರ್ಯಕ್ರಮದಲ್ಲಿ ವಿತರಣೆ ಮಾಡಿದ್ದಾರೆ.

PM Rozgar Mela: ಏನಿದು ಯೋಜನೆ?

ಯುವಕರಿಗಾಗಿ ಉದ್ಯೋಗವನ್ನು ಕಲ್ಪಿಸುವುದಕ್ಕಾಗಿ ರಾಷ್ಟೀಯ ಕೌಶಲ್ಯಾಭಿವೃದ್ಧಿ ನಿಗಮವು ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ಮಾರ್ಗದರ್ಶನದಲ್ಲಿ ಉದ್ಯೋಗ ಮೇಳ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಉದ್ಯೋಗಾವಕಾಶ ಎಲ್ಲೆಲಿ ಸಿಗುತ್ತೆ?

ಪಿ ಎಂ ಓ ನೀಡಿದ ಮಾಹಿತಿಯ ಪ್ರಕಾರ ಕೇಂದ್ರದ 38 ಸಚಿವಾಲಯ ಅಥವಾ ಇಲಾಖೆಗಳಿಗಾಗಿ ದೇಶದಾದ್ಯಂತ ನೇಮಕಾತಿ ನಡೆಯಲಿದೆ. ಗ್ರೂಪ್ ಎ ಶ್ರೇಣಿಯಿಂದ ಹುದ್ದೆಗಳಿಂದ ತೊಡಗಿ ಗ್ರೂಪ್ ಸಿ ಶ್ರೇಣಿಯ ಹುದ್ದೆಗಳ ವರೆಗೆ ನೇಮಕಾತಿ ನಡೆಯಲಿದೆ. ಕೇಂದ್ರ ಸಶಸ್ತ್ರ ಪಡೆ ಸಿಬ್ಬಂದಿ, ಸಬ್-ಇನ್‌ಸ್ಪೆಕ್ಟರ್‌ಗಳು, ಕಾನ್‌ಸ್ಟೆಬಲ್‌ಗಳು, ಎಲ್‌ಡಿಸಿ, ಸ್ಟೆನೋ, ಪಿಎ, ಆದಾಯ ತೆರಿಗೆ ಇನ್ಸ್‌ಪೆಕ್ಟರ್‌ಗಳು ಮತ್ತು ಎಂಟಿಎಸ್ ಕೂಡ ನೇಮಕವಾಗುತ್ತಿರುವ ಹುದ್ದೆಗಳಲ್ಲಿ ಒಳಗೊಂಡಿವೆ.

ಗ್ರೂಪ್ ಎ ಶ್ರೇಣಿಯ 23,876, ಗ್ರೂಪ್ ಬಿ ಶ್ರೇಣಿಯ 25,836 ಹಾಗೂ ಗ್ರೂಪ್ ಸಿ ಶ್ರೇಣಿಯ 7.6 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ‘ಸಿಸಿಐಎಂ ಇಂಡಿಯಾ’ ತಾಣವು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ರಕ್ಷಣೆ, ರೈಲ್ವೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಿಗೆ 10,000 ಹುದ್ದೆಗಳನ್ನು ನಿಗದಿಪಡಿಸಲಾಗಿದೆ. 2023ರ ಅಂತ್ಯದ ಒಳಗಾಗಿ ಎಲ್ಲ ನೇಮಕಾತಿಗಳನ್ನು ಮಾಡಿಕೊಳ್ಳಲು ಉದ್ದೇಶಿಸಲಾಗಿದೆ.

ಅರ್ಜಿ ಸಲ್ಲಿಸಲು ಯಾವೆಲ್ಲ ಅರ್ಹತೆಗಳಿರಬೇಕು? PM Rojgar Mela

  • ಅರ್ಜಿ ಸಲ್ಲಿಸುವ ಅಭ್ಯರ್ಥಿ ಭಾರತದ ಪ್ರಜೆಯಾಗಿರಬೇಕು.
  • ಅರ್ಜಿ ಸಲ್ಲಿಸುವ ವ್ಯಕ್ತಿ ಯಾವುದೇ ಘೋರ ಅಪರಾಧ ಮಾಡಿರಬಾರದು.
  • ಅಭ್ಯರ್ಥಿಯು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರಬಾರದು.
  • ಮೌಖಿಕ ಹಾಗೂ ಲಿಖಿತ ಪರೀಕ್ಷೆ ಸಂದರ್ಶನದಲ್ಲಿ ತೇರ್ಗಡೆಯಾಗಿರಬೇಕು.
  • ಪದವಿ, 10ನೇ ತರಗತಿ ಹಾಗೂ 12ನೇ ತರಗತಿ ಶಿಕ್ಷಣ ಪಡೆದಿರಬೇಕು.
  • 18-29 ವರ್ಷ ವಯಸ್ಸಿನವರಾಗಿರಬೇಕು

Diwali Wishes in kannada

ಅರ್ಜಿ ಸಲ್ಲಿಸುವುದು ಹೇಗೆ?

  1. psc.gov,in, ssc.nic.in ಹಾಗೂ ಇತರ ಅಧಿಕೃತ ನೇಮಕಾತಿ ತಾಣಗಳಿಗೆ ಭೇಟಿ ನೀಡಿ.
  2. PM Rozgar Mela 2022 Online Registration ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
  3. ಎಲ್ಲ ವೈಯಕ್ತಿಕ ವಿವರಗಳನ್ನು ದಾಖಲಿಸಿ.
  4. ಬಳಿಕ ಸಬ್​ಮಿಟ್ ಬಟನ್ ಕ್ಲಿಕ್ ಮಾಡಿ
  5. ಇಷ್ಟು ಮಾಡಿದರೆ ಪಿಎಂ ರೋಜ್​ಗಾರ್ ಮೇಳದಲ್ಲಿ ನೀವು ಯಶಸ್ವಿಯಾಗಿ ನೋಂದಣಿ ಮಾಡಿಕೊಂಡಂತಾಗಲಿದೆ.
  6. ಅಭ್ಯರ್ಥಿಗಳು ಮೂಲ DMC ಗಳ ಸ್ಕ್ಯಾನ್ ಮಾಡಿದ ಪ್ರತಿಗಳು, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟಿಂಗ್ ಕಾರ್ಡ್‌ನಂತಹ ಐಡಿ ಜೊತೆಗೆ ಹಿಂದಿನ ಕೆಲಸದ ಅನುಭವ ಪ್ರಮಾಣಪತ್ರವನ್ನೂ ಲಗತ್ತಿಸಬೇಕು. ಅಭ್ಯರ್ಥಿಗಳು ಲಗತ್ತಿಸಿದ ಎಲ್ಲಾ ದಾಖಲೆಗಳು ಸ್ಪಷ್ಟ ಮತ್ತು ಮಾನ್ಯವಾಗಿರಬೇಕು.

ಅರ್ಜಿ ಯಾವಾಗ ಸಲ್ಲಿಸಬಹುದು?

ಪಿ ಎಂ ರೋಜಗಾರ್ ಯೋಜನೆಯಡಿಯಲ್ಲಿ 2022ರ ಅಕ್ಟೋಬರ್ 22ರಿಂದ ಅರ್ಜಿ ಸಲ್ಲಿಸಬಹುದು. 2023ರ ಕೊನೆಯವರೆಗೂ ಅರ್ಜಿ ಸಲ್ಲಿಸಲು ಅವಕಾಶವಿದೆ.

Share