ರಾತ್ರಿ ಸಮಯದಲ್ಲಿ ತಡವಾಗಿ ಮಲಗುವುದರಿಂದ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಹಾಗೆ ಈ ರೀತಿಯಾಗಿ ತಡವಾಗಿ ಮಲಗುವವರು ಬೇಗ ಸಾಯುತ್ತಾರೆ ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಈ ವಿಷಯದ ಬಗ್ಗೆ ಸಂಶೋದನೆಯಲ್ಲಿ ಏನೆಂದು ತಿಳಿದು ಬಂದಿದೆ ಅಂತ ವಿವರವಾಗಿ ಓದಿ.
ಫೈನ್ ಲ್ಯಾಂಡ್ ನ ಹೆಲ್ಸಿಂಕಿ ವಿಶ್ವವಿದ್ಯಾಲಯ ಇತ್ತೀಚಿಗೆ ಪ್ರಕಟ ಮಡಿದ ಸಂಶೋಧನೆಯ ಪ್ರಕಾರ ಈ ರೀತಿ ಮಾಡುವುದರಿಂದ ಜನರು ಬೇಗನೆ ಸಾಯುತ್ತಾರೆ ಎಂದು ತಿಳಿದು ಬಂದಿದೆ. 37 ವರ್ಷಗಳ ಕಾಲ ಸುಮಾರು 23 ಸಾವಿರಕ್ಕೂ ಅಧಿಕ ಜನರ ಮೇಲೆ ನಡೆಸಿದ ಸಂಶೋಧನೆಯ ಆಧಾರದ ಮೇಲೆ ಈ ವರದಿಯನ್ನು ಪ್ರಕಟ ಮಾಡಲಾಗಿದೆ.
ಈ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಡೆಸಿದ ಸಂಶೋಧನೆಯ ಪ್ರಕಾರ ಒಂದು ನಿರ್ದಿಷ್ಟ ಸಮಯದಲ್ಲಿ ಮನುಷ್ಯನ ದೇಹವು ನಿದ್ರೆಯನ್ನು ಮಾಡಲು ನೈಸರ್ಗಿಕ ಒಲವನ್ನು ತೋರುತ್ತೆ. ಆ ಸಮಯದಲ್ಲಿ ನಿದ್ರೆ ಮಾಡಿದಾಗ ಅವರ ಆರೋಗ್ಯದ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ.
ಇದನ್ನೂ ಓದಿ: ನೀವು ಕೈಯಿಂದ ಆಹಾರವನ್ನು ಸೇವಿಸುತ್ತೀರಾ?
ಯಾವ ವ್ಯಕ್ತಿಯು ತಡರಾತ್ರಿವರೆಗೂ ನಿದ್ರೆ ಮಾಡದೆ ಇರುವುದರಿಂದ ಮತ್ತು ಬೆಳಿಗ್ಗೆ ತಡವಾಗಿ ಎದ್ದೇಳುವುದರಿಂದ ಅಂತವರ ದೇಹದ ಮೇಲೆ ಹೆಚ್ಚು ನಕಾರಾತ್ಮಕ ಪರಿಣಾಮವನ್ನು ಬೀರುತ್ತೆ. ನೈಟ್ ಶಿಫ್ಟ್ ಕೆಲಸಗಳು ಮನುಷ್ಯನ ದೇಹದ ಮೇಲೆ ಅಧಿಕ ಪರಿಣಾಮವನ್ನು ಬೀರುತ್ತದೆ. ಈ ರೀತಿಯಾಗಿ ನಕಾರಾತ್ಮಕ ಪರಿಣಾಮ ಬಿದ್ದ ಹಲವು ಪುರಾವೆಗಳು ಕೂಡ ಸಿಕ್ಕಿವೆ.
ಹೆಚ್ಚಾಗಿ ಹೃದಯಕ್ಕೆ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಬಹುದು. ಈ ಮೂಲಕ ತಿಳಿದು ಬರುವ ವಿಷ್ಯ ಏನೆಂದರೆ ರಾತ್ರಿ ಹೊತ್ತು ತಡವಾಗಿ ಮಲಗುವುದರಿಂದ ಸಾಯುವ ಸಾಧ್ಯತೆಯೂ ಹೆಚ್ಚಿದೆ ಎಂದು ಸಂಶೋದನೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಊಟ ಮಾಡಿದ ತಕ್ಷಣ ಮಲಗಿದರೆ ಏನೆಲ್ಲಾ ತೊಂದರೆ ಆಗುತ್ತೆ ನೋಡಿ
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
