ಸೊಳ್ಳೆಯ ಕಾಟದಿಂದ ಪಾರಾಗಲು ನಾವು ಸೊಳ್ಳೆ ಬತ್ತಿಯನ್ನು ಉಪಯೋಗಿಸಿತ್ತೇವೆ. ಆದರೆ ಈ ಸೊಳ್ಳೆ ಬತ್ತಿಯಿಂದ ಆಗುವ ಅನಾನುಕೂಲಗಳು ಬಹಳ ಇವೆ. ಬೇಸಿಗೆ ಕಾಲ ಬಂದರೆ ಸಾಕು ಸೊಳ್ಳೆಯ ಕಾಟ ಹೆಚ್ಚಾಗುತ್ತದೆ. ಹಾಗೆ ಜನರು ಸೊಳ್ಳೆಯಿಂದ ತಪ್ಪಿಸಿಕೊಳ್ಳಲು ಹಲವಾರು ಎಚ್ಚರಿಕೆ ಕ್ರಮಗಳನ್ನು ತೆಗೆದು ಕೊಳ್ಳುತ್ತಾರೆ. ಕೆಲವರು ಸೊಳ್ಳೆ ಬತ್ತಿ, ಕ್ರೀಮ್, ಲೋಷನ್ ಮುಂತಾದ ವಸ್ತುಗಳನ್ನು ಬಳಸಿ ಸುಖ ನಿದ್ರೆಗೆ ಜಾರುತ್ತಾರೆ.
ಆದರೆ ನಾವು ಬಳಸುವ ಈ ವಸ್ತುಗಳಿಂದ ತುಂಬಾ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ. ಹಾಗೆಯೇ ವೈದ್ಯರು ಒಂದು ಸೊಳ್ಳೆ ಬತ್ತಿಯನ್ನು ಹಚ್ಚುವುದು ೧೦೦ ಸಿಗರೇಟ್ ಸೇದುವುದಕ್ಕೆ ಸಮ ಎಂದು ಹೇಳುತ್ತಾರೆ. ಆರೋಗ್ಯ ತಜ್ಞರ ಪ್ರಕಾರ ಸೊಳ್ಳೆ ಬತ್ತಿಗಳಲ್ಲಿ ಬಳಸುವ ರಾಸಾಯನಿಕಗಳು ನಮ್ಮ ಆರೋಗ್ಯಕ್ಕೆ ಹಾನಿಕರ. ಮತ್ತು ಇವುಗಳನ್ನು ದಿನ ನಿತ್ಯ ಬಳಸುವುದರಿಂದ ನಮ್ಮ ಆರೋಗ್ಯದ ಮೇಲೆ ಬಹಳ ಪರಿಣಾಮವನ್ನು ಬೀರುತ್ತದೆ ಮತ್ತು ಇದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ.
| Join What’s App group | Click here |
ಅಲ್ಲದೆ ಸೊಳ್ಳೆ ಬತ್ತಿಯಿಂದ ಬರುವ ವಾಸನೆ ಅಥವಾ ಹೊಗೆಯನ್ನು ನಾವು ಸೇವಿಸುವುದರಿಂದ ನಮ್ಮ ಆರೋಗ್ಯದ ಮೇಲೆ ಅದು ಪರಿಣಾಮವನ್ನು ಉಂಟುಮಾಡುತ್ತದೆ. ಅದರಿಂದ ಬರುವ ರಾಸಾಯನಿಕ ಹೊಗೆಯಿಂದ ನಮ್ಮಲ್ಲಿ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆಗಳು ಇರುತ್ತವೆ. ಮತ್ತು ಈ ಹೊಗೆಯನ್ನು ದಿನ ನಿತ್ಯ ಸೇವಿಸುವುದರಿಂದ ಅಸ್ತಮದ ಸಮಸ್ಯೆಯು ಕಂಡು ಬರುತ್ತದೆ.
ಆದ್ದರಿಂದ ವೈದ್ಯರು ಮತ್ತು ಆರೋಗ್ಯ ತಜ್ಞರು ಈ ಸೊಳ್ಳೆ ಬತ್ತಿಗಳಿಂದ ದೂರವಿರಲು ಸಲಹೆ ನೀಡಿದ್ದಾರೆ ಮತ್ತು ಅದರ ಬದಲಾಗಿ ಸೊಳ್ಳೆ ಪರದೆಗಳನ್ನು ಬಳಸುವಂತೆ ಸಲಹೆ ನೀಡಿದ್ದಾರೆ. ಮತ್ತು ಇನ್ನಿತರ ನೈಸರ್ಗಿಕ ಕ್ರ ಮಗಳನ್ನು ಬಳಸಿ ನಾವು ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಬಹುದು.
ಅತಿಯಾಗಿ ಬೆಲ್ಲವನ್ನು ಸೇವಿಸಿದರೆ ಬರುತ್ತೆ ಈ ಕಾಯಿಲೆಗಳು
ತಲೆಯಲ್ಲಿ ಎರಡು ಸುಳಿ ಇದ್ದರೆ ಏನ್ ಅರ್ಥ? ಇದಕ್ಕೆ ಕಾರಣ ಏನು?
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
