ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ May 1 ತಾರೀಕಿನಿಂದ ಕೆಲವು ನಿಯಮಗಳನ್ನು ಬದಲಾಯಿಸಿದೆ. ಹೊಸ ನಿಯಮದ ಪ್ರಕಾರ TRAI ಹೊಸ ಫೀಚರ್ ಅನ್ನು ನೀಡುತ್ತಿದೆ. ಅದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ ನೋಡಿ.
May 1 ತಾರೀಕಿನಿಂದ ನಿಮ್ಮ ಮೊಬೈಲ್ ಗಳಿಗೆ ಬರುವ ಫೇಕ್ ಮೆಸೇಜ್ ಹಾಗೂ ಫೇಕ್ ಕರೆಗಳನ್ನು ಈ ಹೊಸ ಫಿಲ್ಟರ್ ಇದು ತಡೆಯುತ್ತದೆ. ಹೀಗೆ ಮಾಡುವುದರಿಂದ ಗ್ರಾಹಕರಿಗೆ ಅನಗತ್ಯವಾಗಿ ಬರುವಂತ ಮೆಸೇಜ್ ಹಾಗೂ ಫೋನ್ ಕರೆಗಳು ಬರುವುದಿಲ್ಲ. ಈ ನಿಟ್ಟಿನಲ್ಲಿ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ [TRAI] ಟೆಲಿಕಾಂ ಕಂಪನಿಗಳಿಗೆ ಸೂಚನೆಯನ್ನು ನೀಡಿದೆ.
ಮಾಧ್ಯಮಗಳು ನೀಡಿರುವ ಮಾಹಿತಿಗಳ ಪ್ರಕಾರ TRAI ಈ ಸಂದೇಶವನ್ನು ಟೆಲಿಕಾಂ ಕಂಪನಿಗಳಿಗೆ ಹೊರಡಿಸಿದೆಯಂತೆ. ಟೆಲಿಕಾಂ ಕಂಪನಿಗಳು ಫೇಕ್ ಕಾಲ್ ಹಾಗೂ ಮೆಸೇಜ್ ಗಳನ್ನೂ ತಡೆಗಟ್ಟಲು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸ್ಪಾಮ್ ಫಿಲ್ಟರ್ ಅನ್ನು ಅಳವಡಿಸುತ್ತಿವೆ.
ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಆದೇಶ ಹೊರಡಿಸಿದ ನಂತರ May 1 ರಿಂದ ಈ ಸೇವೆಗಳು ಪ್ರಾರಂಭವಾಗುವ ನಿರೀಕ್ಷೆಯಲ್ಲಿದೆ. ಇದರ ಜೊತೆಗೆ TRAI ಕಾಲರ್ ಐಡಿ ವೈಶಿಷ್ಟ್ಯವನ್ನು ಪರಿಚಯಿಸುವ ಕೆಲಸ ಮಾಡುತ್ತಿದೆ.
What’s App ನಲ್ಲಿ ಬಂದಿದೆ ಹಲವು ಹೊಸ ಫೀಚರ್
ಪ್ರತಿ ತಿಂಗಳು ಉಚಿತ ಕರೆಂಟ್ ಬೇಕಾದರೆ ಈಗಲೇ ಅರ್ಜಿ ನೀಡಿ
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
