
- ಜುಲೈ 29, 2025 ರಂದು ನಾಗಪಂಚಮಿ ಹಬ್ಬವಿದ್ದು, ಈ ದಿನ ಶಿವನ ಪೂಜೆ ಮತ್ತು ನಾಗದೇವತೆ ಆರಾಧನೆಯಿಂದ ಕಾಲಸರ್ಪ ದೋಷ ನಿವಾರಣೆಯಾಗುತ್ತದೆ
- ಶಿವನಿಗೆ ಭಕ್ತಿಯಿಂದ ಈ ವಸ್ತುಗಳನ್ನು ಅರ್ಪಿಸಿದರೆ, ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳು ದೂರವಾಗಿ, ಸಮೃದ್ಧಿ ಮತ್ತು ನೆಮ್ಮದಿ ನಿಮ್ಮದಾಗಲಿದೆ
ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ನಾವು ನಾಗರಪಂಚಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತೇವೆ. ಈ ದಿನ ನಾಗದೇವತೆಯನ್ನು ಪೂಜಿಸುವುದರಿಂದ ಮಹಾದೇವ ಶಿವನ ಆಶೀರ್ವಾದ ಸಿಗುತ್ತದೆ ಎಂಬುದು ನಮ್ಮ ನಂಬಿಕೆ. ಅಷ್ಟೇ ಅಲ್ಲ, ಈ ದಿನ ನಾಗದೇವತೆ ಮತ್ತು ಶಿವನನ್ನು ಒಟ್ಟಿಗೆ ಪೂಜಿಸುವುದರಿಂದ ಕಾಲಸರ್ಪ ದೋಷದಿಂದಲೂ ಪರಿಹಾರ ಸಿಗುತ್ತದೆ ಎಂದು ಹೇಳಲಾಗುತ್ತದೆ.
ಆರ್ಥಿಕ ಸಮಸ್ಯೆಯಿಂದ ದೂರವಾಗಲು ನಾಗರ ಪಂಚಮಿ ದಿನದಂದು ಏನು ಮಾಡಬೇಕು?
ಈ ವರ್ಷ ನಾಗಪಂಚಮಿ ಹಬ್ಬ ಜುಲೈ 29 ರಂದು ಬಂದಿದೆ. ಪಂಚಾಂಗದ ಪ್ರಕಾರ, ನಾಗ ಪಂಚಮಿ ತಿಥಿ ಜುಲೈ 28 ರಂದು ರಾತ್ರಿ 11:24 ಕ್ಕೆ ಪ್ರಾರಂಭವಾಗಿ ಜುಲೈ 30 ರಂದು ಬೆಳಿಗ್ಗೆ 12:46 ಕ್ಕೆ ಕೊನೆಗೊಳ್ಳುತ್ತದೆ. ಈ ಶುಭ ದಿನದಂದು ಶಿವಲಿಂಗಕ್ಕೆ ಕೆಲವೊಂದು ವಸ್ತುಗಳನ್ನು ಅರ್ಪಿಸುವುದರಿಂದ ಆರ್ಥಿಕ ಲಾಭಗಳು, ಸಾಲದಿಂದ ಮುಕ್ತಿ ಮತ್ತು ಮಾನಸಿಕ ಶಾಂತಿ ದೊರೆಯುತ್ತದೆ ಎಂದು ಧಾರ್ಮಿಕ ಗ್ರಂಥಗಳು ಹೇಳುತ್ತವೆ. ಹಾಗಾದರೆ, ನಿಮ್ಮ ಕೈಯಲ್ಲಿ ದುಡ್ಡು ನಿಲ್ಲುತ್ತಿಲ್ಲವಾದರೆ, ಆರ್ಥಿಕ ಸಮಸ್ಯೆಗಳು ಕಾಡುತ್ತಿದ್ದರೆ, ನಾಗಪಂಚಮಿಯಂದು ಶಿವಲಿಂಗಕ್ಕೆ ಯಾವ ವಸ್ತುಗಳನ್ನು ಅರ್ಪಿಸಬೇಕು ಎಂದು ತಿಳಿಯೋಣ ಬನ್ನಿ.
ದೇಸಿ ಹಸುವಿನ ತುಪ್ಪ: ಶಿವನಿಗೆ ದೇಸಿ ಹಸುವಿನ ತುಪ್ಪವೂ ಅಷ್ಟೇ ಪ್ರಿಯ. ನಾಗರ ಪಂಚಮಿಯ ದಿನದಂದು ಶಿವಲಿಂಗಕ್ಕೆ ಹಸುವಿನ ತುಪ್ಪ ಅರ್ಪಿಸುವುದರಿಂದ ರೋಗಗಳು ನಿವಾರಣೆಯಾಗುತ್ತವೆ ಮತ್ತು ಆರ್ಥಿಕ ಪ್ರಗತಿಗೆ ದಾರಿ ತೆರೆಯುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ. ಇದು ಸಾಲದಿಂದ ಮುಕ್ತಿ ಪಡೆಯಲು ಸಹಾಯಕವಾಗುತ್ತದೆ.
ಗಂಗಾಜಲ: ಧಾರ್ಮಿಕ ಗ್ರಂಥಗಳ ಪ್ರಕಾರ, ಶಿವನಿಗೆ ಗಂಗಾಜಲದೊಂದಿಗೆ ನೀರನ್ನು ಅರ್ಪಿಸುವುದರಿಂದ ಮಾನಸಿಕ ಶಾಂತಿ ಸಿಗುತ್ತದೆ. ಶಿವಲಿಂಗಕ್ಕೆ ಗಂಗಾಜಲದೊಂದಿಗೆ ನೀರನ್ನು ಅರ್ಪಿಸುವುದರಿಂದ ವ್ಯಕ್ತಿಯು ಬಯಸಿದ ಫಲಿತಾಂಶವನ್ನು ಪಡೆಯುತ್ತಾನೆ ಮತ್ತು ಮನಸ್ಸಿನ ನೆಮ್ಮದಿ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.
ಮೊಸರು: ನಾಗರ ಪಂಚಮಿಯ ದಿನದಂದು ಶಿವಲಿಂಗದ ಮೇಲೆ ಮೊಸರು ಅರ್ಪಿಸುವುದು ಅತ್ಯಂತ ಶುಭ ಮತ್ತು ಸಮೃದ್ಧಿಯನ್ನು ತರುವಂತಹ ಕಾರ್ಯವೆಂದು ಪರಿಗಣಿಸಲಾಗಿದೆ. ಶಿವನಿಗೆ ಮೊಸರು ಅರ್ಪಿಸುವುದರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ.
ಕಪ್ಪು ಎಳ್ಳು: ಶಿವನ ಪೂಜೆಯಲ್ಲಿ ಕಪ್ಪು ಎಳ್ಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ನಾಗರ ಪಂಚಮಿಯ ದಿನದಂದು ಶಿವನಿಗೆ ಕಪ್ಪು ಎಳ್ಳನ್ನು ಅರ್ಪಿಸುವುದರಿಂದ ನಿಮ್ಮ ಜೀವನದಲ್ಲಿನ ಅನೇಕ ಅಡೆತಡೆಗಳು ದೂರವಾಗುವುದಲ್ಲದೆ, ಆರ್ಥಿಕ ಪ್ರಗತಿಯೂ ಕಂಡುಬರುತ್ತದೆ.
ಕಬ್ಬಿನ ರಸ: ನಾಗರ ಪಂಚಮಿಯ ದಿನದಂದು ಶಿವಲಿಂಗಕ್ಕೆ ಕಬ್ಬಿನ ರಸವನ್ನು ಅರ್ಪಿಸುವುದು ಅತ್ಯಂತ ಶುಭ ಮತ್ತು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಶಿವಲಿಂಗಕ್ಕೆ ಕಬ್ಬಿನ ರಸವನ್ನು ಅರ್ಪಿಸುವುದರಿಂದ ಆರ್ಥಿಕ ಲಾಭಗಳು ಹೆಚ್ಚುತ್ತವೆ ಮತ್ತು ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.
ಜೇನುತುಪ್ಪ: ಶಿವನಿಗೆ ಜೇನುತುಪ್ಪ ಎಂದರೆ ಬಹಳ ಪ್ರೀತಿ. ನಾಗರ ಪಂಚಮಿಯ ದಿನದಂದು ಶಿವಲಿಂಗಕ್ಕೆ ಜೇನುತುಪ್ಪ ಅರ್ಪಿಸುವುದರಿಂದ ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ ಮತ್ತು ದೀರ್ಘಕಾಲದಿಂದ ಕಾಡುತ್ತಿರುವ ಸಾಲದ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ ಎಂದು ಧಾರ್ಮಿಕ ನಂಬಿಕೆ ಇದೆ.
ನಾಗರ ಪಂಚಮಿಯ ದಿನದಂದು ಭಕ್ತಿಯಿಂದ ನಾಗ ದೇವರ ಹಾಗೂ ಮಹಾದೇವನ ಪೂಜೆಯನ್ನು ಮಾಡುವುದರಿಂದ ಸಕಲ ಇಷ್ಟಾರ್ಥಗಳು ಪ್ರಾಪ್ತಿಯಾಗುತ್ತೆ ಹಾಗೂ ಎಲ್ಲಾ ದೋಷಗಳು ನಿವಾರಣೆಯಾಗಲಿದೆ.
ಇದನ್ನೂ ಓದಿ: ಆಗಸ್ಟ್ನಲ್ಲಿ ಅದೃಷ್ಟದ ಜಾಕ್ಪಾಟ್: ಶ್ರಾವಣದಲ್ಲಿ 2 ರಾಜಯೋಗ, ಈ ರಾಶಿಗಳಿಗಿದು ಸಿರಿ ಸಂಪತ್ತಿನ ಸುರಿಮಳೆ!
Aaradhya is an accomplished content writer with five years of experience specializing in astrology. She possesses extensive expertise in researching, analyzing, and crafting insightful and engaging articles on various astrological topics.