
ಕನ್ನಡ ಮತ್ತು ತೆಲುಗು ಕಿರುತೆರೆಯಲ್ಲಿ ಹೆಸರು ಮಾಡಿದ್ದ ನಟ ಚರಿತ್ ಬಾಳಪ್ಪ ಅವರನ್ನು ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಬಂಧಿಸಲಾಗಿದೆ. ಬೆಂಗಳೂರಿನ ಆರ್.ಆರ್. ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಚರಿತ್ ಬಾಳಪ್ಪ ಅವರು ‘ಮುದ್ದುಲಕ್ಷ್ಮಿ’ ಸೇರಿದಂತೆ ಹಲವು ಜನಪ್ರಿಯ ಕನ್ನಡ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ತನಗೆ ಪರಿಚಯವಿದ್ದ ಯುವತಿಯನ್ನು ಪ್ರೀತಿಸುತ್ತೇನೆ ಎಂದು ಹೇಳಿ ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದಾರೆ ಹಾಗೆಯೆ ಯುವತಿ ವಾಸವಿದ್ದ ಮನೆಗೆ ನುಗ್ಗಿ ಸಹಚರರೊಂದಿಗೆ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಚರಿತ್ ಬಾಳಪ್ಪ ಮೇಲಿದೆ. ಬೆಂಗಳೂರಿನ ಆರ್.ಆರ್. ನಗರ ಪೊಲೀಸರು ಈ ಆರೋಪದ ಆಧಾರದ ಮೇಲೆ ಅವರನ್ನು ಬಂಧಿಸಿದ್ದಾರೆ.
ಈ ದೌರ್ಜನ್ಯದ ಜೊತೆಗೆ, ಚರಿತ್ ಬಾಳಪ್ಪ ಅವರು ಆ ಯುವತಿಯಿಂದ ಹಣವನ್ನು ಬೇಡಿಕೊಂಡಿದ್ದಾರೆ ಮತ್ತು ಹಣ ಕೊಡದಿದ್ದರೆ ಆಕೆಯ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ಎಲ್ಲಾ ಆರೋಪಗಳ ಆಧಾರದ ಮೇಲೆ, ಚರಿತ್ ಬಾಳಪ್ಪ ಅವರ ವಿರುದ್ಧ ಲೈಂಗಿಕ ದೌರ್ಜನ್ಯ, ಕೊಲೆ ಬೆದರಿಕೆ ಮತ್ತು ಹಲ್ಲೆ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ದಾಖಲಿಸಲಾಗಿದೆ. ಬೆಂಗಳೂರಿನ ಆರ್.ಆರ್. ನಗರ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: WhatsApp ನಲ್ಲಿ ಈ ಮೆಸೇಜ್ ಬಂದರೆ ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಬೇಡಿ
ಇದಲ್ಲದೆ, ಚರಿತ್ ಬಾಳಪ್ಪ ಅವರು ಈಗಾಗಲೇ ವಿಚ್ಛೇದಿತರಾಗಿದ್ದು, ತಮ್ಮ ಮಾಜಿ ಪತ್ನಿ ಮಂಜುಶ್ರೀ ಅವರ ವಿರುದ್ಧವೂ ಹಲವು ಆರೋಪಗಳನ್ನು ಮಾಡಿದ್ದಾರೆ. 2024ರ ಜೂನ್ ತಿಂಗಳಲ್ಲಿ ಮಂಜುಶ್ರೀ ಅವರು ಚರಿತ್ ಬಾಳಪ್ಪ ಅವರ ವಿರುದ್ಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಂಜುಶ್ರೀ ಅವರು ಕೋರ್ಟ್ ಆಜ್ಞೆಯಂತೆ ಡಿವೋರ್ಸ್ ಪರಿಹಾರ ಹಣಕ್ಕೆ ನೋಟಿಸ್ ಕಳಿಸಿದ್ದಕ್ಕೆ ಚರಿತ್ ಬಾಳಪ್ಪ ಅವರು ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದರು.
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.