
Uttara Kannada: ಈ ರೀತಿನೂ ಒಂದು ಕೆಲಸ ಇರುತ್ತೆ ಅಂತ ಹಲವು ಜನರಿಗೆ ತಿಳಿದಿಲ್ಲ. ಇದು ಉತ್ತರ ಕನ್ನಡದ ಸಿದ್ದಾಪುರದಲ್ಲಿ ಹುಟ್ಟಿದ ಉದ್ಯೋಗ. ಹಾಗಾದರೆ ಈ ಕೆಲಸ ಯಾವ ರೀತಿ ಇರುತ್ತೆ ಅಂತ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ಮಂಗನ ಕಾಯುವ ಉದ್ಯೋಗ
ಉತ್ತರ ಕನ್ನಡ (Uttara Kannada) ಜಿಲ್ಲೆಯ ಸಿದ್ದಾಪುರದ ಹಳ್ಳಿಗಳಲ್ಲಿ ಹಳ್ಳಿಗೊಬ್ಬರು ಮಂಗನ ಕಾಯುವ ಜನರಿದ್ದಾರೆ . ಹಳ್ಳಿಗಿರುವ 11- 20 ಮನೆಯವರು ತೀರ್ಮಾನ ಮಾಡಿ ಒಬ್ಬ ಗ್ರಾಮಸ್ಥನನ್ನು ಮಂಗನ ಕಾಯುವ ಕೆಲಸಕ್ಕೆ ನೇಮಕ ಮಾಡುತ್ತಾರೆ. ಆ ವ್ಯಕ್ತಿ ಪರವಾನಿಗೆ ಇರುವ ಗನ್ ತೆಗೆದುಕೊಂಡು ತೋಟಗಳಲ್ಲಿ ಮಂಗನನ್ನು ಓಡಿಸುವ ಕೆಲಸ ಮಾಡುತ್ತಾರೆ .
ಮಂಗನ ಕಾಯುವ ಉದ್ಯೋಗದ ಟೈಮಿಂಗ್ ಹೀಗಿರುತ್ತೆ
ಈ ಕೆಲಸ ಬೆಳಿಗ್ಗೆ 6:30 ರಿಂದ ಶುರುವಾಗಿ ಸಂಜೆ 7 ಗಂಟೆ ವರೆಗೆ ಕೆಲಸ ಇರುತ್ತೆ. ಬೆಳಿಗ್ಗೆ ಕೋವಿ ತೆಗೆದುಕೊಂಡು ಬಂದು ಜೋರಾಗಿ ಬಾಯಿ ಮಾಡುತ್ತ ಹೋಗುತ್ತಾರೆ . ಒಮ್ಮೆ ಹಿಂಡಲ್ಲಿ ಮಂಗಗಳು ಬಂದರೆ 50 ರಿಂದ 60 ಮಂಗಗಳು ಬರುತ್ತೆ . ಇವುಗಳ್ಳನು ಓಡಿಸುವುದು ತುಂಬಾ ಕಷ್ಟದ ಕೆಲಸ. ಆದರೆ ಇದನ್ನ ಓಡಿಸೋಕೆ ನ್ಯಾಕ್ ಇರಬೇಕಾಗುತ್ತೆ. ಇದು ಹಳ್ಳಿಯಲ್ಲಿ ಪಳಗಿದವರಿಗೆ ಮಾತ್ರ ಸಾಧ್ಯ.
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.