
- ತಲೆಯ ಮೇಲೆ ಹಲ್ಲಿ ಬಿದ್ದರೆ ಕೋಟ್ಯಾಧಿಪತಿಯಾಗುವ ಯೋಗ
- ದೇಹದ ಮೇಲೆ ಹಲ್ಲಿ ಬೀಳುವುದು ಶುಭ/ಅಶುಭ ಸಂಕೇತಗಳನ್ನು ನೀಡುತ್ತದೆ
- ಬಲಗೈ/ಭುಜದ ಮೇಲೆ ಬಿದ್ದರೆ ಸಂಪತ್ತು, ಗೌರವ ವೃದ್ಧಿ
ಮನೆಯ ಗೋಡೆಗಳ ಮೇಲೆ ಹಲ್ಲಿಗಳು ಓಡಾಡುವುದು ಸಾಮಾನ್ಯ. ಆದರೆ, ಅಕಸ್ಮಾತ್ ಅವು ನಮ್ಮ ದೇಹದ ಮೇಲೆ ಬಿದ್ದರೆ, ಹಲವರು ಗಾಬರಿಗೊಳಗಾಗುತ್ತಾರೆ. ಆದರೆ, ಹಿಂದೂ ಧರ್ಮದ ಶಕುನ ಶಾಸ್ತ್ರದ ಪ್ರಕಾರ, ದೇಹದ ಮೇಲೆ ಹಲ್ಲಿ ಬೀಳುವುದು ಕೇವಲ ಒಂದು ಆಕಸ್ಮಿಕ ಘಟನೆಯಲ್ಲ. ಇದು ನಮ್ಮ ಭವಿಷ್ಯದೊಂದಿಗೆ ನಿಕಟ ಸಂಬಂಧ ಹೊಂದಿದ್ದು, ಶುಭ ಮತ್ತು ಅಶುಭ ಸಂಕೇತಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಯಾವ ಅಂಗದ ಮೇಲೆ ಹಲ್ಲಿ ಬಿದ್ದಿದೆ ಎಂಬುದರ ಮೇಲೆ ಶುಭ-ಅಶುಭ ಫಲಗಳು ನಿರ್ಧಾರವಾಗುತ್ತವೆ.
ಹಲ್ಲಿಯು ನಮ್ಮ ಆಯಸ್ಸನ್ನು ಹೆಚ್ಚಿಸುವುದರಿಂದ ಹಿಡಿದು, ಧನ ಲಾಭ, ವಸ್ತ್ರ ಪ್ರಾಪ್ತಿ ಮತ್ತು ಯಶಸ್ಸನ್ನು ತರುವಂತಹ ಶುಭ ಸೂಚನೆಗಳನ್ನು ನೀಡುತ್ತದೆ. ಹಾಗೆಯೇ, ಕೆಲವೊಮ್ಮೆ ಇದು ಅಶುಭ ಘಟನೆಗಳ ಬಗ್ಗೆಯೂ ಎಚ್ಚರಿಕೆ ನೀಡಬಹುದು. ಹಾಗಾದರೆ, ನಿಮ್ಮ ದೇಹದ ಯಾವ ಭಾಗದ ಮೇಲೆ ಹಲ್ಲಿ ಬಿದ್ದರೆ ಅದೃಷ್ಟ ಒಲಿಯುತ್ತದೆ, ಯಾವ ಭಾಗದ ಮೇಲೆ ಬಿದ್ದರೆ ಎಚ್ಚರಿಕೆ ವಹಿಸಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಹಲ್ಲಿ ಬೀಳುವ ಶುಭ ಮತ್ತು ಅಶುಭ ಸಂಕೇತಗಳು
1. ತಲೆಯ ಮೇಲೆ ಹಲ್ಲಿ ಬಿದ್ದರೆ: ನಿಮ್ಮ ತಲೆಯ ಮೇಲೆ ಹಲ್ಲಿ ಬಿದ್ದರೆ, ಅದನ್ನು ಅತ್ಯಂತ ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ನೀವು ಮುಂದಿನ ದಿನಗಳಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ಪಡೆಯಲಿದ್ದೀರಿ ಎಂಬುದರ ಸೂಚನೆ. ಈ ಶಕುನವು ನಿಮಗೆ ಸಾಕಷ್ಟು ಧನ ಸಂಪತ್ತು ಪ್ರಾಪ್ತಿಯಾಗುತ್ತದೆ ಎಂಬುದನ್ನು ಹೇಳುತ್ತದೆ. ಅಷ್ಟೇ ಅಲ್ಲದೆ, ಸಮಾಜದಲ್ಲಿ ನಿಮ್ಮ ಗೌರವ, ಖ್ಯಾತಿ ಹೆಚ್ಚಾಗಲಿದ್ದು, ಸುಖ ಸಮೃದ್ಧಿಯಿಂದ ಕೂಡಿದ ಜೀವನ ನಿಮ್ಮದಾಗಲಿದೆ. ಕೋಟ್ಯಾಧಿಪತಿಯಾಗುವ ಯೋಗ ಕೂಡಿ ಬರಬಹುದು.
ಇದನ್ನೂ ಓದಿ: ಇನ್ನೇನು 48 ಗಂಟೆಗಳಲ್ಲಿ ನಿಮ್ಮ ಅದೃಷ್ಟ ಖುಲಾಯಿಸಲಿದೆ ಈ 4 ರಾಶಿಗೆ ಸುಖದ ಸುಪ್ಪತ್ತಿಗೆ, ಹಣದ ಸುರಿಮಳೆ!
2. ಭುಜಗಳ ಮೇಲೆ ಹಲ್ಲಿ ಬಿದ್ದರೆ:
- ಬಲ ಭುಜದ ಮೇಲೆ ಹಲ್ಲಿ ಬಿದ್ದರೆ: ಇದು ಅತ್ಯಂತ ಶುಭ ಸಂಕೇತ. ನಿಮ್ಮ ಗೌರವ, ಖ್ಯಾತಿಯಲ್ಲಿ ಹೆಚ್ಚಳವಾಗುತ್ತದೆ ಮತ್ತು ಜೀವನದಲ್ಲಿ ರಾಜರಂತಹ ಸಂತೋಷ, ವೈಭವ ದೊರೆಯಲಿದೆ.
- ಎಡ ಭುಜದ ಮೇಲೆ ಹಲ್ಲಿ ಬಿದ್ದರೆ: ಇದನ್ನು ಶುಭ ಎಂದು ಹೇಳಲಾಗುವುದಿಲ್ಲ. ಇದು ಮುಂದಿನ ದಿನಗಳಲ್ಲಿ ನೀವು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು ಮತ್ತು ಕೆಲವು ಕಷ್ಟಗಳನ್ನು ಎದುರಿಸುವಿರಿ ಎಂಬುದನ್ನು ಸಂಕೇತಿಸುತ್ತದೆ.
3. ಸೊಂಟದ ಮೇಲೆ ಹಲ್ಲಿ ಬಿದ್ದರೆ: ಸೊಂಟದ ಮೇಲೆ ಹಲ್ಲಿ ಬೀಳುವುದು ಶುಭ ಮತ್ತು ಅಶುಭ ಎರಡನ್ನೂ ಪ್ರತಿನಿಧಿಸುತ್ತದೆ.
- ಮಲಗಿದಾಗ ಸೊಂಟದ ಎಡಬದಿಗೆ ಹಲ್ಲಿ ಬಿದ್ದರೆ: ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುವಿರಿ ಎಂಬುದರ ಸೂಚನೆ.
- ಸೊಂಟದ ಮಧ್ಯ ಭಾಗದಲ್ಲಿ ಹಲ್ಲಿ ಬಿದ್ದರೆ: ನಿಮ್ಮ ಮನೆಯಲ್ಲಿ ವಾದ ವಿವಾದಗಳು ಉಂಟಾಗುವ ಸಾಧ್ಯತೆ ಇದೆ.
- ಸೊಂಟದ ಬಲ ಬದಿಗೆ ಹಲ್ಲಿ ಬಿದ್ದರೆ: ಇದು ಸಾಕಷ್ಟು ಶುಭವಾಗಿದ್ದು, ಜೀವನದಲ್ಲಿ ಸಂತೋಷವನ್ನು ಹೊಂದುವಿರಿ ಮತ್ತು ಅತ್ಯಂತ ಹೆಚ್ಚಿನ ಧನ ಲಾಭವಾಗುವ ಸಂಭವವಿದೆ.
4. ಕಾಲುಗಳ ಮೇಲೆ ಹಲ್ಲಿ ಬಿದ್ದರೆ:
- ಬಲಗಾಲಿನ ಮೇಲೆ ಹಲ್ಲಿ ಬಿದ್ದರೆ: ನೀವು ಶೀಘ್ರದಲ್ಲಿಯೇ ಪ್ರಯಾಣ ಮಾಡುವ ಯೋಗವನ್ನು ಪಡೆಯಲಿದ್ದೀರಿ ಎಂಬುದನ್ನು ಅರ್ಥೈಸುತ್ತದೆ. ಈ ಪ್ರಯಾಣವು ಕೆಲಸಕ್ಕೆ ಸಂಬಂಧಿಸಿದಂತೆ ಆಗಿರಬಹುದು ಅಥವಾ ಯಾವುದಾದರೂ ಶುಭ ಕಾರ್ಯದಲ್ಲಿ ಭಾಗವಹಿಸಲು ಆಗಿರಬಹುದು.
- ಎಡಗಾಲಿನ ಮೇಲೆ ಹಲ್ಲಿ ಬಿದ್ದರೆ: ಇದು ಶುಭ ಸಂಕೇತವಲ್ಲ. ಇದರಿಂದಾಗಿ ನೀವು ಭವಿಷ್ಯದಲ್ಲಿ ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು ಅಥವಾ ಮನೆಯಲ್ಲಿ ಮನಸ್ತಾಪಗಳು ಉಂಟಾಗುವ ಸಂಭವವಿದೆ.
- ಕಾಲಿನ ಬೆರಳುಗಳ ಮೇಲೆ ಹಲ್ಲಿ ಬಿದ್ದರೆ: ಇದು ಸಹ ನೀವು ಪ್ರಯಾಣಿಸುವ ಯೋಗವನ್ನು ಪಡೆಯಲಿದ್ದೀರಿ ಎಂಬುದನ್ನು ಪ್ರತಿನಿಧಿಸುತ್ತದೆ.
5. ಕೈಗಳ ಮೇಲೆ ಹಲ್ಲಿ ಬಿದ್ದರೆ:
- ಬಲಗೈ ಮೇಲೆ ಹಲ್ಲಿ ಬಿದ್ದರೆ: ನಿಮ್ಮ ಜೀವನದಲ್ಲಿ ಸಾಕಷ್ಟು ಶುಭವಾಗಲಿದೆ. ಅತ್ಯಂತ ಹೆಚ್ಚಿನ ಧನ ಲಾಭವನ್ನು ಪಡೆಯಲಿದ್ದೀರಿ. ಮನೆಯ ಆರ್ಥಿಕ ಸ್ಥಿತಿ ಸಾಕಷ್ಟು ಬಲಗೊಳ್ಳುವುದು ಮತ್ತು ಸುಖ, ಸಮೃದ್ಧಿಯಲ್ಲಿ ಅತ್ಯಂತ ಹೆಚ್ಚಿನ ಹೆಚ್ಚಳವಾಗಲಿದೆ.
- ಎಡಗೈ ಮೇಲೆ ಹಲ್ಲಿ ಬಿದ್ದರೆ: ಇದು ಶುಭ ಸಂಕೇತವಲ್ಲ. ಇದರ ಅರ್ಥ ನೀವು ಮುಂದಿನ ದಿನಗಳಲ್ಲಿ ಹಣದ ಕೊರತೆ ಅಥವಾ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು. ಹಾಗಾಗಿ ನೀವು ಹೆಚ್ಚಿನ ಕಾಳಜಿಯನ್ನು ವಹಿಸುವುದು ಉತ್ತಮ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಶಕುನ ಶಾಸ್ತ್ರ, ಸಾಮಾನ್ಯ ನಂಬಿಕೆಗಳು ಮತ್ತು ಜ್ಯೋತಿಷ್ಯ ತಜ್ಞರ ಅಭಿಪ್ರಾಯಗಳನ್ನು ಆಧರಿಸಿದೆ)
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.