
- ಜೂನ್ 7, 2025 ರಂದು ಸಿಂಹ ರಾಶಿಗೆ ಮಂಗಳನ ಪ್ರವೇಶ
- ವೃತ್ತಿ ಪ್ರಗತಿ, ಧನಲಾಭ, ಕುಟುಂಬದಲ್ಲಿ ಸುಖ-ಸಂತೋಷ ವೃದ್ಧಿ
- ಆರ್ಥಿಕ ಸ್ಥಿತಿ ಬಲವರ್ಧನೆ, ಹೂಡಿಕೆಯಿಂದ ಲಾಭ
ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳ ಗ್ರಹವನ್ನು ‘ಗ್ರಹಗಳ ಸೇನಾಧಿಪತಿ’ ಎಂದು ಕರೆಯಲಾಗುತ್ತದೆ. ಧೈರ್ಯ, ಶಕ್ತಿ, ಸಾಹಸ ಮತ್ತು ನಾಯಕತ್ವದ ಕಾರಕನಾದ ಮಂಗಳನ ಚಲನೆಯು ನಮ್ಮ ಜೀವನದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಇದೀಗ, ಮಂಗಳ ಗ್ರಹವು ತನ್ನ ನೀಚ ರಾಶಿಯಿಂದ ಹೊರಬಂದು ಸಿಂಹ ರಾಶಿಯನ್ನು ಪ್ರವೇಶಿಸುತ್ತಿದ್ದು, ಇದು ಕೆಲವು ಅದೃಷ್ಟವಂತ ರಾಶಿಗಳ ಪಾಲಿಗೆ ಸುವರ್ಣ ಸಮಯವನ್ನು ತರಲಿದೆ.
ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಮಂಗಳ ಗ್ರಹವು ಜೂನ್ 7, 2025 ರಂದು (ನಾಳೆ) ಕಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶಿಸಲಿದೆ. ಸಿಂಹ ರಾಶಿಯು ಸೂರ್ಯನ ಅಧಿಪತ್ಯದಲ್ಲಿದ್ದು, ಮಂಗಳನಿಗೆ ಇಲ್ಲಿ ಹೆಚ್ಚಿನ ಬಲ ಸಿಗುತ್ತದೆ. ಮಂಗಳನ ಈ ರಾಶಿ ಬದಲಾವಣೆಯು ಕೆಲವು ರಾಶಿಯ ಜನರ ಜೀವನದಲ್ಲಿ ಅತ್ಯಂತ ಹೆಚ್ಚಿನ ಶುಭ ಫಲಗಳನ್ನು ನೀಡಲಿದೆ. ವಿಶೇಷವಾಗಿ ವೃತ್ತಿ, ಸಾಮಾಜಿಕ ಜೀವನ, ಆರೋಗ್ಯ ಮತ್ತು ಆರ್ಥಿಕ ವಿಷಯಗಳಲ್ಲಿ ಈ ರಾಶಿಯವರು ಅಪಾರ ಲಾಭ ಪಡೆಯಲಿದ್ದಾರೆ. ಹೆಜ್ಜೆ ಹೆಜ್ಜೆಗೂ ಯಶಸ್ಸು ಸಿಗಲಿದ್ದು, ಕುಬೇರ ಸಂಪತ್ತಿನ ಹರಿವು ಉಂಟಾಗಲಿದೆ.
ಮಿಥುನ ರಾಶಿ (Gemini): ಮಂಗಳ ಗ್ರಹದ ಸಂಚಾರವು ಮಿಥುನ ರಾಶಿಯ ಜನರ ಜಾತಕದ ಮೂರನೇ ಮನೆಯಲ್ಲಿ ಸಂಭವಿಸಲಿದೆ. ಮೂರನೇ ಮನೆಯು ಧೈರ್ಯ, ಸಾಹಸ ಮತ್ತು ಸಂವಹನಕ್ಕೆ ಸಂಬಂಧಿಸಿದೆ. ಮಂಗಳನ ಈ ಸಂಚಾರದಿಂದ ನಿಮ್ಮ ಸಾಹಸ ಮತ್ತು ಪರಾಕ್ರಮದಲ್ಲಿ ಹೆಚ್ಚಿನ ವೃದ್ಧಿಯಾಗಲಿದೆ. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಮಿಥುನ ರಾಶಿಯ ಜನರಿಗೆ ಈ ಸಮಯದಲ್ಲಿ ಉತ್ತಮ ಫಲಿತಾಂಶ ದೊರಕುವ ಯೋಗ ಲಭಿಸಲಿದೆ. ಕುಟುಂಬ ಜೀವನದಲ್ಲಿ ನೀವು ನಿಮ್ಮ ಸಹೋದರ-ಸಹೋದರಿಯರ ಸಂಪೂರ್ಣ ಬೆಂಬಲ ಪಡೆಯುವಿರಿ. ಅದೃಷ್ಟದ ಬೆಂಬಲದಿಂದ ನೀವು ಅಪಾರ ಸುಖ ಸಂಪತ್ತು ಗಳಿಸುತ್ತೀರಿ, ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ.
ವೃಶ್ಚಿಕ ರಾಶಿ (Scorpio): ಮಂಗಳ ಗ್ರಹವು ವೃಶ್ಚಿಕ ರಾಶಿಯ ಹತ್ತನೇ ಮನೆಯಲ್ಲಿ ಚಲಿಸಲಿದೆ. ಹತ್ತನೇ ಮನೆಯು ವೃತ್ತಿ ಮತ್ತು ಕರ್ಮಕ್ಕೆ ಸಂಬಂಧಿಸಿದ್ದು, ಇಲ್ಲಿ ಮಂಗಳನ ಚಲನೆಗೆ ಇನ್ನಷ್ಟು ಹೆಚ್ಚಿನ ಬಲ ದೊರಕಲಿದೆ. ಹೀಗಾಗಿ ಮಂಗಳ ಗ್ರಹದ ಈ ರಾಶಿ ಪರಿವರ್ತನೆಯು ನಿಮಗೆ ಬಹಳ ವಿಶೇಷವಾಗಿರಲಿದೆ. ಈ ಅವಧಿಯಲ್ಲಿ ನಿಮ್ಮ ವೃತ್ತಿ ಜೀವನದಲ್ಲಿ ಉತ್ತಮ ಬದಲಾವಣೆ ಹೊಂದುವಿರಿ. ವೃಶ್ಚಿಕ ರಾಶಿಯ ಜನರಿಗೆ ಉನ್ನತ ಪದವಿ ದೊರಕುವ ಯೋಗ ಲಭಿಸುವುದು. ಅದೇ ರೀತಿ ಈ ಸಮಯದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ. ತಂದೆ-ತಾಯಿ ಜೊತೆಗಿನ ಸಂಬಂಧದಲ್ಲಿ ನೀವು ಸಾಕಷ್ಟು ಸುಧಾರಣೆ ಕಾಣುತ್ತೀರಿ. ಅದೃಷ್ಟದ ಬೆಂಬಲದಿಂದ ನಿಮ್ಮ ಎಲ್ಲಾ ಸಂಕಷ್ಟಗಳು ದೂರವಾಗಿ ನೀವು ಆರ್ಥಿಕವಾಗಿ ಪ್ರಗತಿ ಹೊಂದುತ್ತೀರಿ.
ಇದನ್ನೂ ಓದಿ: ಗುರುವಿನ ಅಸ್ತದಿಂದ ನಿಮ್ಮ ಅದೃಷ್ಟ ತೆರೆಯಲಿದೆ: ಈ 5 ರಾಶಿಗೆ ಭಾರೀ ಸುಖ-ಸಮೃದ್ಧಿ! ಬದುಕು ಬಂಗಾರ
ಮೀನ ರಾಶಿ (Pisces): ಮೀನ ರಾಶಿಯ ಜನರಿಗೆ ಮಂಗಳನ ಈ ರಾಶಿ ಪರಿವರ್ತನೆಯ ಸಾಕಷ್ಟು ಸುಖ-ಸಂತೋಷಗಳನ್ನ ನೀಡಲಿದೆ. ಈ ಅವಧಿಯಲ್ಲಿ ನಿಮ್ಮ ವಿರೋಧಿಗಳು ನಿಮಗೆ ತೊಂದರೆ ನೀಡಲು ಪ್ರಯತ್ನಿಸಿದರೂ, ನೀವು ನಿಮ್ಮ ಬುದ್ಧಿವಂತಿಕೆಯಿಂದ ಅವರನ್ನು ನಿಭಾಯಿಸುತ್ತೀರಿ. ಈ ಸಮಯದಲ್ಲಿ ನೀವು ಯಾವುದೇ ಕೆಲಸ ಮಾಡಿದರೂ, ಪೂರ್ತಿ ಜವಾಬ್ದಾರಿಯಿಂದ ಮಾಡಬೇಕು. ಇದರಿಂದ ನಿಮ್ಮ ಮೇಲಿನ ನಂಬಿಕೆ ಜನರಲ್ಲಿ ಇನ್ನಷ್ಟು ಹೆಚ್ಚಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ ಈ ಅವಧಿಯಲ್ಲಿ ನಿಮಗೆ ಯಶಸ್ಸು ಸಿಗಲಿದೆ. ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಉತ್ತಮ. ಅದೃಷ್ಟದ ಬೆಂಬಲದಿಂದ ನೀವು ಅಪಾರ ಸುಖ-ಸಂಪತ್ತು ಗಳಿಸುತ್ತೀರಿ.
ಮೇಷ ರಾಶಿ (Aries): ಮಂಗಳ ಗ್ರಹವು ಮೇಷ ರಾಶಿಯ ಅಧಿಪತಿ. ಸಿಂಹ ರಾಶಿಯಲ್ಲಿ ಮಂಗಳನ ಚಲನೆಯು ಮೇಷ ರಾಶಿಯ ಜನರ ಜಾತಕದ ನಾಲ್ಕನೇ ಮನೆಯಿಂದ ಹೊರಬಂದು ಐದನೇ ಮನೆಯಲ್ಲಿ ಸಂಭವಿಸಲಿದೆ. ಇದು ನಿಮ್ಮ ಜೀವನದಲ್ಲಿ ಹಲವು ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಶುಭ ಫಲಗಳು ದೊರೆಯಲಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಯಶಸ್ಸು ಕಾಣುವಿರಿ. ವೃತ್ತಿ ಜೀವನದಲ್ಲಿ ನಾಯಕತ್ವ ವಹಿಸುವ ಉತ್ತಮ ಅವಕಾಶ ದೊರಕಲಿದ್ದು, ನಿಮ್ಮ ಸಾಮರ್ಥ್ಯಕ್ಕೆ ಮನ್ನಣೆ ಸಿಗಲಿದೆ. ಈ ಅವಧಿಯಲ್ಲಿ ನಿಮ್ಮ ಹಲವು ಆಸೆಗಳು ಈಡೇರಲಿದ್ದು, ಅಂದುಕೊಂಡ ಗುರಿಯನ್ನು ತಲುಪುತ್ತೀರಿ. ನಿಮ್ಮ ಪ್ರೇಮ ಜೀವನ ಮತ್ತಷ್ಟು ಸುಖಕರವಾಗಿರುತ್ತದೆ.
(ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ)